ನವದೆಹಲಿ,ಜೂ.17- ಬಿಲಿಯನೇರ್ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು ಭೂತಾನ್‌ನಲ್ಲಿ 570 ಮೆಗಾವ್ಯಾಟ್ ಹಸಿರು ಜಲ ವಿದ್ಯುತ್ ಸ್ಥಾವರ ಸ್ಥಾಪನೆಗೆ ಮುಂದಾಗಿದ್ದಾರೆ.
ನಿನ್ನೆ ಭೂತಾನ್ ಪ್ರಧಾನಿಯನ್ನು ಭೇಟಿ ಮಾಡಿ ದೇಶದಲ್ಲಿ 570 ಮೆಗಾವ್ಯಾಟ್ ಹಸಿರು ಜಲವಿದ್ಯುತ್ ಸ್ಥಾವರ ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅದಾನಿ ಅವರು ಭೂತಾನ್ ದೊರೆ ಜಿಗೆ ಖೇಸರ್ ನಾಮ್ಗ್ಯೆಲ್ ವಾಂಗ್‌ಚುಕ್ ಅವರನ್ನು ಪ್ರಧಾನಿಯವರೊಂದಿಗೆ ಥಿಂಪುವಿನಲ್ಲಿ ಭೇಟಿಯಾದರು.
ಭೂತಾನ್‌ನ ಗೌರವಾನ್ವಿತ ಪ್ರಧಾನಮಂತ್ರಿ ದಶೋ ತ್ಶೆರಿಂಗ್ ಟೋಬ್‌ಗೇ ಅವರೊಂದಿಗೆ ನಡೆದ ಸಭೆಯಲ್ಲಿ ಚುಖಾ ಪ್ರಾಂತ್ಯದಲ್ಲಿ 570 ಮೆಗಾವ್ಯಾಟ್ ಹಸಿರು ಜಲವಿದ್ಯುತ್ ಸ್ಥಾವರ ನಿರ್ಮಾಣದ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಮೆಜೆಸ್ಟಿ ದಿ ಕಿಂಗ್‌ನ ದಷ್ಟಿಕೋನವನ್ನು ಮುಂದುವರಿಸುವುದನ್ನು ಮತ್ತು ವಿಶಾಲ ವ್ಯಾಪ್ತಿಯ ಮೂಲಸೌಕರ್ಯವನ್ನು ಅನುಸರಿಸುವುದನ್ನು ನೋಡಲು ಪ್ರಶಂಸನೀಯವಾಗಿದೆ. ರಾಜ್ಯದಾದ್ಯಂತ ಉಪಕ್ರಮಗಳು ಭೂತಾನ್‌ನಲ್ಲಿ ಜಲ ಮತ್ತು ಇತರ ಮೂಲಸೌಕರ್ಯಗಳ ಮೇಲೆ ನಿಕಟವಾಗಿ ಕೆಲಸ ಮಾಡಲು ಎದುರುನೋಡುತ್ತಿವೆ ಎಂದು ಅದಾನಿ ಹೇಳಿದರು. ಅದಾನಿ ಗ್ರೂಪ್‌ನ ಅಧ್ಯಕ್ಷರು ಇಬ್ಬರು ನಾಯಕರೊಂದಿಗಿನ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.