Friday, November 22, 2024
Homeಇದೀಗ ಬಂದ ಸುದ್ದಿರಾಜ್ಯದ 4 ಸಾರಿಗೆ ನಿಗಮಗಳ ನಿವೃತ್ತ ನೌಕರರ ವೇತನ ಪರಿಷ್ಕರಿಸಿ ಸರ್ಕಾರ ಆದೇಶ

ರಾಜ್ಯದ 4 ಸಾರಿಗೆ ನಿಗಮಗಳ ನಿವೃತ್ತ ನೌಕರರ ವೇತನ ಪರಿಷ್ಕರಿಸಿ ಸರ್ಕಾರ ಆದೇಶ

ಬೆಂಗಳೂರು,ಜೂ.28– ಸಾರ್ವಜನಿಕ ಸಾರಿಗೆ ಬಸ್‌‍ ದರ ಏರಿಕೆ ಮಾಡುವ ಪ್ರಸ್ತಾಪದ ಮಧ್ಯೆಯೇ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನಿವೃತ್ತ ನೌಕರರಿಗೆ ವೇತನ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

2023ರ ಮಾರ್ಚ್‌ನಲ್ಲಿ ನಿವೃತ್ತಿಯಾದ ನೌಕರರಿಗೆ ಶೇ.15ರಷ್ಟು ಹೆಚ್ಚುವರಿ ನಿವೃತ್ತಿ ವೇತನ ಇನ್ನು ಮುಂದೆ ಸಿಗಲಿದೆ. 2023ರ ಮಾರ್ಚ್‌ನಲ್ಲಿ ನಿವೃತ್ತಿ ಹೊಂದಿದ ಅಧಿಕಾರಿ ಮತ್ತು ನೌಕರರಿಗೆ 2019ರ ಡಿಸೆಂಬರ್‌ 31ರಂದು ಅವರು ಪಡೆಯುತ್ತಿದ್ದ ಮೂಲವೇತನ ಪರಿಗಣಿಸಿ ಶೇ.15ರಷ್ಟು ಹೆಚ್ಚಿಸಿ ವೇತನ ಶ್ರೇಣಿ ಪರಿಷ್ಕರಿಸಲು ಆದೇಶ ಹೊರಡಿಸಲಾಗಿದೆ.

ನಾಲ್ಕು ನಿಗಮಗಳಿಗೆ 220 ಕೋಟಿ ರೂ:
ನಿವೃತ್ತಿಯಾದ ನೌಕರರಿಗೆ ವೇತನ ಪರಿಷ್ಕರಣೆಯ ಹೆಚ್ಚಿಸಿದ ಹಣ ನೀಡಲು ನಾಲ್ಕು ಸಾರಿಗೆ ನಿಗಮಗಳಿಗೆ ಅಂದಾಜು 220 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

2023ರ ಮಾರ್ಚ್‌ 1ರಂದು ಸಂಸ್ಥೆಯ ಸೇವೆಯಲ್ಲಿದ್ದ ಅಧಿಕಾರಿ ನೌಕರರಿಗೆ 2020ರ ಜನವರಿ 1 ರಿಂದ 2023ರ ಫೆಬ್ರವರಿ 28ರ ಅವಧಿಯನ್ನು ನೋಷನಲ್‌ ಆಗಿ ಪರಿಗಣಿಸಿ ವೇತನ ನಿಗದಿಪಡಿಬೇಕು. ಈ ವರ್ಷದ ಕೊನೆಯಲ್ಲಿ ನಿವೃತ್ತಿ ನೌಕರರಿಗೆ ವೇತನ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

RELATED ARTICLES

Latest News