Tuesday, September 17, 2024
Homeಮನರಂಜನೆಹುಟ್ಟುಹಬ್ಬ ಆಚರಿಸೋಲ್ಲ ಎಂದ ಗೋಲ್ಡನ್‌ ಸ್ಟಾರ್‌ ಗಣೇಶ್

ಹುಟ್ಟುಹಬ್ಬ ಆಚರಿಸೋಲ್ಲ ಎಂದ ಗೋಲ್ಡನ್‌ ಸ್ಟಾರ್‌ ಗಣೇಶ್

ಬೆಂಗಳೂರು, ಜು.1– ತಮ್ಮ ನೆಚ್ಚಿನ ನಟ ಗಣೇಶ್‌ ಅವರ 46ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕೆಂಬ ಅಭಿಮಾನಿಗಳ ಆಸೆಗೆ ಗೋಲ್ಡನ್‌ ಸ್ಟಾರ್‌ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದೇ ತೆಗೆದುಕೊಂಡಿರುವ ನಿರ್ಣಯ ಬೇಸರ ಮೂಡಿಸಿದೆ.

ಗೋಲ್ಡನ್‌ಸ್ಟಾರ್‌ ಗಣೇಶ್‌ ಅವರು ಜುಲೈ 2 ರಂದು ತಮ 46ನೇ ವಸಂತಕ್ಕೆ ಕಾಲಿಡುತ್ತಿದ್ದು, ಜನದಿನ ಮುನ್ನ ದಿನ ತಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ತಿಳಿಸಿದ್ದಾರೆ.`ನನ್ನ ಆತ್ಮೀಯ ಅಭಿಮಾನಿಗಳೇ, ಜುಲೈ 2ರಂದು ನಾನು ನನ್ನ ಬೆಂಗಳೂರಿನಲ್ಲಿರುವ ನಮ್ಮ ನಿವಾಸದಲ್ಲಿ ಇರುವುದಿಲ್ಲ.

ಅದೇಕೋ ತಮ್ಮೊಂದಿಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ನನ್ನ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ .ಹೀಗಾಗಿ ನನ್ನ ಪ್ರೀತಿಯ ಅಭಿಮಾನಿಗಳು ಮನೆಯ ಬಳಿ ಬಾರದೇ ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆಶೀರ್ವದಿಸಿ’ ಎಂದು ಹೇಳಿದ್ದಾರೆ.

`ಮುಂದಿನ ವರ್ಷ ಖಂಡಿತ ಒಟ್ಟಿಗೇ ಹುಟ್ಟುಹಬ್ಬ ಆಚರಿಸೋಣ. ಅನಾನುಕೂಲಕ್ಕೆ ಕ್ಷಮೆಯಿರಲಿ. ಎಂದಿನ ತಮ್ಮ ಅಭಿಮಾನದ ನಿರೀಕ್ಷೆಯೊಂದಿಗೆ, ನಿಮ್ಮವ ಗಣೇಶ್’ ಎಂದು ತಿಳಿಸಿದ್ದಾರೆ.ಸೋಶಿಯಲ್ ಮೀಡಿಯಾದಲ್ಲಿ ಪೋಸ್್ಟ ಮಾಡಿ ಮನವಿ ಮಾಡಿದ್ದಾರೆ. ಗಣೇಶ್ ನಟಿಸಿರುವ ಕೃಷ್ಣಂ ಪ್ರಣಯಂ ಸಖಿ ಚಿತ್ರವು ಶೀಘ್ರವೇ ಈ ಚಿತ್ರವು ತೆರೆಕಾಣಲಿದೆ.

RELATED ARTICLES

Latest News