Sunday, May 18, 2025
Homeರಾಷ್ಟ್ರೀಯ | National71 ಸಾವಿರದ ಗಡಿ ದಾಟಿ ಸಾರ್ವಕಾಲಿಕ ದಾಖಲೆ ಬರೆದ ಚಿನ್ನದ ಬೆಲೆ

71 ಸಾವಿರದ ಗಡಿ ದಾಟಿ ಸಾರ್ವಕಾಲಿಕ ದಾಖಲೆ ಬರೆದ ಚಿನ್ನದ ಬೆಲೆ

ಬೆಂಗಳೂರು,ಏ.8- ಸತತ ಏರಿಕೆಯಾಗುತ್ತಿದ್ದ ಚಿನ್ನದ ದರ ಇಂದು ಗರಿಷ್ಠ ಹೆಚ್ಚಳ ಕಂಡಿದ್ದು, ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ. 10 ಗ್ರಾಂ ಶುದ್ದ ಚಿನ್ನದ ದರವು 71 ಸಾವಿರ ಗಡಿ ದಾಟುವ ಮೂಲಕ ಹೊಸ ದಾಖಲೆಯನ್ನು ನಿರ್ಮಾಣ ಮಾಡಿದೆ. 24 ಕ್ಯಾರೆಟ್‍ನ 10 ಗ್ರಾಂ ಚಿನ್ನಕ್ಕೆ 71,080 ರೂ.ಗೆ ತಲುಪಿದ್ದು ಇದುವರೆಗಿನ ಎಲ್ಲ ದಾಖಲೆಗಳನ್ನು ಮುರಿದಂತಾಗಿದೆ.

ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಭಾರೀ ಹೆಚ್ಚಳ ಕಂಡಿದ್ದು, 10 ಗ್ರಾಂ ಚಿನ್ನಕ್ಕೆ 440 ರೂ. ಹೆಚ್ಚಳವಾಗಿದೆ. ಅದೇ ರೀತಿ ಬೆಳ್ಳಿಯೂ ಕೂಡ ಗಣನೀಯ ಏರಿಕೆ ಕಂಡಿದ್ದು, 1 ಕೆಜಿ 1076 ರೂ.ನಷ್ಟು ಹೆಚ್ಚಳವಾಗಿದ್ದು, 82,064 ರೂ. ಗರಿಷ್ಠ ಧಾರಣೆ ತಲುಪಿದೆ.

ಚಿನ್ನದ ಮೇಲಿನ ಹೂಡಿಕೆ ಹೆಚ್ಚಳ, ಆಭರಣ ಪ್ರಿಯರ ಖರೀದಿಯಿಂದಾಗಿ ಚಿನ್ನಬೆಳ್ಳಿ ದರಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿವೆ.ರಾಜಧಾನಿ ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 300 ರೂ. ಏರಿಕೆಯಾಗಿದ್ದರೆ ಶುದ್ದ ಚಿನ್ನದ ಬೆಲೆ 10 ಗ್ರಾಂಗೆ 330 ರೂ. ಹೆಚ್ಚಾಗಿದೆ. ಚಿನ್ನ, ಬೆಳ್ಳಿ ಹೆಚ್ಚಳ ಗರಿಷ್ಠ ಮಟ್ಟ ಮುಟ್ಟಿರುವ ಹಿನ್ನಲೆಯಲ್ಲಿ ಆಭರಣ ಖರೀದಿ ಕಡಿಮೆಯಾಗುವ ಆತಂಕ ವರ್ತಕರನ್ನು ಕಾಡುತ್ತಿದೆ.

RELATED ARTICLES

Latest News