ಶೂ ಧರಿಸಿ ಗಜಪಡೆ ಪೂಜೆ, ಅರಣ್ಯ ಸಚಿವ ಉಮೇಶ್ ಕತ್ತಿ ಎಡವಟ್ಟು

ಮೈಸೂರು,ಆ.7- ಗಜಪಡೆ ಪೂಜೆ ವೇಳೆ ಅರಣ್ಯ ಸಚಿವ ಉಮೇಶ್ ಕತ್ತಿ ಎಡವಟ್ಟು ಮಾಡಿದ್ದಾರೆ. ಗಜಪಡೆಗೆ ಪೂಜೆ ಸಲ್ಲಿಸುವ ವೇಳೆ ಸಚಿವರು ಶೂ ಧರಿಸಿದ್ದು, ಇದೀಗ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಬೆಳಗ್ಗೆ ಗಜಪಡೆಯ ಪಯಣಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇತರೆ ಗಣ್ಯರು ಬರಿಗಾಲಲ್ಲಿ ಬಂದಿದ್ದರೆ, ಸಚಿವ ಉಮೇಶ್ ಕತ್ತಿ ಮಾತ್ರ ಶೂ ಧರಿಸಿ ಪೂಜೆ ಸಲ್ಲಿಸಿದರು. ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವಾಗ ಚಪ್ಪಲಿ, ಶೂ ಧರಿಸುವುದಿಲ್ಲ. ಆದರೆ, ಉಮೇಶ್ ಕತ್ತಿ ಎಲ್ಲವನ್ನೂ ಮರೆತು ಶೂ ಧರಿಸಿ ಪೂಜೆ […]

ನಾಡಹಬ್ಬ ದಸರಾ ಗಜಪಯಣಕ್ಕೆ ಚಾಲನೆ

ಮೈಸೂರು, ಆ.7- ನಾಡಹಬ್ಬ ಮೈಸೂರು ದಸರಾ2022ಕ್ಕೆ ಮುನ್ನುಡಿ ಬರೆಯುವ ಗಜಪಯಣಕ್ಕೆ ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ಚಾಲನೆ ನೀಡಿದರು. ಜಿಲ್ಲಾಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗ್ರಾಮದಲ್ಲಿ ಬೆಳಗ್ಗೆ 9.01ರಿಂದ 9.35ರ ಕನ್ಯಾ ಲಗ್ನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಯಿತು. ಅಭಿಮನ್ಯು, ಅರ್ಜುನ, ಧನಂಜಯ, ಮಹೇಂದ್ರ, ಭೀಮ, ಚೈತ್ರಾ, ಗೋಪಾಲಸ್ವಾಮಿ, ಕಾವೇರಿ, ಲಕ್ಷ್ಮೀ ಆನೆಗಳಿಗೆ ಪುಷ್ಪಾರ್ಚನೆ ಮಾಡಿ, ಫಲತಾಂಬೂಲ ನೀಡಿ ಪಯಣ ಆರಂಭಿಸಲಾಯಿತು. ಬೆಳ್ಳಂಬೆಳಗ್ಗೆ […]