Friday, December 13, 2024
Homeಮನರಂಜನೆರಾಜ್ಯದೆಲ್ಲೆಡೆ 'ಗರಡಿ' ಚಿತ್ರ ಯಶಸ್ವಿ ಪ್ರದರ್ಶನ

ರಾಜ್ಯದೆಲ್ಲೆಡೆ ‘ಗರಡಿ’ ಚಿತ್ರ ಯಶಸ್ವಿ ಪ್ರದರ್ಶನ

ಊರಿಗೆ ನ್ಯಾಯಾ ಒದಗಿಸುವ ಗರಡಿ ಮನೆ. ಅಲ್ಲಿ ಯಾರೇ ನ್ಯಾಯ ಕೇಳಿ ಬಂದರು ಸದಾ ನಿಲ್ಲುವ ನ್ಯಾಯಸ್ಥಾನ. ಇದರ ಮುಖ್ಯಸ್ಥ ಕೊರೋಫಟ್ ರಂಗಪ್ಪ. ನ್ಯಾಯ, ನೀತಿ, ಧರ್ಮ ಪಾಲನೆ ಇವನ ರಕ್ತದಲ್ಲಿ ಬಂದಿರುತ್ತದೆ. ಅನ್ಯಾಯವನ್ನು ಎಂದಿಗೂ ಸಹಿಸುವುದಿಲ್ಲ. ಆದರೆ ಇವನ ದೌರ್ಬಲ್ಯವೆಂದರೆ ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯದೆ ತೀರ್ಪು ಕೊಡುವುದು. ಈ ಮನಸ್ಥಿತಿಯ ಕೆಲವೊಂದು ಅವಾಂತರಗಳಿಗೆ ಕಾರಣವಾಗುತ್ತದೆ. ಅವಾಂತರಗಳೇ ಗರಡಿಮನೆಯ ಕಥಾವಸ್ತುವಿನ ತಿರುವುಗುಗಳು. ಇದು ಈ ವಾರ ತೆರೆಕಂಡು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಗರಡಿ ಚಿತ್ರದ ಪರಿಚಯ.

ಕನ್ನಡ ಮಣ್ಣಿನ ಪುರಾತನ ಕ್ರೀಡೆ ಗರಡಿ. ಇದನ್ನೇ ಚಿತ್ರದ ಕಥೆಯನ್ನಾಗಿ ಆಯ್ದುಕೊಂಡ ನಿರ್ದೇಶಕ ಯುವರಾಜ ಭಟ್, ತುಂಬಾ ಅಧ್ಯಯನ ಮಾಡಿ ಮರೆಯಾಗುತ್ತಿರುವ ಕಲೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಗರಡಿ ಮನೆ ಎಂದರೇನು, ಅಲ್ಲಿನ ವಾತಾವರಣ ಹೇಗಿರುತ್ತದೆ, ಗರಡಿ ಮನೆಯ ಜಟ್ಟಿಗಳ ತಾಲೀಮು ಹೇಗಿರುತ್ತದೆ, ಯಾವೆಲ್ಲ ಗರಡಿ ಸಲಕರಣೆಗಳನ್ನು ಉಪಯೋಗಿಸಿ ತಮ್ಮ ದೇಹವನ್ನು ಕಟ್ಟುತ್ತಾರೆ. ಅಷ್ಟೇ ಅಲ್ಲದೆ ಊರಿನಲ್ಲಿನ ಗರಡಿ ಮನೆ ಕೇವಲ ಕಸರತ್ತಿಗಷ್ಟೇ ಅಲ್ಲದೆ ಊರಿಗೆ ಏನೇ ತೊಂದರೆ ಬಂದರು, ಯಾವ ರೀತಿ ನಿಲ್ಲುತ್ತದೆ ಎಂಬೆಲ್ಲಾ ಅಂಶಗಳ ಮೇಲೆ ಈ ಚಿತ್ರ ಬೆಳಕು ಚೆಲ್ಲುತ್ತದೆ.

ಕೋರಫಿಟ್ ರಂಗಪ್ಪನ ಪಾತ್ರದಲ್ಲಿ ಬಿಸಿ ಪಾಟೀಲ್ ಮತ್ತೆ ಕೌರವನನ್ನು ನೆನಪಿಸುತ್ತಾರೆ. ಗರಡಿ ಮನೆಯ ಮೇಷ್ಟ್ರು ಪಾತ್ರದಲ್ಲಿ ತೂಕದ ಅಭಿನಯ ನೀಡಿ ಪಟ್ಟುಗಳ ಪರಿಚಯ ಮಾಡಿಕೊಡುತ್ತಾರೆ. ರೆಟ್ಟೆ ಹಳ್ಳಿಯಲ್ಲಿ ನಡೆಯುವ ಗರಡಿ ಟೂರ್ನಮೆಂಟ್ ಕಥೆಯ ಕೇಂದ್ರ ಬಿಂದು. ರಂಗಪ್ಪ ತಾನು ಮಾತು ಕೊಟ್ಟಹಾಗೆ ಕಲಿಸಿದ ಶಿಷ್ಯನನ್ನು ಕುಸ್ತಿಯಲ್ಲಿ ಗೆಲ್ಲಿಸುವುದು, ಮತ್ತೊಂದು ಕಡೆ ತಾನು ನಂಬಿ ಬದುಕಿರುವ ನ್ಯಾಯ ನೀತಿ ನಿಷ್ಠೆಯನ್ನು ಬಿಡದೆ ಕಾಪಾಡುವುದು. ಇವೆರಡರ ನಡುವೆ ಚಿತ್ರದಲ್ಲಿ ಸಂಘರ್ಷ ಏರ್ಪಡುತ್ತದೆ.

ಗರಡಿ ಮನೆ ಅಂಗಳದಲ್ಲಿ ಹುಡುಗಿಯ ಪ್ರೀತಿ ಪ್ರವೇಶವಾಗುತ್ತದೆ. ಇದಕ್ಕೂ ನಿರ್ದೇಶಕ ಯೋಗರಾಜ್ ಭಟ್ ನ್ಯಾಯ ಒದಗಿಸಿ ಜಟ್ಟಿ ಕುಸ್ತಿ ನಡುವೆ ಪ್ರೀತಿಯ ಬೆಳ್ಳಿಗೆರೆಯನ್ನು ಎಳೆದು ಕಾದಾಟದಲ್ಲೂ ಪ್ರೇಕ್ಷಕರನ್ನ ರೋಮ್ಯಾಂಟಿಕ್ ಮೂಡ್ ಗೆ ಕೊಂಡೊಯ್ಯುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.ನಾಯಕ ಸೂರ್ಯ ಮತ್ತು ಸೊನಾಲ್ ಮೆಂಥೇರ್ ಇದನ್ನು ಅದ್ಭುತವಾಗಿ ನಿಭಾಯಿಸುವಲ್ಲಿ ಸಾತ್ ಕೊಟ್ಟಿದ್ದಾರೆ.ಹಾಗೆ ಖಳನಟನಾಗಿ ರವಿಶಂಕರ್ ಎಂದಿನಂತೆ ಅಬ್ಬರಿಸಿದ್ದಾರೆ

ಅಂದ ಹಾಗೆ ಬಿಸಿ ಪಾಟೀಲ್ ಅಳಿಯ ವಿಜಯ್ ಮೊದಲ ಚಿತ್ರದಲ್ಲಿ ತನ್ನ ದೇಹದಾಢ್ಯವನ್ನು ಪ್ರದರ್ಶಿಸಿ ತೆರೆಯ ಮೇಲೆ ಖಳನಾಯಕನಾಗಿ ಎಲ್ಲರ ಮನ ಗೆದ್ದಿದ್ದಾರೆ‌. ಹೊಡಿರೆಲೆ ಹಲಿಗೆ ವಿಶೇಷ ಹಾಡಿನಲ್ಲಿ ನಿಶ್ವಿಕ ನಾಯ್ಡು ಕುಣಿದು ಕೊಪ್ಪಳಸಿ ಪಡ್ಡೆ ಹುಡುಗರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟರೆ ನಿರ್ದೇಶಕ ಯೋಗರಾಜ್ ಭಟ್ ಕೊಟ್ಟಿರುವ ಪಾತ್ರಗಳಿಗೆ ಪ್ರತಿಯೊಬ್ಬರೂ ನ್ಯಾಯವಾದಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ಕೆಲವೇ ಕಥೆಗಳಲ್ಲಿ ಗರಡಿ ಕೂಡ ಒಂದು. ಇಂತಹ ಚಿತ್ರಗಳು ಆಗಾಗ ಬಂದಾಗ ಯುವ ಪೀಳಿಗೆಗೆ ಕೆಲವೊಂದು ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಂಶಗಳು ಅರಿವಾಗುತ್ತವೆ. ಇವೆಲ್ಲವನ್ನು ಯಶಸ್ವಿಯಾಗಿ ಈ ಚಿತ್ರ ಪ್ರೇಕ್ಷಕರಿಗೆ ಕಟ್ಟಿಕೊಡುತ್ತದೆ

RELATED ARTICLES

Latest News