Sunday, August 3, 2025
Homeರಾಜ್ಯನಾಳೆ ಗಜಪಯಣಕ್ಕೆ ಚಾಲನೆ

ನಾಳೆ ಗಜಪಯಣಕ್ಕೆ ಚಾಲನೆ

Gajapayana to be launched tomorrow

ಹುಣಸೂರು, ಆ.3– ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಾಳೆ ನಡೆಯಲಿರುವ ಗಜಪಯಣಕ್ಕೆ ತಾಲ್ಲೂಕಿನ ವೀರನಹೊಸಳ್ಳಿ ಬಳಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ದಸರಾ ಕಾರ್ಯಕ್ರಮದಲ್ಲಿ ಗಜಪಯಣ ಮುಖ್ಯವಾಗಿದ್ದು, ಗಜಪಯಣಚಾಲನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಈಶ್ವರ್‌ ಖಂಡ್ರೆ,ಮಹದೇವಪ್ಪ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದು, ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ.

ವೀರನಹೊಸಳ್ಳಿ ವಲಯದ ನಾಗರಹೊಳೆ ಪ್ರವೇಶದ್ವಾರದ ಬಳಿ ಗಜಪಯಣಕ್ಕೆ ನಾಳೆ ಚಾಲನೆ ನೀಡಿ ಮೊದಲ ತಂಡದಲ್ಲಿ 9 ಆನೆಗಳು ಲಾರಿ ಮುಖಾಂತರ ಅರಮನೆ ನಗರಿ ಸೇರಲಿವೆ.ಗಜಪಡೆಗೆ ಸಾಂಪ್ರದಾಯಿಕವಾಗಿ ಮೈಸೂರಿನ ಪುರೋಹಿತರಾದ ಪ್ರಹ್ಲಾದ್‌ ಮತ್ತು ತಂಡದವರು ಪೂಜೆ ಸಲ್ಲಿಸಲಿದ್ದು, ಕಾವಾಡಿಗರು, ಮಾವುತರು ಹಾಗೂ ಕುಟುಂಬದವರು ಸಹ ಅರಮನೆಯತ್ತ ತೆರಳಲಿದ್ದಾರೆ.

ಅರಮನೆ ಆವರಣದಲ್ಲಿ ತಾತ್ಕಾಲಿಕ ವಾಸ್ತವ್ಯಕ್ಕೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಆನೆಗಳನ್ನು ಸಾಗಿಸುವ ಲಾರಿಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಸೂಚನೆ ನೀಡಲಾಗಿದೆ.

ಅರಣ್ಯಾಧಿಕಾರಿಗಳು ಈಗಾಗಲೇ ವೀರನಹೊಸಳ್ಳಿಯಲ್ಲಿ ಬೀಡು ಬಿಟ್ಟಿದ್ದು, ಮಾವುತರು, ಕಾವಾಡಿಗರು ಆನೆಗಳಿಗೆ ಮಜ್ಜನ ಮಾಡಿಸಿ ಶೃಂಗಾರ ಮಾಡಿಕೊಂಡು ಪಯಣಕ್ಕೆ ಸಿದ್ಧತೆ ನಡೆಸಿದ್ದಾರೆ.ನಾಳೆ ಬೆಳಗ್ಗೆ ಶಾಸೊ್ತ್ರೕಕ್ತವಾಗಿ ಪೂಜೆ ಸಲ್ಲಿಸುತ್ತಿದ್ದಂತೆ ವಿದ್ಯುಕ್ತವಾಗಿ ಗಜಪಯಣಕ್ಕೆ ಚಾಲನೆ ದೊರೆಯಲಿದ್ದು, ಲಾರಿಗಳಲ್ಲಿ ಮೊದಲ ತಂಡದ 9 ಆನೆಗಳು ತೆರಳಲಿವೆ.

RELATED ARTICLES

Latest News