Thursday, September 19, 2024
Homeರಾಜ್ಯಸೀಮಿತ ಅವಧಿಯ ಪರಿಷ್ಕೃತ ವೇತನ ನಿಗದಿಗೆ ಕೆಎಸ್‌‍ಆರ್‌ಟಿಸಿ ಅಸ್ತು

ಸೀಮಿತ ಅವಧಿಯ ಪರಿಷ್ಕೃತ ವೇತನ ನಿಗದಿಗೆ ಕೆಎಸ್‌‍ಆರ್‌ಟಿಸಿ ಅಸ್ತು

ಬೆಂಗಳೂರು,ಜೂ.28– ಕಳೆದ 2020ರ ಜನವರಿ 1ರಿಂದ 2023ರ ಫೆ.28ರವರೆಗಿನ ಅವಧಿಯಲ್ಲಿ ಸೇವಾ ವಿಮುಕ್ತಿ ಹೊಂದಿದ ಅಧಿಕಾರಿ ಮತ್ತು ನೌಕರರಿಗೆ ಉಪದಾನ ಹಾಗೂ ನಿವೃತ್ತಿ ಗಳಿಕೆ ನಗದೀಕರಣ ಪಾವತಿ ಮಾಡಲು ರಾಜ್ಯ ರಸ್ತೆ ಸಾರಿಗೆ ನಿಗಮ ನಿರ್ಧರಿಸಿದೆ.

ಈ ಅವಧಿಯನ್ನು ನೋಷನಲ್‌ ಆಗಿ ಪರಿಗಣಿಸಿ ವೇತನ ನಿಗದಿಪಡಿಸಿ ಅಂತಿಮ ಆರ್ಥಿಕ ಸೌಲಭ್ಯಗಳನ್ನು ಪಾವತಿ ಮಾಡಲು ಕೆಎಸ್‌‍ಆರ್‌ಟಿಸಿ ನಿರ್ಧರಿಸಿದೆ. ನಿಗದಿಪಡಿಸಿದ ವೇತನವನ್ನು ಅಧಿಕಾರಿ ಮತ್ತು ಅಂತಿಮ ದಿನಾಂಕದಿಂದ ಪಡೆಯುತ್ತಿದ್ದ ಮೂಲ ವೇತನವನ್ನು ಪರಿಗಣಿಸಿ ಅಂತಿಮ ಆರ್ಥಿಕ ಸೌಲಭ್ಯಗಳಾದ ಉಪದಾನ ಮತ್ತು ನಿವೃತ್ತಿ ಗಳಿಕೆ ರಜೆ ನಗದೀಕರಣಗಳನ್ನು ಮಾತ್ರ ಲೆಕ್ಕಾಚಾರ ಮಾಡಿ ಪಾವತಿಸಲು ಅನುಮೋದನೆ ನೀಡಲಾಗಿದೆ.

ನಿವೃತ್ತ ನೌಕರರಿಗೆ ಸಂಬಂಧಿಸಿದಂತೆ ನೌಕರರಿಗೆ ಪರಿಷ್ಕೃತ ವೇತನ ನಿಗದಿ ಪಟ್ಟಿಗಳನ್ನು ಆ.31ರೊಳಗೆ ತಯಾರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೆಎಸ್‌‍ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶ ವಿ.ಅನ್ಬುಕುಮಾರ್‌ ತಿಳಿಸಿದ್ದಾರೆ.

ಗಳಿಕೆ ರಜೆ ನಗದೀಕರಣ ಬಿಲ್‌ನಲ್ಲಿ ಶಾಸನಬದ್ಧ ಕಡಿತಗಳನ್ನು ಹಾಗೂ ಅಧಿಕಾರಿ ನೌಕರರಿಂದ ಬರಬೇಕಾದ ಬಾಕಿ ಮೊತ್ತವಿದ್ದಲ್ಲಿ ಕಡಿತಗೊಳಿಸಿ ಪಾವತಿಸಬೇಕಾದ ನಿವ್ವಳ ಮೊತ್ತದ ಕ್ಲೈಮ್‌ಗಳನ್ನು ಸೆ.30ರೊಳಗೆ ಸಿದ್ಧಪಡಿಸಲು ಸೂಚಿಸಿದ್ದಾರೆ.

ಈ ಕ್ಲೈಮ್‌ಗಳನ್ನು ಸಾಧ್ಯವಾದರೆ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಪಾವತಿಸಲು ಆಯಾ ಸಂಸ್ಥೆಗಳು ತಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದ್ದಾರೆ.

RELATED ARTICLES

Latest News