Saturday, September 14, 2024
Homeಮನರಂಜನೆ'ಗೋಪಿಲೋಲ'ನ ಹೊಸ ಗಾನಬಜಾನ…

‘ಗೋಪಿಲೋಲ’ನ ಹೊಸ ಗಾನಬಜಾನ…

ಗೋಪಿಲೋಲ ಸಿನಿಮಾ ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈಗಾಗಲೇ ಈ ಚಿತ್ರದ ಎರಡು ಗೀತೆಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು, ಇದೀಗ ಮೂರನೇ ಹಾಡು ಬಿಡುಗಡೆ ಮಾಡಲಾಗಿದೆ. ಕೇಶವ ಚಂದ್ರ ಬರೆದ ಸಾಹಿತ್ಯಕ್ಕೆ ವಿಜಯ್ ಪ್ರಕಾಶ್ ಹಾಗೂ ವಾರಿಜಶ್ರೀ ಕಂಠ ಕುಣಿಸಿದ್ದಾರೆ. ಮಿಥುನ್ ಅಶೋಕನ್ ಟ್ಯೂನ್ ಹಾಕಿದ್ದು, ನಾಯಕ ಮಂಜುನಾಥ್ ಅರಸು ಹಾಗೂ ನಿಮಿಷಾ ಕೆ ಚಂದ್ರ ಇದ್ದಕ್ಕಿದ್ದಂತೆ ಪ್ರಪಂಚವೆಲ್ಲಾ ಯಾಕೋ ಸುತ್ತಿದಂಗೆ ಆಗುತೈತೆ ಅಂತಾ ಕುಣಿದು ಕುಪ್ಪಳಿಸಿದ್ದಾರೆ.

ಆರ್ ರವೀಂದ್ರ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಗೋಪಿಲೋಲ ಸಿನಿಮಾವನ್ನು ಎಸ್.ಆರ್. ಸನತ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಸಹ ನಿರ್ಮಾಪಕರಾಗಿ ಚಿತ್ರದ ನಾಯಕ ಮಂಜುನಾಥ್ ಅರಸು ಸಾಥ್ ಕೊಟ್ಟಿದ್ದಾರೆ‌. ನಟಿ ಜಾಹ್ನವಿ, ಎಸ್.ನಾರಾಯಣ್, ಪದ್ಮಾ ವಾಸಂತಿ, ಕೆಂಪೇಗೌಡ, ಡಿಂಗ್ರಿ ನಾಗರಾಜ್, ರೇಖಾ ದಾಸ್, ನಾಗೇಶ್ ಯಾದವ್, ಸ್ವಾತಿ, ಹಿರಿಯ ನಿರ್ದೇಶಕ ಜೋಸೈಮನ್ ಸೇರಿದಂತೆ ತೆಲುಗು ನಟ ಸಪ್ತಗಿರಿ ತಾರಾಬಳಗದಲ್ಲಿದ್ದಾರೆ.

ಗೋಪಿಲೋಲ ಸಿನಿಮಾಗೆ ಕೇಶವಚಂದ್ರ ಚಿತ್ರಕಥೆ ಸಂಭಾಷಣೆ ಬರೆದಿದ್ದು, ಕೆಎಂ ಪ್ರಕಾಶ್ ಸಂಕಲನ, ಮಿದುನ್ ಅಸೋಕನ್ ಚೆನ್ನೈ ಸಂಗೀತ, ರಾಕೇಶ್ ಆಚಾರ್ಯ ಹಿನ್ನೆಲೆ ಸಂಗೀತ, ಸೂರ್ಯಕಾಂತ್ ಎಚ್ ಕ್ಯಾಮೆರಾ ವರ್ಕ್, ಥ್ರಿಲ್ಲರ್ ಮಂಜು, ಜಾನಿ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಸದ್ಯ ಚಿತ್ರತಂಡ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಭರ್ಜರಿಯಾಗಿ ಪ್ರಚಾರ ಕಾರ್ಯ ನಡೆಸುತ್ತಿದೆ.

RELATED ARTICLES

Latest News