Saturday, September 14, 2024
Homeಬೆಂಗಳೂರುದುಬಾರಿ ಬೆಲೆಯ ಸೀರೆಗಳನ್ನು ಕದಿಯುತ್ತಿದ್ದ ನೀರೆಯರ ಗ್ಯಾಂಗ್ ಅರೆಸ್ಟ್

ದುಬಾರಿ ಬೆಲೆಯ ಸೀರೆಗಳನ್ನು ಕದಿಯುತ್ತಿದ್ದ ನೀರೆಯರ ಗ್ಯಾಂಗ್ ಅರೆಸ್ಟ್

Gang of women who were stealing expensive sarees arrested

ಬೆಂಗಳೂರು, ಸೆ.3– ಅಂಗಡಿಯವರ ಗಮನ ಬೇರೆಡೆ ಸೆಳೆದು ಲಕ್ಷಾಂತರ ಬೆಲೆಯ ಸೀರೆಗಳನ್ನು ಕಳ್ಳತನ ಮಾಡುತ್ತಿದ್ದ ಆಂಧ್ರ ಪ್ರದೇಶದ ನಾಲ್ವರು ಕಳ್ಳಿಯರ ಗ್ಯಾಂಗ್ನ್ನು ಬಂಧಿಸಿರುವ ಜೆ.ಪಿ.ನಗರ ಠಾಣೆ ಪೊಲೀಸರು 17.5 ಲಕ್ಷ ಬೆಲೆ ಬಾಳುವ 38 ರೇಷೆ ಸೀರೆಗಳ ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ಕೃಷ್ಣಗಿರಿಯ ಜಿಲ್ಲೆಯ ಕೋಡಂಪಲ್ಲಿ ನಿವಾಸಿಗಳಾದ ಜಾನಕಿ, ಪೊನ್ನೂರು ಮಲ್ಲಿ, ಮೇದ ರಜಿನಿ ಮತ್ತು ವೆಂಕಟೇಶ್ವರಮ ಬಂಧಿತ ಆರೋಪಿತೆಯರು.ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸಿಲ್ಕ್ ಹೌಸ್ವೊಂದಕ್ಕೆ ಗ್ರಾಹಕರಂತೆ ಸೀರೆಗಳನ್ನು ಖರೀದಿಸುವ ನೆಪದಲ್ಲಿ ಆರು ಮಂದಿಯ ಮಹಿಳಾ ಗ್ಯಾಂಗ್ ಅಂಗಡಿಗೆ ಪ್ರವೇಶಿಸಿದೆ.

ಅಂಗಡಿಯಲ್ಲಿ ಸೇಲ್‌್ಸ ಕೆಲಸ ನಿರ್ವಹಿಸುತ್ತಿದ್ದವರು ಬಂದ ಗ್ರಾಹಕರಿಗೆ ವಿವಿಧ ಶ್ರೇಣಿಯ, ವಿವಿಧ ಬಗೆಯ ಹಲವಾರು ರೇಷ್ಮೆಸೀರೆಗಳನ್ನು ತೋರಿಸುತ್ತಿದ್ದರು.ಆ ವೇಳೆ ಈ ಮಹಿಳಾ ಗ್ಯಾಂಗ್ ರೇಷ್ಮೆ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳುವ ನೆಪದಲ್ಲಿ ಅಂಗಡಿಯ ಮಾಲೀಕರು ಹಾಗೂ ಇತರೆಕೆಲಸಗಾರರ ಗಮನವನ್ನು ಬೇರೆಡೆ ಸೆಳೆದಿದ್ದಾರೆ.

ಆರು ಮಹಿಳೆಯರ ಪೈಕಿ ಇಬ್ಬರು ಮಹಿಳೆಯರು ಅವರು ಧರಿಸಿದ್ದಸೀರೆಯ ಪೆಟ್ಟಿಕೋಟ್ನಲ್ಲಿ ಅಳವಡಿಸಿದ್ದ ಜಿಪ್ ಪಾಕೆಟ್ ಒಳಗೆ ಲಕ್ಷಾಂತರ ಬೆಲೆಬಾಳುವ 8 ರೇಷ್ಮೆ ಸೀರೆಗಳನ್ನು ಅಡಗಿಸಿಟ್ಟುಕೊಂಡು ಅಂಗಡಿಯಿಂದ ಪರಾರಿಯಾಗಿದ್ದಾರೆ.

ಉಳಿದ ನಾಲ್ವರು ಮಹಿಳೆಯರು ಅಂಗಡಿಯಲ್ಲೇ ಉಳಿದು ಇತರೆ ರೇಷ್ಮೆ ಸೀರೆಗಳನ್ನು ಆಯ್ಕೆ ಮಾಡುವಂತೆ ನಟಿಸುತ್ತಾ, ಮತ್ತೊಮೆ ಅಂಗಡಿಯಲ್ಲಿದ್ದ ಮಾಲೀಕರು ಮತ್ತು ಕೆಲಸಗಾರರ ಗಮನ ಬೇರೆಡೆ ಸೆಳೆದು, ಈ ನಾಲ್ವರು ಮಹಿಳೆಯರು 10 ರೇಷ್ಮೆ ಸೀರೆಗಳನ್ನು ಅವರು ಧರಿಸಿದ್ದ ಸೀರೆಯೊಳಗೆ ಅಡಗಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.

ಆ ವೇಳೆ ಅಂಗಡಿಯಲ್ಲಿದ್ದ ಮಾಲೀಕರು ಮಹಿಳೆಯರ ಮೇಲೆ ಸಂಶಯಗೊಂಡು, ಕೂಡಲೆ ಇತರೆ ಸಿಬ್ಬಂದಿಯೊಂದಿಗೆ ಆ ಮಹಿಳೆಯರನ್ನು ಅಂಗಡಿಯಲ್ಲಿಯೇ ತಡೆದು ಪರಿಶೀಲಿಸಿದಾಗ, 10 ರೇಷ್ಮೆ ಸೀರೆಗಳನ್ನು ಕಳವು ಮಾಡಿರುವುದು ಗೊತ್ತಾಗಿ ವಶಪಡಿಸಿಕೊಂಡು ತಕ್ಷಣ ಹೊಯ್ಸಳ-112 ಗೆ ಕರೆ ಮಾಡಿ ತಿಳಿಸಿರುತ್ತಾರೆ.

ಜೆ.ಪಿ.ನಗರ ಪೊಲೀಸ್ ಠಾಣೆಯ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದು ಈ ನಾಲ್ವರು ಮಹಿಳೆಯರನ್ನು 10 ರೇಷ್ಮೆ ಸೀರೆಗಳ ಸಮೇತ ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು, ನಾಲ್ವರನ್ನು ವಿಚಾರಣೆಗೊಳಪಡಿಸಿ, ತಲೆ ಮರೆಸಿಕೊಂಡಿರುವ ಮತ್ತಿಬ್ಬರು ಮಹಿಳೆಯರ ಪತ್ತೆಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ನಾಲ್ವರು ಆರೋಪಿತೆಯರನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಈ ಹಿಂದೆ ಮತ್ತೊಂದು ಸಿಲ್‌್ಕಹೌಸ್ನಲ್ಲಿ 10ರೇಷ್ಮೆ ಸೀರೆಗಳನ್ನು ಕಳವು ಮಾಡಿರುವುದಾಗಿ ಹಾಗೂ ಜಯನಗರದ ಒಂದು ಸಿಲ್‌್ಕಹೌಸ್ನಲ್ಲಿ 10 ರೇಷ್ಮೆ ಸೀರೆಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ.

ಕಳವು ಮಾಡಿದ ರೇಷ್ಮೆ ಸೀರೆಗಳನ್ನು ಕೋರಮಂಗಲದಲ್ಲಿ ವಾಸವಿರುವ ಆರೋಪಿತೆಯರ ಸ್ನೇಹಿತನಿಗೆ ನೀಡಿರುವುದಾಗಿ ಹೇಳಿದ್ದಾರೆ. ಇವರ ಮಾಹಿತಿ ಮೇರೆಗೆ 28 ರೇಷ್ಮೆ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಒಟ್ಟಾರೆಯಾಗಿ 38 ದುಬಾರಿ ಬೆಲೆಯ ರೇಷ್ಮೆ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮೌಲ್ಯ17,50,000ರೂಗಳೆಂದು ಅಂದಾಜಿಸಲಾಗಿದೆ. ಇನ್‌್ಸಪೆಕ್ಟರ್ ರಾಧಾಕೃಷ್ಣ ಮತ್ತು ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

RELATED ARTICLES

Latest News