Friday, May 3, 2024
Homeರಾಜ್ಯವಿಧಾನಮಂಡಲದ ಉಭಯ ಸದನಗಳಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ

ವಿಧಾನಮಂಡಲದ ಉಭಯ ಸದನಗಳಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ

ಬೆಳಗಾವಿ,ಡಿ.4- ಇತ್ತೀಚೆಗೆ ಅಗಲಿರುವ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಡಿ.ಬಿ.ಚಂದ್ರೇಗೌಡ ಸೇರಿದಂತೆ ಹಲವು ಗಣ್ಯರಿಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಲಾಪ ಆರಂಭದಲ್ಲೇ ಸಭಾಧ್ಯಕ್ಷ ಯು.ಟಿ.ಖಾದರ್ ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಿದರು. ಮಾಜಿ ಸಚಿವ ಶ್ರೀರಂಗದೇವರಾಯಲು, ವಿಧಾನಸಭೆಯ ಮಾಜಿ ಸದಸ್ಯರಾದ ಸಿ.ವೆಂಕಟೇಶಪ್ಪ, ಶ್ರೀಕಾಂತ್‍ಶೆಟ್ಟಪ್ಪ ಭೀಮಣ್ಣವರ ವಿಲಾಸಬಾಬು ಆಲಮೇಕರ್, ಈಶಾನ್ಯ ರಾಜ್ಯಗಳ ಮಾಜಿ ರಾಜ್ಯಪಾಲ ಪಿ.ಬಿ.ಆಚಾರ್ಯ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಸದನದಲ್ಲಿ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು.

ಸಭಾಧ್ಯಕ್ಷ ಯು.ಟಿ.ಖಾದರ್‍ರವರು ಅಗಲಿದ ಗಣ್ಯರ ಪರಿಚಯ ಮಾಡಿಕೊಟ್ಟರು. ಡಿ.ಬಿ.ಚಂದ್ರೇಗೌಡರವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ದಾರದಹಳ್ಳಿ ಗ್ರಾಮದಲ್ಲಿ ಜನಿಸಿದರು. ಕಾನೂನು ಪದವೀಧರರಾಗಿದ್ದು, ವೃತ್ತಿಯಲ್ಲಿ ವಕೀಲರಾಗಿದ್ದರು. ಸಂಗೀತ, ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅವರು ನನ್ನ ಗೋಪಾಲ ಚಲನಚಿತ್ರದಲ್ಲೂ ಅಭಿನಯಿಸಿದ್ದರು.

ಪ್ರಜಾಪ್ರಭುತ್ವದ ಗಟ್ಟಿ ಧ್ವನಿಯ ಪ್ರತಿಪಾದಕರಾಗಿದ್ದ ಚಂದ್ರೇಗೌಡರು ನರಗುಂದದಲ್ಲಿ ನಡೆದ ಗೋಲಿಬಾರ್ ಪ್ರಕರಣವನ್ನು ವಿರೋಸಿ ಬೆಂಗಳೂರಿಗೆ ರೈತ ಜಾಥಾ ಏರ್ಪಡಿಸಿದ್ದರು. 1971, 1976, 2009 ರಲ್ಲಿ ಲೋಕಸಭಾ ಸದಸ್ಯರಾಗಿ 1986 ರಿಂದ 1989 ರವರೆಗೆ ರಾಜ್ಯಸಭಾ ಸದಸ್ಯರಾಗಿ 1978 ರಿಂದ 1983 ರವರೆಗೆ ವಿಧಾನಪರಿಷತ್ ಸದಸ್ಯರಾಗಿ ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. 1983 ರಲ್ಲಿ ಪ್ರಥಮ ಬಾರಿಗೆ ಏಳನೇ ವಿಧಾನಸಭೆಗೆ ತೀರ್ಥಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಸ್ನೇಹಿತರ ಜೊತೆ ಸೇರಿ ತಂಗಿಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪಾಪಿ ಅಣ್ಣ

ವಿಧಾನಸಭೆಯ ಅಧ್ಯಕ್ಷ, ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 1989 ರಲ್ಲಿ ಪುನರ್ ಆಯ್ಕೆಯಾಗಿದ್ದ ಅವರು ವಿರೋಧಪಕ್ಷದ ನಾಯಕರಾಗಿ ಕೆಲಸ ಮಾಡಿದ್ದರು. 1999 ರಲ್ಲಿ ಶೃಂಗೇರಿ ಕ್ಷೇತ್ರದಿಂದ ಚುನಾಯಿತರಾಗಿದ್ದ ಚಂದ್ರೇಗೌಡರು ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರುಗಳಾಗಿ ಕೆಲಸ ನಿರ್ವಹಿಸಿದ್ದರು.

ಶ್ರೀರಂಗದೇವರಾಯಲು ಅವರು ಆನೆಗುಂದಿ ಗ್ರಾಮದಲ್ಲಿ ಜನಿಸಿದ್ದರು. ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಿದ ಅವರು, ಕನಕಗಿರಿ ಕ್ಷೇತ್ರದಿಂದ 7,8 ನೇ ವಿಧಾನಸಭೆಗೆ ಗಂಗಾವತಿ ಕ್ಷೇತ್ರದಿಂದ 9,10 ಮತ್ತು 11 ನೇ ವಿಧಾನಸಭೆಗೆ ಪುನರ್ ಆಯ್ಕೆಯಾಗಿದ್ದರು. ಕಾಡ ಸಚಿವರಾಗಿಯೂ ಕೆಲಸ ಮಾಡಿದ್ದರು. ವಿಜಯನಗರದ ರಾಜ ವಂಶಸ್ಥರಾಗಿದ್ದ ಶ್ರೀರಂಗದೇವರಾಯಲು ಆಗಸ್ಟ್ 22 ರಂದು ನಿಧನ ಹೊಂದಿದರು ಎಂದು ವಿವರಿಸಿದರು.

ಪಿ.ಬಿ.ಆಚಾರ್ಯ ಅವರು ಉಡುಪಿ ಜಿಲ್ಲೆಯ ತೆಂಕಪೇಟೆಯಲ್ಲಿ ಜನಿಸಿದ್ದು, ಕಾನೂನು ಪದವೀಧರರಾಗಿದ್ದರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್‍ನ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂಬೈ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ನಾಗಾಲ್ಯಾಂಡ್ ರಾಜ್ಯಪಾಲರಾಗಿ ತ್ರಿಪುರ, ಅಸ್ಸಾಂ, ಅರುಣಾಚಲ ಪ್ರದೇಶ ಹಾಗೂ ಮಣಿಪುರ ರಾಜ್ಯಗಳಲ್ಲಿ ಹಂಗಾಮಿ ರಾಜ್ಯಪಾಲರಾಗಿ ಕೆಲಸ ನಿರ್ವಹಿಸಿದ್ದರು. ನವೆಂಬರ್ 10 ರಂದು ನಿಧನರಾಗಿದ್ದಾರೆಂದು ತಿಳಿಸಿದರು.

ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ನವೆಂಬರ್ 22 ರಂದು ಸೇನಾಪಡೆ ಮತ್ತು ಉಗ್ರರ ನಡುವೆ ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ ಮಂಗಳೂರು ಜಿಲ್ಲೆಯ ಕ್ಯಾಪ್ಟನ್ ಎಂ.ಬಿ.ಪ್ರಾಂಜಲ್ ಸೇರಿದಂತೆ ಕ್ಯಾಪ್ಟನ್ ಶುಭನ್ ಗುಪ್ತಾ, ಹವಲ್ದಾರ್ ಅಬ್ದುಲ್ ಮಜಿದ್, ಲಾನ್ಸ್‍ನಾಯ್ಕ್ ಸಂಜಯ್ ಬಿಸ್ಟ್ ಮತ್ತು ಪಾರಾಟ್ರುಪರ್ ಸಚಿನ್ ಲಾರ್ ಸೇರಿದಂತೆ ಐವರು ವೀರಯೋಧರು ಹುತಾತ್ಮರಾಗಿದ್ದಾರೆ ಎಂದು ವಿವರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಡಿ.ಬಿ.ಚಂದ್ರೇಗೌಡರವರು ಉತ್ತಮ ವಾಜ್ಮಿಗಳಾಗಿದ್ದರು, ಸಂಸ್ಕøತಿಯ ವ್ಯವಹಾರಗಳ ಬಗ್ಗೆ ಅಪಾರ ತಿಳುವಳಿಕೆ ಹೊಂದಿದ್ದರು ಎಂದು ಗುಣಗಾನ ಮಾಡಿದರು. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯ ನ್ನು ಹುಡುಕುವಂತೆ ಬಿಜೆಪಿಯ ಪ್ರಮುಖ ನಾಯಕರಾದ ಅನಂತಕುಮಾರ್ ಮತ್ತು ಯಡಿಯೂರಪ್ಪನವರು ತಮಗೆ ಸಲಹೆ ನೀಡಿದ್ದರು.

ತಾವು ಚಂದ್ರೇಗೌಡರ ಹೆಸರನ್ನು ಸೂಚಿಸಿ, ಖುದ್ದು ಚಂದ್ರೇಗೌಡರಿಗೆ ದೂರವಾಣಿ ಕರೆ ಮಾಡಿದ್ದೆ, ಅದಕ್ಕೆ ಪ್ರತಿಕ್ರಿಯಿಸಿದ ಅವರು, ನೀನು ಹೇಳುವುದಾದರೆ ನಾನು ಈಗಲೇ ಬಸ್ ಹತ್ತಿ ಬೆಂಗಳೂರಿಗೆ ಬರುತ್ತೇನೆ ಎಂದು ಉತ್ಸಾಹ ತೋರಿದ್ದರು. ಕಾನೂನಿನ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ನಮಗೆ ಯಾವುದೇ ಸಮಸ್ಯೆಗಳಾದರೂ ಅವರ ಬಳಿ ಸಲಹೆ ಕೇಳುತ್ತಿದ್ದೆವು ಎಂದು ಸ್ಮರಿಸಿಕೊಂಡರು.

ಪಿ.ಬಿ.ಆಚಾರ್ಯ ಈಶಾನ್ಯ ರಾಜ್ಯಗಳಲ್ಲಿ ರಾಜ್ಯಪಾಲರಾಗಿದ್ದಾಗ ಕರ್ನಾಟಕದಲ್ಲಿ ಈ ಭಾಗದ ಜನರ ಮೇಲೆ ದಾಳಿ ಮಾಡುವ ಹುಸಿ ಬೆದರಿಕೆಯ ಕರೆ ಬಂದಿತ್ತು. ಅದರಿಂದ ಆತಂಕಗೊಂಡ ಸಾವಿರಾರು ಜನ ಏಕಾಏಕಿ ತಮ್ಮ ಊರಿಗೆ ತೆರಳಲು ಮುಂದಾದರು. ಒಂದೇ ಒಂದು ರೈಲು ವ್ಯವಸ್ಥೆ ಇತ್ತು. ಅವರಲ್ಲಿ ಒಂದು ಸಾವಿರ ಜನ ಮಾತ್ರ ಪ್ರಯಾಣಿಸುವ ವ್ಯವಸ್ಥೆ ಇತ್ತು. ಮೂರ್ನಾಲ್ಕು ಸಾವಿರ ಜನ ಏಕಾಏಕಿ ಮುನ್ನುಗ್ಗಿದ್ದರಿಂದಾಗಿ ಸಮಸ್ಯೆ ಎದುರಾಯಿತು. ಆಗ ರಾಜ್ಯಪಾಲರಾಗಿದ್ದ ಆಚಾರ್ಯ ಅವರು ತಮ್ಮ ನೆರವಿಗೆ ಧಾವಿಸಿದ್ದರು ಎಂದು ಹೇಳಿದರು.

ಅಬ್ಬರಿಸುತ್ತಿದೆ ಮೈಚಾಂಗ್ ಚಂಡಮಾರುತ

ಜಮ್ಮು-ಕಾಶ್ಮೀರದ ಧಾಳಿಯಲ್ಲಿ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ಮತ್ತಷ್ಟು ಸಹಾಯಧನ ನೀಡಬೇಕೆಂದು ಅಶೋಕ್ ಸಲಹೆ ನೀಡಿದರು. ಗೃಹಸಚಿವ ಜಿ.ಪರಮೇಶ್ವರ್ ಮಾತನಾಡಿ, ಡಿ.ಬಿ.ಚಂದ್ರೇಗೌಡ ಅವರು ಇಂದಿರಾಗಾಂಯವರಿಗೆ ಚಿಕ್ಕಮಗಳೂರು ಕ್ಷೇತ್ರ ಬಿಟ್ಟುಕೊಟ್ಟು ದೇಶದಲ್ಲೇ ರಾಜಕೀಯ ಬದಲಾವಣೆಗೆ ನಾಂದಿ ಹಾಡಿದ್ದರು. ಅಂತಹ ಕ್ಯಾಪ್ಟನ್ ಪ್ರಾಂಜಲ್ ಯುವಕರಿಗೆ ಸೂರ್ತಿ ಎಂದು ಸ್ಮರಿಸಿಕೊಂಡರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಚಿವರಾದ ಎಚ್.ಕೆ.ಪಾಟೀಲ್, ಶಿವರಾಜ್ ತಂಗಡಗಿ, ಶಾಸಕರಾದ ಸಿ.ಎನ್.ಬಾಲಕೃಷ್ಣ, ಜನಾರ್ಧನ ರೆಡ್ಡಿ ಮತ್ತಿತರರು ಸಂತಾಪ ಸೂಚಿಸಿದರು.

RELATED ARTICLES

Latest News