Saturday, December 14, 2024
Homeರಾಷ್ಟ್ರೀಯ | Nationalಪತ್ನಿ ಕೊಂದ ಹೋಟೆಲ್ ಮ್ಯಾನೇಜರ್ ಬಂಧನ

ಪತ್ನಿ ಕೊಂದ ಹೋಟೆಲ್ ಮ್ಯಾನೇಜರ್ ಬಂಧನ

ಗೋವಾ,ಜ.21- ಒಂದು ವರ್ಷದ ಹಿಂದಷ್ಟೇ ಕೈಹಿಡಿದಿದ್ದ ಪತ್ನಿಯನ್ನು ಸಮುದ್ರಕ್ಕೆ ತಳ್ಳಿ ಸಾಯಿಸಿ ನಾಟಕವಾಡಿದ್ದ ಇಲ್ಲಿನ ಪ್ರತಿಷ್ಠಿತ ಹೋಟೆಲ್‍ನ ಮ್ಯಾನೇಜರ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಗೌರವ್ ಕಟಿಯಾರ್‍ಬಂತ ಆರೋಪಿಯಾಗಿದ್ದಾನೆ. ಇತ್ತೀಚೆಗೆ ಪತ್ನಿಯನ್ನು ಸಮುದ್ರದಲ್ಲಿ ಮುಳುಗಿಸಿ ಕೊಂದು ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಈತನ ಕುತಂತ್ರ ಬೆಳಕಿಗೆ ಬಂದಿದೆ.ಕಳೆದ 1 ವರ್ಷದ ಹಿಂದೆ ದೀಕ್ಷಾ ಎಂಬಾಕೆಯನ್ನು ವಿವಾಹ ವಾಗಿದ್ದ ಗಂಗ್ವಾರ್ ಕೆಲ ತಿಂಗಳ ಹಿಂದೆ ಬೇರೊಬ್ಬ ಮಹಿಳೆ ಜತೆ ಅನೈತಿಕ ಸಂಬಂಧಹೊಂದಿದ್ದ.

ನಮ್ಮ ಸಂಬಂಧಕ್ಕೆ ಪತ್ನಿ ಅಡ್ಡ ಬರುತ್ತಾಳೆ ಎಂದು ಭಾವಿಸಿ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.ಕಳೆದ ಶುಕ್ರವಾರ ಮಧ್ಯಾಹ್ನ ಪೊಲೀಸರು ಮಹಿಳೆಯೊಬ್ಬರ ಶವವನ್ನು ಸಮುದ್ರ ತೀರದ ಬಳಿ ಪತ್ತೆಯಾಗಿತ್ತು. ದಕ್ಷಿಣ ಗೋವಾದ ಕೊಲ್ವಾದಲ್ಲಿ ಐಷಾರಾಮಿ ಹೋಟೆಲ್‍ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿ ಆರೋಪಿ ಲಕ್ನೋ ಮೂಲದವನಾಗಿದ್ದು ದೀಕ್ಷಾ ಅವರನ್ನು ಮದುವೆಯಾದ ನಂತರ ಅವರ ಸಂಬಂಧವು ಹಳಸಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಧರ್ಮದ ವಿಚಾರಗಳು ಪ್ರಚಾರದ ಸರಕುಗಳಲ್ಲ : ಡಿಕೆಶಿ ತಿರುಗೇಟು

ಕಟಿಗೌರವ್ ತನ್ನ ಪತ್ನಿಯನ್ನು ದಕ್ಷಿಣ ಗೋವಾದ ಕಡಲತೀರ ಕಾಬೋ ಡಿ ರಾಮಾ ಬೀಚ್‍ನಲ್ಲಿ ವಿಹಾರಕ್ಕೆ ಕರೆದೊಯ್ದನು, ಅಲ್ಲಿ ಆಕೆಯನ್ನು ಸಮುದ್ರಕ್ಕೆ ತಳ್ಳಿ ಹತ್ಯೆ ಮಾಡಿ ನಂತರ ಏನು ತಿಳಿಯದಂತೆ ವಾಪಸ್ ಆಗಿದ್ದ ಬೀಚ್‍ನಿಂದ ಬರುವಾಗ ಆತನ ವರ್ತನೆ ಕಂಡು ಕೆಲ ಪ್ರವಾಸಿಗರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ದಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News