Friday, October 4, 2024
Homeರಾಷ್ಟ್ರೀಯ | Nationalಹಳಿ ತಪ್ಪಿದ ಗೂಡ್ಸ್ : 15 ರೈಲುಗಳ ಮಾರ್ಗ ಬದಲಾವಣೆ

ಹಳಿ ತಪ್ಪಿದ ಗೂಡ್ಸ್ : 15 ರೈಲುಗಳ ಮಾರ್ಗ ಬದಲಾವಣೆ

ರಾಂಚಿ, ಸೆ.26-ಜಾರ್ಖಂಡ್‌ನ ಬೊಕಾರೊದ ತುಪ್ಕಡಿಹ್‌ ನಿಲ್ದಾಣದ ಬಳಿ ಗೂಡ್ಸ್ ರೈಲಿನ ಎರಡು ವ್ಯಾಗನ್‌ಗಳು ಹಳಿತಪ್ಪಿದ ಪರಿಣಾಮ ರೈಲುಗಳ ಚಲನೆಯ ಮೇಲೆ ಪರಿಣಾಮ ಬೀರಿದೆ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಬೊಕಾರೊ ಜಿಲ್ಲೆಯ ತುಪ್ಕಾಡಿಹ್‌ ನಿಲ್ದಾಣದ ಬಳಿ ಉಕ್ಕಿನ ಸಾಗಣೆಯನ್ನು ಹೊತ್ತೊಯ್ಯುತ್ತಿದ್ದ ಸರಕು ಸಾಗಣೆ ರೈಲುಗಳ ಎರಡು ವ್ಯಾಗನ್‌ ಹಳಿತಪ್ಪಿದೆ.

ಇದರಿಂದಾಗಿ 14 ಎಕ್‌್ಸಪ್ರೆಸ್‌‍ ರೈಲುಗಳು ಸೇರಿದಂತೆ 15 ರೈಲುಗಳನ್ನು ಬೇರೆಡೆಗೆ ತಿರುಗಿಸಿದ್ದೇವೆ ಎಂದು ಆಗ್ನೇಯ ವಿಭಾಗದ ಆದ್ರಾ ವಿಭಾಗದ ವಿಭಾಗೀಯ ರೈಲ್ವೆ ವ್‌ಯವಸ್ಥಾಪಕ (ಡಿಆರ್‌ಎಂ) ಸುಮಿತ್‌ ನರುಲಾ ತಿಳಿಸಿದ್ದಾರೆ. ಗೂಡ್‌್ಸರೈಲು ಬೊಕಾರೊ ಸ್ಟೀಲ್‌ ಪ್ಲಾಂಟ್‌ನಿಂದ ಉಕ್ಕಿನ ಸರಕುಗಳನ್ನು ಸಾಗಿಸುತ್ತಿತ್ತು ಮತ್ತು ತುಪ್ಕಡಿಹ್‌ ಮತ್ತು ಬೊಕಾರೊ ನಿಲ್ದಾಣಗಳ ನಡುವಿನ ಮುಖ್ಯ ಮಾರ್ಗದಲ್ಲಿ ಪಲ್ಟಿಯಾಗಿದೆ.

ಸುಗಮ ಸಂಚಾರಕ್ಕಾಗಿ ಮತ್ತೊಂದು ಮಾರ್ಗವನ್ನು ಮರುಸ್ಥಾಪಿಸುವ ಕೆಲಸ ಬೆಳಿಗ್ಗೆ ಪೂರ್ಣಗೊಳಿಸಿ ಒಂದು ಮಾರ್ಗವನ್ನು ಸರಿಪಡಿಸಲಾಗಿದೆ ಎಂದು ನರುಲಾ ಹೇಳಿದರು.

RELATED ARTICLES

Latest News