ಬೆಳಗಾವಿ,ಡಿ.4- ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಪರೀಕ್ಷೆಗಳ ಅಕ್ರಮಗಳನ್ನು ತಡೆಗಟ್ಟಲು ಗಂಭೀರ ಚಿಂತನೆ ನಡೆಸಿರುವ ರಾಜ್ಯಸರ್ಕಾರ ಈ ನಿಟ್ಟಿನಲ್ಲಿ ಕಠಿಣ ಕಾನೂನು ರೂಪಿಸಲು ಮುಂದಾಗಿದೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದಿನಿಂದ ಆರಂಭಗೊಂಡಿರುವ ಚಳಿಗಾಲದ ಅಧಿವೇಶನದಲ್ಲಿ 19 ಕ್ಕೂ ಹೆಚ್ಚು ವಿಧೇಯಕಗಳನ್ನು ಮಂಡಿಸುವ ತಯಾರಿ ನಡೆದಿದೆ.
ಕಳೆದ ಅಧಿವೇಶನದಿಂದಲೂ ನೆನೆಗುದಿಗೆ ಬಿದ್ದಿರುವ ನಾಲ್ಕು ವಿಧೇಯಕಗಳು, ಸಚಿವ ಸಂಪುಟ ಸಭೆಯಿಂದ ಅಂಗೀಕಾರಗೊಂಡಿರುವ ಎರಡು ವಿಧೇಯಕಗಳು, ಪರಿಶೀಲನಾ ಸಮಿತಿಯಿಂದ ಅನುಮತಿ ಪಡೆಯಲಾದ ಆರು ವಿಧೇಯಕಗಳನ್ನು ಮಂಡಿಸಲು ತಯಾರಿ ನಡೆಸಲಾಗಿದೆ.
ಜೊತೆಗೆ ಸಂಬಂಧಿಸಿದ ಇಲಾಖೆಗಳಿಂದ ಪೂರ್ವಾನುಮತಿಯಾಗಿ ಕಾಯಿಸಿರುವ ಏಳು ವಿಧೇಯಕಗಳನ್ನು ಮಂಡಿಸುವ ಸಾಧ್ಯತೆ ಇದೆ. ಇದರಲ್ಲಿ ಪ್ರಮುಖವಾಗಿ ಸಚಿವ ಸಂಪುಟ ಸಭೆಯಿಂದ ಅಂಗೀಕಾರಗೊಂಡಿರುವ ಕರ್ನಾಟಕ ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ವಿಧೇಯಕ ಮಂಡನೆಯಾಗಲಿದೆ. ಪರೀಕ್ಷೆಯಲ್ಲಿನ ಅಕ್ರಮಗಳು ಹಾಗೂ ಅಹಿತಕರವಾದ ಕಾರ್ಯವಿಧಾನಗಳನ್ನು ನಿಯಂತ್ರಿಸಲು 2023 ರ ಮಸೂದೆಯನ್ನು ಗೃಹ ಇಲಾಖೆಯಿಂದ ರೂಪಿಸಲಾಗಿದೆ. ಇದನ್ನು ಮಂಡಿಸುವ ತಯಾರಿಗಳಾಗಿವೆ.
ಅತಿಥಿ ಉಪನ್ಯಾಸಕರ ಖಾಯಂ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ : ಮಧುಬಂಗಾರಪ್ಪ
ಒಂದು ವೇಳೆ ಕಾಯ್ದೆ ಅಂಗೀಕಾರಗೊಂಡರೆ ಪರೀಕ್ಷಾ ಅಕ್ರಮಗಳಲ್ಲಿ ತೊಡಗಿದವರಿಗೆ ಕಠಿಣ ಶಿಕ್ಷೆ ವಿಧಿಸುವ ಮತ್ತು ಅಕ್ರಮಗಳಿಗೆ ನೆರವಾಗುವವರನ್ನು ಉಗ್ರವಾಗಿ ದಂಡಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಉಳಿದಂತೆ ಕರ್ನಾಟಕ ಕರಾವಳಿ ಅಭಿವೃದ್ಧಿ ನಿಗಮ ತಿದ್ದುಪಡಿ ವಿಧೇಯಕ 2021, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ 2023, ವೈದ್ಯಕೀಯ ಪದವೀಧರ ಕಡ್ಡಾಯ ಗ್ರಾಮೀಣ ಸೇವೆ ತಿದ್ದುಪಡಿ ವಿಧೇಯಕ,
ಕರ್ನಾಟಕ ಸರಕು ಮತ್ತು ಸೇವೆಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ವಿಧೇಯಕ, ಗದಗ ಬೆಟ್ಟಗೇರಿ ವ್ಯಾಪಾರ ಸಂಸ್ಕøತಿ ಮತ್ತು ವಸ್ತು ಪ್ರದರ್ಶನ ವಿಧೇಯಕ, ಕರ್ನಾಟಕ ಪರಿಶಿಷ್ಟ ಜಾತಿ ಪಂಗಡಗಳ ಉಪ ಮಂಜೂರತಿ ಮಸೂದೆ, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಶ್ರೀ ರೇಣುಕಾ ಎಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ರಚನೆ ವಿಧೇಯಕ,
ವಿಧಾನಮಂಡಲದ ಉಭಯ ಸದನಗಳಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ
ಕರ್ನಾಟಕ ಅಭಿವೃದ್ಧಿ ಮಂಡಳಿ ಮೈಸೂರು ನಗರ ಅಭಿವೃದ್ಧಿ ವಿಧೇಯಕ, ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣೆ ಪ್ರಾಧಿಕಾರ, ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ವಿಧೇಯಕ, ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕ, ಕರ್ನಾಟಕ ನಗರ ಮತ್ತು ಯೋಜನೆ ತಿದ್ದುಪಡಿ ವಿಧೇಯಕ, ಕರ್ನಾಟಕ ಸಿವಿಲ್ ಕೋರ್ಟ್ ತಿದ್ದುಪಡಿ ವಿಧೇಯಕ, ಕರ್ನಾಟಕ ಹೈಕೋರ್ಟ್ ತಿದ್ದುಪಡಿ ವಿಧೇಯಕ, ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್‍ಗಳ ಪರಿಷತ್ ಮಸೂದೆ, ಕರ್ನಾಟಕ ಆಡಳಿತಾತ್ಮಕ ಕಾರ್ಯ ವಿಧಾನ ಮಸೂದೆಗಳನ್ನು ಮಂಡಿಸಲು ತಯಾರಿ ನಡೆಸಲಾಗಿದೆ.