Friday, November 22, 2024
Homeರಾಜ್ಯರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವ ಮಾರ್ಚ್ 10 ರಂದು ಜಾಗೃತಿ ಓಟ

ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವ ಮಾರ್ಚ್ 10 ರಂದು ಜಾಗೃತಿ ಓಟ

ಬೆಂಗಳೂರು, ಫೆ.20- ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವ ಅಂಗವಾಗಿ 10 ಕಿಲೋ ಮೀಟರ್‍ಗಳ ಜಾಗೃತಿ ಓಟವನ್ನು ಮಾರ್ಚ್ 10ರಂದು ಆಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ರಾಜ್ಯ ಪೊಲೀಸ್ ಇಲಾಖೆಗೆ 50 ವರ್ಷವಾಗಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ನಡೆಯುತ್ತಿದ್ದು, ಇದರ ಅಂಗವಾಗಿ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‍ಬಿಐ) ಸಹಯೋಗದೊಂದಿಗೆ ಫಿಟ್‍ನೆಸ್ ಫಾರ್ ಆಲ್ ಎಂಬ ಶೀರ್ಷಿಕೆಯಡಿ ಹಾಗೂ ಮಾದಕ ವಸ್ತು ಮುಕ್ತ ಕರ್ನಾಟಕವನ್ನು ಪ್ರಚಾರ ಪಡಿಸುವ ಉದ್ದೇಶದಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು 10 ಕಿಲೋ ಮೀಟರ್ ಹಾಗೂ 5 ಕಿಲೋ ಮೀಟರ್‍ಗಳ ಓಟವನ್ನು ಆಯೋಜಿಸಲಾಗಿದೆ.

ಈ ಓಟದ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರ ಸೇರಿದಂತೆ ಎಲ್ಲಾ ವಯೋಮಾನದ 10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಮಾ. 10ರಂದು ವಿಧಾನಸೌಧದ ಮುಂಭಾಗದಿಂದ ಓಟ ಆರಂಭವಾಗಲಿದ್ದು, ಕಬ್ಬನ್ ಉದ್ಯಾನವನ ಮುಖಾಂತರ ಹಾದು ಹೋಗುವುದು. ಕರ್ನಾಟಕ ಪೊಲೀಸ್ ಬ್ಯಾಂಡ್ ತಂಡವು ಓಟದ ಪ್ರಾರಂಭದಿಂದ ಹಾದು ಹೋಗುವ ಆಯ್ದ ಸ್ಥಳಗಳಲ್ಲಿ ಬ್ಯಾಂಡ್ ಪ್ರದರ್ಶನ ನೀಡಲಿದೆ.

ಈ ಓಟವು ಹಸಿರು ಬೆಂಗಳೂರು ಮಾದಕ ವಸ್ತು ಮುಕ್ತ ಕರ್ನಾಟಕ ಮತ್ತು ಸೈಬರ್ ಕ್ರೈಂಗಳ ಬಗ್ಗೆ ಜಾಗೃತಿ ಮೂಡಿಸಲಿದೆ. 5 ಕಿಲೋ ಮೀಟರ್ ಮತ್ತು 10 ಕಿಲೋ ಮೀಟರ್‍ಗಳ ಪ್ರತ್ಯೇಕ ವಿಭಾಗಗಳಲ್ಲಿ ಮೂರು ಉಪವಿಭಾಗಗಳಾಗಿ ವಿಂಗಡಿಸಲಾಗಿದ್ದು, ಇದರಲ್ಲಿ ಪುರುಷರು, ಮಹಿಳೆಯರು, ಹಿರಿಯ ನಾಗರಿಕರು, ವಿಶೇಷ ಚೇತನರು ಹಾಗೂ ವೃತ್ತಿಪರ ಓಟಗಾರರು ಭಾಗವಹಿಸಬಹುದಾಗಿದೆ.

ತೆರಿಗೆ ತಾರತಮ್ಯದ ವಿರುದ್ಧ ಧ್ವನಿ ಎತ್ತದಿರುವುದು 7 ಕೋಟಿ ಕನ್ನಡಿಗರಿಗೆ ಮಾಡಿದ ಅನ್ಯಾಯ ; ಸಿಎಂ

ವಿಜೇತರಿಗೆ ಮೂರು ಹಂತದ ವಿವಿಧ ಬಹುಮಾನಗಳನ್ನು ಘೋಷಣೆ ಮಾಡಿದ್ದು, ಸುಮಾರು 18 ಲಕ್ಷ ನೀಡಲು ಉದ್ದೇಶಿಸಲಾಗಿದೆ. 10 ಕಿಲೋ ಮೀಟರ್ ವಿಭಾಗದ ವಿಜೇತರಿಗೆ ತಲಾ ಒಂದು ಲಕ್ಷ ಹಾಗೂ 5 ಕಿಲೋ ಮೀಟರ್ ವಿಭಾಗದ 40 ಸಾವಿರ ಬಹುಮಾನವನ್ನು ಮಹಿಳಾ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ನೀಡಲಾಗುವುದು.
ರಾಜ್ಯದ ಎಲ್ಲಾ ಜಿಲ್ಲೆಗಳ ವಿವಿಧ ದರ್ಜೆಗಳ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಲಿದ್ದಾರೆ. ಜೊತೆಗೆ ಕೆಎಸ್‍ಆರ್‍ಪಿ ಮತ್ತು ಇತರೆ ವಿಶೇಷ ಘಟಕಗಳು ಭಾಗವಹಿಸಲಿದ್ದು, ಸುಮಾರು 3ರಿಂದ 4 ಸಾವಿರ ಪೊಲೀಸ್ ಸಿಬ್ಬಂದಿ ಭಾಗವಹಿಸಲಿದ್ದಾರೆ.

ಈಗಾಗಲೇ ನೋಂದಾಣಿ ಕಾರ್ಯ ಆರಂಭವಾಗಿದ್ದು, ಸಾರ್ವಜನಿಕರು ಸಹ ನೋಂದಾಣಿ ಮಾಡಿಕೊಂಡು ಈ ಓಟದಲ್ಲಿ ಭಾಗವಹಿಸಬಹುದಾಗಿದೆ. ಈ ಓಟದಲ್ಲಿ ಭಾಗವಹಿಸುವವರಿಗೆ ಒಂದು ಟೀ-ಶರ್ಟ್, ಪದಕ ಮತ್ತು ಉಪಹಾರದ ವ್ಯವಸ್ಥೆ ಇರುತ್ತದೆ. ಆಸಕ್ತರು www.click2race.com ವೆಬ್‍ಸೈಟ್ ಮೂಲಕ ನೋಂದಾಯಿಸಿಕೊ ಳ್ಳಬಹುದಾಗಿದೆ ಎಂದು ಆಯುಕ್ತರು ತಿಳಿಸಿದರು.

RELATED ARTICLES

Latest News