ನವದೆಹಲಿ,ಅ.2 (ಪಿಟಿಐ)- ಗಾಂಧಿಯ ಚಿಹ್ನೆಗಳನ್ನು ಅಳವಡಿಸಿಕೊಳ್ಳುವ ಮತ್ತು ಅವರ ಪರಂಪರೆಯನ್ನು ಜಗತ್ತಿಗೆ ಪ್ರಸ್ತುತಪಡಿಸುವವರ ಸಂಪೂರ್ಣ ಬೂಟಾಟಿಕೆಯನ್ನು ಬಹಿರಂಗಪಡಿಸಲು ಕಾಂಗ್ರೆಸ್ ಪ್ರತಿಜ್ಞೆ ಮಾಡಿದೆ. ಗಾಂಧಿ ಅವರ ತತ್ವ ಮತ್ತು ಆದರ್ಶ ಮತ್ತು ಮೌಲ್ಯಗಳನ್ನು ಎತ್ತಿಹಿಡಿಯಲು ಕೆಲವರು ಸಿದ್ಧರಿಲ್ಲ ಎಂದು ಕಾಂಗ್ರೆಸಿಗರು ಪರೋಕ್ಷವಾಗಿ ಬಿಜೆಪಿ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.
ಮಹಾತ್ಮ ಗಾಂಧಿಜಿಯವರ ಜನ್ಮದಿನದಂದು ರಾಜ್‍ಘಾಟ್‍ನಲ್ಲಿರುವ ಗಾಂಧಿ ಸ್ಮಾರಕಕ್ಕೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಕೇವಲ ವ್ಯಕ್ತಿಯಲ್ಲ, ಅವರು ಈ ದೇಶದ ಸಿದ್ಧಾಂತ ಮತ್ತು ನೈತಿಕ ದಿಕ್ಸೂಚಿ ಎಂದು ಶ್ಲಾಸಿದರು. ನಂತರ ಎಕ್ಸ್‍ನಲ್ಲಿನ ಪೋಸ್ಟ್‍ನಲ್ಲಿ, ಮಹಾತ್ಮ ಗಾಂಧಿ ಜಿ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ನಮ್ಮ ಮಹಾನ್ ರಾಷ್ಟ್ರದ ಒಂದು ಕಲ್ಪನೆ, ಸಿದ್ಧಾಂತ ಮತ್ತು ನೈತಿಕ ದಿಕ್ಸೂಚಿ ಎಂದು ಬಣ್ಣಿಸಿದ್ದಾರೆ.
ಆಸ್ಪತ್ರೆಗೆ ಡೋಲಿಯಲ್ಲಿ ಸಾಗಿಸುತ್ತಿದ್ದ ಮಹಿಳೆಗೆ ದಾರಿಯಲ್ಲೇ ಹೆರಿಗೆ
ಅವರ ಆದರ್ಶಗಳಾದ ಸತ್ಯ, ಅಹಿಂಸೆ, ಸ್ವಾತಂತ್ರ್ಯ, ಸಮಾನತೆ ಮತ್ತು ಸಹಬಾಳ್ವೆಗೆ ಶಾಶ್ವತ ಮೌಲ್ಯವಿದೆ, ಬಾಪು ಅವರ ಜಯಂತಿಯಂದು ಅವರ ಆದರ್ಶಗಳಿಗೆ ನಾವು ಗೌರವ ಸಲ್ಲಿಸುತ್ತೇವೆ ಎಂದು ಖರ್ಗೆ ಹೇಳಿದರು. ಎಕ್ಸ್‍ನಲ್ಲಿ ಹಿಂದಿಯಲ್ಲಿ ಬರೆದ ಪೋಸ್ಟ್‍ನಲ್ಲಿ, ರಾಹುಲ್ ಗಾಂಧಿ ಅವರು ಮಹಾತ್ಮ ಗಾಂಧಿ ಅವರನ್ನು ಜನರಿಗೆ ಸತ್ಯ, ಅಹಿಂಸೆ, ಸೌಹಾರ್ದತೆ ಮತ್ತು ಅಖಂಡ ಭಾರತದ ಮಾರ್ಗವನ್ನು ತೋರಿಸಿದ ವ್ಯಕ್ತಿ ಎಂದು ಸ್ಮರಿಸಿಕೊಂಡಿದ್ದಾರೆ.