Friday, November 22, 2024
Homeಕ್ರೀಡಾ ಸುದ್ದಿ | Sportsವಿರಾಟ್‌ ಕೊಹ್ಲಿ ಗುಣಗಾನ ಮಾಡಿದ ಗವಾಸ್ಕರ್‌

ವಿರಾಟ್‌ ಕೊಹ್ಲಿ ಗುಣಗಾನ ಮಾಡಿದ ಗವಾಸ್ಕರ್‌

ಬೆಂಗಳೂರು, ಮಾ.22-ಆರ್‌ಸಿಬಿ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿಯ ಸ್ಟ್ರೈಕ್‌ರೇಟ್‌ಅನ್ನು ಕಟುವಾಗಿ ಟೀಕಿಸಿದ್ದ ಭಾರತ ತಂಡದ ಮಾಜಿ ನಾಯಕ ಸುನೀಲ್‌ ಗವಾಸ್ಕಾರ್‌ ಈಗ ಕಿಂಗ್‌ ಕೊಹ್ಲಿಯ ಗುಣಗಾನ ಮಾಡುತ್ತಿದ್ದಾರೆ.

ಅಹಮದಾಬಾದ್‌ನ ಶ್ರೀ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜಸ್ಥಾನ್‌ ರಾಯಲ್‌್ಸ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳ ನಡುವಿನ ನಿಮಿತ್ತ ಮಾತನಾಡಿರುವ ಲಿಟ್ಲ್ ಮಾಸ್ಟರ್‌ , ಆರ್‌ ಆರ್‌ ವಿರುದ್ಧ ಆರ್‌ಸಿಬಿ ಗೆಲುವು ಸಾಧಿಸುವ ಆತವಿಶ್ವಾಸ ವ್ಯಕ್ತಪಡಿಸಿದ್ದಾರೆ.

`ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ತಂಡವು ಅತ್ಯದ್ಭುತ ಪ್ರದರ್ಶನ ತೋರುತ್ತಿದೆ. ಆ ತಂಡದ ಆಟಗಾರರು ತಮ ಆತವಿಶ್ವಾಸವನ್ನು ಎಂದಿಗೂ ಕುಗ್ಗಲು ಬಿಟ್ಟಿರಲಿಲ್ಲ. ಆರಂಭಿಕ ಪಂದ್ಯಗಳಲ್ಲಿ ಸೋಲು ಕಂಡರೂ ಅದ್ಭುತವಾಗಿ ಕಮ್‌ ಬ್ಯಾಕ್‌ ಮಾಡಿದ ರೀತಿಯಂತೂ ಅಮೋಘವಾಗಿದೆ’ ಎಂದು ಸುನೀಲ್‌ ಗವಾಸ್ಕರ್‌ ಹೇಳಿದ್ದಾರೆ.

`ಆರ್‌ಸಿಬಿ ತಂಡದಲ್ಲಿ ವಿರಾಟ್‌ ಕೊಹ್ಲಿ ಹಾಗೂ ಫಾಫ್‌ ಡುಪ್ಲೆಸಿಸ್‌‍ನಂತಹ ಅನುಭವಿ ಆಟಗಾರರಿದ್ದು, ಅವರು ತಮ್ಮ ಅದ್ಭುತ ಪ್ರದರ್ಶನದ ಮೂಲಕ ತಂಡದ ಇತರ ಆಟಗಾರರಲ್ಲೂ ಆತವಿಶ್ವಾಸ ಮೂಡಿಸಿದ್ದಾರೆ. ಇದರಿಂದ ಪ್ರೇರಿತಗೊಂಡ ತಂಡದ ಇತರ ಆಟಗಾರರು ಕೂಡ ಪರಿಸ್ಥಿತಿಯನ್ನು ಅರಿತುಕೊಂಡು ಉತ್ತಮ ಫಾರ್ಮ್‌ ಅನ್ನು ಕಂಡುಕೊಂಡು ತಂಡದ ಗೆಲುವಿಗೆ ತಮದೇ ಕಾಣಿಕೆ ನೀಡಿದ್ದಾರೆ’ ಎಂದು ಖ್ಯಾತ ಕ್ರಿಕೆಟ್‌ ವಿವರಣೆಕಾರ ಹೇಳಿದ್ದಾರೆ.

`ಮತ್ತೊಂದೆಡೆ ರಾಜಸ್ಥಾನ್‌ ರಾಯಲ್‌್ಸ ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಸೋಲು ಕಂಡಿದೆ. ಅಲ್ಲದೆ ಲೀಗ್‌ನ ಕೊನೆಯ ಪಂದ್ಯವು ಮಳೆಯಿಂದ ರದ್ದಾಗಿದ್ದರಿಂದ ಆ ತಂಡದ ಆಟಗಾರರು ಇತರ ತಂಡದೊಂದಿಗೆ ಆಡಿ 11 ದಿನಗಳೇ ಕಳೆದಿದ್ದು, ಇಂದಿನ ಪಂದ್ಯವನ್ನು ಗೆಲ್ಲಬೇಕಾದರೆ ಉತ್ತಮ ಹೋರಾಟ ನಡೆಸುವ ಅವಶ್ಯಕತೆ ಇದೆ’ ಎಂದರು.

RELATED ARTICLES

Latest News