Saturday, September 14, 2024
Homeಆರೋಗ್ಯ / ಜೀವನಶೈಲಿರೋಬೋಟಿಕ್‌ ಶಸ್ತ್ರಚಿಕಿತ್ಸೆ ನಡೆಸಿ ಜನನಾಂಗದ ಮೂಲಕ ಹೊರಗೆ ಹಿಗ್ಗಿಕೊಂಡಿದ್ದ ಗರ್ಭಕೋಶವನ್ನು ಪುನಃಸ್ಥಾಪಿಸಿದ ವೈದ್ಯರು

ರೋಬೋಟಿಕ್‌ ಶಸ್ತ್ರಚಿಕಿತ್ಸೆ ನಡೆಸಿ ಜನನಾಂಗದ ಮೂಲಕ ಹೊರಗೆ ಹಿಗ್ಗಿಕೊಂಡಿದ್ದ ಗರ್ಭಕೋಶವನ್ನು ಪುನಃಸ್ಥಾಪಿಸಿದ ವೈದ್ಯರು

ಬೆಂಗಳೂರು: 39 ವರ್ಷದ ಎನ್‌ಆರ್‌ಐ ಮಹಿಳೆಗೆ ತನ್ನ ಜನನಾಂಗದ ಮೂಲಕ ಹೊರಗೆ ಹಿಗ್ಗಿಕೊಂಡಿದ್ದ ಗರ್ಭಕೋಶವನ್ನು ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ರೋಬೋಟಿಕ್‌ ಮೂಲಕ ಶಸ್ತ್ರಚಿಕಿತ್ಸೆಯ ಮೂಲಕ ಯಥಾಸ್ಥಿತಿಗೆ ಪುನಃಸ್ಥಾಪಿಸಿದ್ದಾರೆ.

ಫೋರ್ಟಿಸ್ ಆಸ್ಪತ್ರೆಯ ಮೂತ್ರಶಾಸ್ತ್ರ, ಸ್ತ್ರೀರೋಗ-ಆಂಕೊಲಾಜಿ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸೆಯ ಹಿರಿಯ ಸಲಹೆಗಾರರಾದ ಡಾ ರುಬಿನಾ ಶಾನವಾಜ್ ಅವರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ. ಈ ಕುರಿತು ಮಾತನಾಡಿದ ಡಾ. ರುಬಿನಾ, ಎರಡು ಮಕ್ಕಳನ್ನು ಹೊಂದಿರುವ 39 ವರ್ಷದ ಎನ್‌ಆರ್‌ಐ ಮಹಿಳೆಯು ನಾಲ್ಕು ವರ್ಷಗಳ ಹಿಂದೆಯೇ ತಮ್ಮ ಗರ್ಭಕೋಶವು ಜನನಾಂಗದ ಮೂಲಕ ಚಾಚಿಕೊಂಡಿತ್ತು. ಸಾಮಾನ್ಯವಾಗಿ ಋತುಬಂಧ ನಿಂತ ಬಳಿಕ ಈ ಸಮಸ್ಯೆ ಕೆಲವರಲ್ಲಿ ಕಾಣಿಸುತ್ತದೆ.

ಆದರೆ ಇವರಿಗೆ ಋತುಬಂಧ ನಿಲ್ಲುವ ಮೊದಲೇ ಗರ್ಭಕೋಶ ಜನನಾಂಗದ ಮೂಲಕ ಚಾಚಿಕೊಂಡಿದೆ. ಈ ಸಮಸ್ಯೆಯಿಂದ ಇವರು ದಿನನಿತ್ಯದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲ, ಕಿಬ್ಬೊಟ್ಟೆ ನೋವು, ಹೊಟ್ಟೆ ಉಬ್ಬುವಿಕೆಯಿಂದ ತೊಡೆಗಳ ಅಸ್ವಸ್ಥತೆ, ಮೂತ್ರ ವಿಸರ್ಜನೆ ಮಾಡುವುದು ಸಹ ಕಷ್ಟಕರವಾಗಿತ್ತು. ಕೆಲವರು ಇದಕ್ಕೆ ಗರ್ಭಕೋಶವನ್ನೇ ತೆಗೆದುಹಾಕುವ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುತ್ತಾರೆ.

ಆದರೆ, ಫೋರ್ಟಿಸ್‌ ಆಸ್ಪತ್ರೆಯಲ್ಲಿ ಕೆಳಗೆ ಜಾರಿದ ಗರ್ಭಕೋಶವನ್ನು ರೋಬೋಟಿಕ್‌ ಸಹಾಯದ ಮೂಲಕ ಮೇಲೆತ್ತುವ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ಅಂತೆಯೇ ಇವರಿಗೂ ಸಹ ಹಲವು ಆಸ್ಪತ್ರೆಗಳಲ್ಲಿ ಗರ್ಭಕೋಶವನ್ನು ತೆಗೆಸುವಂತೆಯೇ ಸಲಹೆ ನೀಡಲಾಗಿತ್ತು. ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ಇವರಿಗೆ “ರೋಬೋಟ್-ಅಸಿಸ್ಟೆಡ್ ಸ್ಯಾಕ್ರೋ-ಹಿಸ್ಟರೊಪೆಕ್ಸಿ ಶಸ್ತ್ರಚಿಕಿತ್ಸೆಯ ಸಲಹೆ ನೀಡಲಾಯಿತು.

ಈ ಶಸ್ತ್ರಚಿಕಿತ್ಸೆಯ ಮೂಲಕ ಕೆಳಗೆ ಜಾರಲಾದ ಗರ್ಭಕೋಶವನ್ನು ಅದೇ ಸ್ಥಳದಲ್ಲಿ ಕೂರಿಸಲಾಯಿತು. ಇದೀಗ ಅವರು ಚೇತರಿಸಿಕೊಂಡಿದ್ದಾರೆ ಎಂದು ವಿವರಿಸಿದರು.

RELATED ARTICLES

Latest News