Sunday, December 1, 2024
Homeಕ್ರೀಡಾ ಸುದ್ದಿ | Sportsಪ್ಲೇಆಫ್‌ಗೂ ಮುನ್ನವೇ ಆರ್‌ಸಿಬಿಗೆ ಸಿಕ್ತು ಶುಭಸುದ್ದಿ

ಪ್ಲೇಆಫ್‌ಗೂ ಮುನ್ನವೇ ಆರ್‌ಸಿಬಿಗೆ ಸಿಕ್ತು ಶುಭಸುದ್ದಿ

ಬೆಂಗಳೂರು, ಮೇ 21- ಪ್ಲೇ ಬೋಲ್ಡ್ ಎಂಬ ಸಂದೇಶದಂತೆ ಈ ಬಾರಿ ಕೆಚ್ಚೆದೆಯ ಪ್ರದರ್ಶನ ತೋರುವ ಮೂಲಕ ಪ್ಲೇಆಫ್‌ ಸುತ್ತು ತಲುಪಿರುವ ಆರ್‌ಸಿಬಿ ನಾಳೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್ ತಂಡದ ಸವಾಲು ಎದುರಿಸಲಿದ್ದು, ಈ ಪಂದ್ಯಕ್ಕೂ ಮುನ್ನವೇ ಫಾಫ್‌ ಡುಪ್ಲೆಸಿಸ್‌‍ ಪಡೆಗೆ ಶುಭ ಸುದ್ದಿ ಸಿಕ್ಕಿದೆ.

ಮುಂಬರುವ ಟಿ20 ವಿಶ್ವಕಪ್‌ ಸಲುವಾಗಿ ಈಗಾಗಲೇ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ನ ಸ್ಟಾರ್‌ ಆಟಗಾರರು ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಆರ್‌ಸಿಬಿ ಸ್ಟಾರ್‌ ಆಲ್‌ರೌಂಡರ್‌ ವಿಲ್‌ಜಾಕ್ಸ್ ಅವರ ಸೇವೆಯನ್ನು ಕಳೆದುಕೊಂಡಿದೆ. ಈ ನಡುವೆ ಆಸ್ಟ್ರೇಲಿಯಾ ಕೂಡ ಅಭ್ಯಾಸ ಆರಂಭಿಸಿದ್ದು, ಸ್ಟಾರ್‌ ಆಟಗಾರರು ಐಪಿಎಲ್‌ ತೊರೆಯುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು.

ಆದರೆ ಆಸ್ಟ್ರೇಲಿಯಾ ತಂಡದ ಹೆಡ್‌ಕೋಚ್‌ ಆಂಡ್ರೂ ಮೆಕ್‌ಡೊನಾಲ್ಡ್ ಅವರು ಆಸೀಸ್‌‍ನ ಆಟಗಾರರು ಸಂಪೂರ್ಣ ಐಪಿಎಲ್‌ಗೆ ಲಭ್ಯವಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಆರ್‌ಸಿಬಿ ಸ್ಟಾರ್‌ ಆಟಗಾರರಾದ ಗ್ಲೆನ್‌ ಮ್ಯಾಕ್‌ವೆಲ್‌ ಹಾಗೂ ಕ್ಯಾಮರೂನ್‌ ಗ್ರೀನ್‌ ಅವರ ಸೇವೆಯನ್ನು ಪಡೆದಿರುವ ಸಂಭ್ರಮದಲ್ಲಿದೆ.

ಅದೇ ರೀತಿ ಸನ್‌ರೈಸರ್ಸ್‌ ಹೈದ್ರಾಬಾದ್‌ ತಂಡಕ್ಕೆ ನಾಯಕ ಪ್ಯಾಟ್‌ ಕಮಿನ್ಸ್ ಹಾಗೂ ಟ್ರಾವಿಸ್‌‍ ಹೆಡ್‌ ಅವರ ಸೇವೆಯು ಲಭ್ಯವಾಗಿದೆ. ಈ ಆಟಗಾರರು ಜೂನ್‌ 5 ರಂದು ಒಮನ್‌ ವಿರುದ್ಧ ನಡೆಯಲಿರುವ ಟಿ20 ವಿಶ್ವಕಪ್‌ ಪಂದ್ಯಕ್ಕೂ ಮುನ್ನವೇ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಗಳಿವೆ.

ಮಿಚೆಲ್‌ ಮಾರ್ಷ್‌ ಮುನ್ನಡೆಸಲಿರುವ ಆಸ್ಟ್ರೇಲಿಯಾ ತಂಡವು ತಮ ಪೂರ್ವಾಭ್ಯಾಸದ ಪಂದ್ಯವನ್ನು ನಮೀಬಿಯಾ ಹಾಗೂ ವೆಸ್ಟ್‌ ಇಂಡೀಸ್‌‍ ವಿರುದ್ಧ ಆಡಲಿದೆ.

RELATED ARTICLES

Latest News