Friday, November 22, 2024
Homeರಾಷ್ಟ್ರೀಯ | Nationalಶತ್ರುದೇಶಕ್ಕೆ ವಲಸೆ ಹೋದವರ ಆಸ್ತಿ, ಷೇರು ಮಾರಾಟಕ್ಕೆ ಮೋದಿ ಸರ್ಕಾರ ಸಿದ್ಧತೆ

ಶತ್ರುದೇಶಕ್ಕೆ ವಲಸೆ ಹೋದವರ ಆಸ್ತಿ, ಷೇರು ಮಾರಾಟಕ್ಕೆ ಮೋದಿ ಸರ್ಕಾರ ಸಿದ್ಧತೆ

ನವದೆಹಲಿ,ಜ.12-ಶತ್ರುದೇಶಕ್ಕೆ ವಲಸೆ ಹೊಗಿರುವವರ ಆಸ್ತಿ,ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಸುಮಾರು 84 ಕಂಪನಿಗಳಲ್ಲಿ 2.91 ಲಕ್ಷಕ್ಕೂ ಹೆಚ್ಚು ಆಸ್ತಿಷೇರುಗಳನ್ನು ಮಾರಾಟ ಮಾಡಲು ಯೋಜಿಸುತ್ತಿದೆ. ಕಾಪೆರ್ರೇಟ್‍ಗಳಿಗೆ ಮತ್ತು ವ್ಯಕ್ತಿಗಳಿಗೆ ವಿವಿಧ ಹಂತಗಳಲ್ಲಿ ಮಾರಾಟ ಮಾಡಲು ಯೋಜಿಸುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸಾರ್ವಜನಿಕ ಸೂಚನೆಯ ಪ್ರಕಾರ. 1947 ಮತ್ತು 1962 ರ ನಡುವೆ ಪಾಕಿಸ್ತಾನ ಮತ್ತು ಚೀನಾದ ಪೌರತ್ವವನ್ನು ಪಡೆದ ಜನರು ಬಿಟ್ಟುಹೋದ ಆಸ್ತಿಗಳನ್ನು ಶತ್ರು ಆಸ್ತಿ ಎಂದು ಕರೆಯಲಾಗುತ್ತದೆ. ಪ್ರಸ್ತಾವಿತ ಷೇರು ಮಾರಾಟವು ದೇಶದಲ್ಲಿನ ಶತ್ರು ಆಸ್ತಿವಿಲೇವಾರಿ ಮಾಡುವ ಸರ್ಕಾರದ ಉಪಕ್ರಮದ ಭಾಗವಾಗಿದೆ.

ಪ್ರಮುಖವಾಗಿ ಪಾಕಿಸ್ತಾನ ಮತ್ತು ಚೀನಾಕ್ಕೆ ವಲಸೆ ಹೋಗಿರುವ ವ್ಯಕ್ತಿಗಳ ಆಸ್ತಿಯನ್ನು ವಿಲೇವಾರಿ ಮಾಡಲಾಗುತ್ತಿದ್ದು , ಮೊದಲ ಕಂತಿನಲ್ಲಿ, ಸರ್ಕಾರವು 20 ಕಂಪನಿಗಳಲ್ಲಿ ಸುಮಾರು 1.88 ಲಕ್ಷ ಷೇರುಗಳನ್ನು ಮಾರಾಟ ಮಾಡಲು ನೋಡುತ್ತಿದೆ.

ಜ.17ರಂದು ಟಿ-20 ಕ್ರಿಕೆಟ್ : ಬಿಎಂಟಿಸಿಯಿಂದ ಹೆಚ್ಚುವರಿ ಬಸ್

ವ್ಯಕ್ತಿಗಳು, ಎನ್‍ಆರ್‍ಐಗಳು, ಹಿಂದೂ ಅವಿಭಜಿತ ಕುಟುಂಬಗಳು ಸೇರಿದಂತೆ 10 ವರ್ಗದ ಖರೀದಿದಾರರಿಂದ ಬಿಡ್‍ಗಳನ್ನು ಆಹ್ವಾನಿಸಿದೆ. (ಎಚ್‍ಯುಎಫ್), ಅರ್ಹ ಸಾಂಸ್ಥಿಕ ಖರೀದಿದಾರರು (ಕ್ಯೂಐಬಿ), ಟ್ರಸ್ಟ್‍ಗಳು ಮತ್ತು ಕಂಪನಿಗಳು ಆರ್ಹರಾಗಿರುತ್ತಾರೆ.

ಫೆಬ್ರವರಿ 8 ರೊಳಗೆ ಖರೀದಿದಾರರು ತಾವು ಖರೀದಿಸಲು ಬಯಸುವ ಷೇರುಗಳಿಗೆ ಬಿಡ್‍ಗಳನ್ನು ಇರಿಸಬೇಕಾಗುತ್ತದೆ ಮತ್ತು ಸರ್ಕಾರವು ನಿಗದಿಪಡಿಸಿದ ಮೀಸಲು ಬೆಲೆಗಿಂತ ಕೆಳಗೆ ನಮೂದಿಸಿದ ಯಾವುದೇ ಬೆಲೆಯನ್ನು ತಿರಸ್ಕರಿಸಲಾಗುತ್ತದೆ. ನಿರೀಕ್ಷಿತ ಬಿಡ್ದಾರರಿಂದ ಮೀಸಲು ಬೆಲೆಯನ್ನು ಗೌಪ್ಯವಾಗಿ ಇರಿಸಲಾಗುತ್ತದೆ. 84 ಕಂಪನಿಗಳ 2,91,536 ಷೇರುಗಳನ್ನು ಕಸ್ಟೋಡಿಯನ್ ಆಫೆ ಎನಿಮಿ ಪ್ರಾಪರ್ಟೀಸ್ ಫೆರ್ ಇಂಡಿಯಾ (ಸಿಇಪಿಐ) ಹೊಂದಿದೆ.

RELATED ARTICLES

Latest News