Saturday, July 27, 2024
Homeರಾಜ್ಯಪ್ರೌಢಶಾಲೆ ಶಿಕ್ಷಕರಿಗೆ ಸರ್ಕಾರದಿಂದ ಸಿಹಿಸುದ್ದಿ

ಪ್ರೌಢಶಾಲೆ ಶಿಕ್ಷಕರಿಗೆ ಸರ್ಕಾರದಿಂದ ಸಿಹಿಸುದ್ದಿ

ಬೆಂಗಳೂರು,ಮೇ 16- ಕರ್ನಾಟಕದ ಪ್ರೌಢಶಾಲೆಗಳ ಶಿಕ್ಷಕರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಬೇಸಿಗೆ ರಜೆ ಕೆಲವು ದಿನಗಳನ್ನು ತ್ಯಾಗ ಮಾಡಿ ಶಾಲೆಗಳಿಗೆ ಆಗಮಿಸುವ ಶಿಕ್ಷಕರಿಗೆ ಗಳಿಕೆ ರಜೆಯನ್ನು ಪಡೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ರಾಜ್ಯದಲ್ಲಿ ಈಗಾಗಲೇ ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆ-2ರ ವೇಳಾಪಟ್ಟಿ ಘೋಷಿಸಲಾಗಿದೆ. ಜೂನ್‌ನಲ್ಲಿ ನಡೆಯುಲಿರುವ ಈ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ವಿಶೇಷ ಬೋಧನಾ ಪರಿಹಾರ ತರಗತಿಗಳನ್ನು ನಡೆಸಬೇಕಿದೆ. ಇದಕ್ಕಾಗಿ ಶಿಕ್ಷಕರು ಬೇಸಿಗೆಯನ್ನು ಬಿಟ್ಟು ಬರಬೇಕಿದೆ.

ಸರ್ಕಾರದ ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ, ಮೇ 29ರ ತನಕ ಶಾಲೆಗಳಿಗೆ ಬೇಸಿಗೆ ರಜೆ ಇದೆ. ಆದರೆ ಶಿಕ್ಷಕರು ಶಾಲೆಗಳಿಗೆ ಮೇ 15ರಿಂದಲೇ ಆಗಮಿಸುತ್ತಿದ್ದಾರೆ. ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆ-2ಕ್ಕೆ ಆಯಾ ಪ್ರೌಢಶಾಲೆಗಳಲ್ಲಿ ವಿಶೇಷ ತರಗತಿ ನಡೆಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೂಚನೆ ನೀಡಿದೆ. ಬೇಸಿಗೆ ರಜೆ ಕಡಿತ ಮಾಡಿರುವುದಕ್ಕೆ ಶಿಕ್ಷಕರು ಆಕೋಶ ವ್ಯಕ್ತಪಡಿಸಿದ್ದರು.

ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆ-2 ಎಂದರೆ 2024ರ ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆ-1ಕ್ಕೆ ನೋಂದಾಯಿಸಿಕೊಂಡು ಪರೀಕ್ಷೆಗೆ ಗೈರು ಹಾಜರಾದ ಮತ್ತು ಪೂರ್ಣಗೊಳಿಸಲು ಆಗಿಲ್ಲದ ಹಾಗೂ ಹಿಂದಿನ ಸಾಲಿನಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳಿಗೆ ಜೂನ್ನಲ್ಲಿ ನಡೆಸುವ ಪರೀಕ್ಷೆ.
ಈ ಪರೀಕ್ಷೆಗೆ ಹೆಸರು ನೋಂದಣಿ ಮಾಡಿರುವ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ವಿಶೇಷ ಬೋಧನಾ ಪರಿಹಾರ ತರಗತಿಗಳನ್ನು ನಡೆಸಲಾಗುತ್ತದೆ. ಇದಕ್ಕಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೆ ಕಡಿತವಾಗುವ ಬೇಸಿಗೆ ರಜೆ ದಿನಗಳ ಬದಲಿಗೆ ಗಳಿಕೆ ರಜೆಯನ್ನು ನೀಡಲಾಗುತ್ತದೆ.

14 ದಿನಗಳ ಬೇಸಿಗೆ ರಜೆ ಕಡಿತಗೊಳ್ಳುವ ಹಿನ್ನಲೆಯಲ್ಲಿ ಶಿಕ್ಷಕರು ವಿಶೇಷ ಬೋಧನಾ ಪರಿಹಾರ ತರಗತಿಗಳಿಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಗಳಿಕೆ ರಜೆಯನ್ನು ನೀಡಿ ಸರ್ಕಾರ ಶಿಕ್ಷಕರ ಮನವೊಲಿಕೆ ಮಾಡಿದೆ. ಮೇ 15ರಿಂದಲೇ ಕೆಲವು ಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ಆರಂಭಿಸಲಾಗಿದೆ. ಒಂದು ಶಾಲೆಯಲ್ಲಿ ಎಸ್‌‍ಎಸ್‌‍ಎಲ್‌ಸಿ ಅನುತ್ತೀರ್ಣಗೊಂಡ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 10ಕ್ಕಿಂತ ಕಡಿಮೆ ಇದ್ದರೆ ಸಮೀಪದ ಶಾಲೆಯಲ್ಲಿ ತರಗತಿ ನಡೆಸಬಹುದು.

ಆದರೆ 10 ವಿದ್ಯಾರ್ಥಿಗಳಿದ್ದರೆ ಅದೇ ಶಾಲೆಯಲ್ಲಿ ತರಗತಿ ನಡೆಸಬೇಕು ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೂಚನೆ ನೀಡಿದೆ. ಶಾಲೆಯಲ್ಲಿ ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆ-1 ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಇದ್ದರೆ ಅವರು ಕಡ್ಡಾಯವಾಗಿ ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆ-2ಕ್ಕೆ ನೋಂದಣಿ ಮಾಡಿಕೊಳ್ಳುವಂತೆ ಮುಖ್ಯ ಶಿಕ್ಷಕರು ನೋಡಿಕೊಳ್ಳಬೇಕು. ಸಿ, ಸಿ+ ಲಿತಾಂಶ ಬಂದಿರುವ ವಿದ್ಯಾರ್ಥಿಗಳು ಲಿತಾಂಶ ಸುಧಾರಣೆಗೆ ಬಯಸಿದರೆ ನೋಂದಣಿಗೆ ಉತ್ತೇಜನ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆ-1 ಮುಗಿಸಿ, ಮೌಲ್ಯ ಮಾಪನ ಕಾರ್ಯವನ್ನು ಮುಗಿಸಿದ್ದ ಶಿಕ್ಷಕರಿಗೆ ಲೋಕಸಭಾ ಚುನಾವಣಾ ಕಾರ್ಯ ಬಂದಿತ್ತು. ಚುನಾವಣೆ ಮುಗಿಸಿ ಬೇಸಿಗೆ ರಜೆಯಲ್ಲಿದ್ದ ಶಿಕ್ಷಕರಿಗೆ ವಿಶೇಷ ಬೋಧನಾ ಪರಿಹಾರ ತರಗತಿಗೆ ಆಗಮಿಸುವಂತೆ ಇಲಾಖೆ ಸೂಚನೆ ನೀಡಿದ್ದು ವಿರೋಧಕ್ಕೆ ಕಾರಣವಾಗಿತ್ತು. ಮೊದಲೇ ಶಿಕ್ಷಕರು ಬೇರೆ ಇಲಾಖೆಗಳ ನೌಕರರಿಗೆ ಸಿಗುವಷ್ಟ ರಜೆಗಳು ಸಿಗುತ್ತಿಲ್ಲ ಎಂದು ದೂರಿದ್ದರು.

7ನೇ ರಾಜ್ಯ ವೇತನ ಆಯೋಗಕ್ಕೆ ಶಿಕ್ಷಕರ ಗಳಿಕೆ ರಜೆ ಹೆಚ್ಚಿಸಲು ಶಿಾರಸು ಮಾಡಬೇಕು ಎಂದು ಮನವಿ ಮಾಡಿದ್ದರು. ಈಗ ಬೇಸಿಗೆ ರಜೆ ಕಡಿತವನ್ನು ಗಳಿಕೆ ರಜೆಗೆ ಹೊಂದಿಸಲು ಸರ್ಕಾರ ಅವಕಾಶ ನೀಡಿದೆ. ಶಾಲೆಯ ಮುಖ್ಯ ಶಿಕ್ಷಕರು ಈ ವಿಶೇಷ ಬೋಧನಾ ಪರಿಹಾರ ತರಗತಿಗೆ ವೇಳಾಪಟ್ಟಿಯನ್ನು ತಯಾರು ಮಾಡಬೇಕಿದೆ. ಅಲ್ಲದೇ ಈ ತರತಿಗೆ ಬರುವ ವಿದ್ಯಾರ್ಥಿಗಳಿಗೆ ಬಿಸಿಯೂಟದ ವ್ಯವಸ್ಥೆ ಮಾಡಬೇಕಿದೆ. ಆದ್ದರಿಂದ ಪಠ್ಯ ಬೋಧನೆ ಮಾಡುವ ಶಿಕ್ಷಕರು ಮಾತ್ರವಲ್ಲ ಮುಖ್ಯ ಶಿಕ್ಷಕರ ಬೇಸಿಗೆ ರಜೆ ಸಹ ಕಡಿತಗೊಂಡಿದೆ. ಈಗ ಗಳಿಕೆ ರಜೆ ಪಡೆಯಲು ಅವಕಾಶ ನೀಡಿರುವುದು ಶಿಕ್ಷಕರಿಗೆ ಸಹಾಯಕವಾಗಿದೆ.

RELATED ARTICLES

Latest News