Thursday, May 2, 2024
Homeರಾಷ್ಟ್ರೀಯಸ್ನೇಹಿತರ ಜೊತೆ ಸೇರಿ ತಂಗಿಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪಾಪಿ ಅಣ್ಣ

ಸ್ನೇಹಿತರ ಜೊತೆ ಸೇರಿ ತಂಗಿಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪಾಪಿ ಅಣ್ಣ

ಫುಲ್ಬಾನಿ,ಡಿ.4- ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ನಾಲ್ವರು ಸ್ನೇಹಿತರೊಂದಿಗೆ ತನ್ನ ಸಹೋದರಿಯ ಮೇಲೆ ಅತ್ಯಾಚಾರವೆಸಗಿ ನಂತರ ಆಕೆಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನ 3 ರಂದು ಚಕಪಾಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ, ಆದರೆ ಪೊಲೀಸರು ಪ್ರಕರಣವನ್ನು ಭೇದಿಸಿದ ನಂತರ ವ್ಯಕ್ತಿ ಮತ್ತು ಅವನ ಸ್ನೇಹಿತರನ್ನು ಇದೀಗ ಬಂಧಿಸಲಾಗಿದೆ.

25ರ ಹರೆಯದ ಮಹಿಳೆಗೆ ಆತನ ಸಹೋದರ ತನ್ನ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ತಿಳಿದು ಬಂದಿದೆ. ಅದನ್ನು ಕೊನೆಗೊಳಿಸುವಂತೆ ಕೇಳಿಕೊಂಡಳು ಮತ್ತು ಇಲ್ಲದಿದ್ದರೆ ಇತರರಿಗೆ ಈ ಬಗ್ಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಳು. ಆಕೆಯನ್ನು ತಡೆಯಲು ಆತ ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢದಲ್ಲಿ `ಕೈ’ಕೊಟ್ಟ ಗ್ಯಾರಂಟಿಗಳು

ಘಟನೆ ನಡೆದ ದಿನ ಮಹಿಳೆ ಸಿಯಾಲಿ ಎಲೆಗಳನ್ನು ಸಂಗ್ರಹಿಸಲು ಸಮೀಪದ ಕಾಡಿಗೆ ತೆರಳಿದ್ದಳು. ಅವಳ ಅಣ್ಣನೂ ತನ್ನ ಹಸುಗಳೊಂದಿಗೆ ಅಲ್ಲಿದ್ದ. ಆತ ತನ್ನ ನಾಲ್ವರು ಸ್ನೇಹಿತರನ್ನು ಕಾಡಿಗೆ ಕರೆಸಿ, ಕುಡಿದು ಕುಡಿತದ ಅಮಲಿನಲ್ಲಿ ಸರದಿಯಂತೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಜಗಳವಾಡುತ್ತಿದ್ದಂತೆಯೇ ಆಕೆಯ ಕತ್ತು ಹಿಸುಕಿ, ನಂತರ ಕೊಡಲಿಯಿಂದ ಹಲ್ಲೇ ನಡೆಸಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಚಾಕಪಾಡ್ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಲಲಿತ್ ಮೋಹನ್ ಸಾಗರ್ ತಿಳಿಸಿದ್ದಾರೆ. ನವೆಂಬರ್ 6 ರಂದು ಸಹೋದರ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ ಎಂದು ಅವರು ಹೇಳಿದರು.

ಮಹಿಳೆಯ ಕೊಳೆತ ಶವವು ನವೆಂಬರ್ 7 ರಂದು ಕಾಡಿನಲ್ಲಿ ಪತ್ತೆಯಾಗಿದೆ ಮತ್ತು ಮರಣೋತ್ತರ ಪರೀಕ್ಷೆಯಲ್ಲಿ, ಆಕೆಯ ಮೇಲೆ ಅನೇಕ ಜನರು ಅತ್ಯಾಚಾರವೆಸಗಿದ್ದಾರೆ ಮತ್ತು ನಂತರ ಕೊಂದಿದ್ದಾರೆ ಎಂದು ಗೊತ್ತಾಗಿತ್ತು.
ತನಿಖೆ ಆರಂಭಿಸಿದ ಪೊಲೀಸರು ಆಕೆಯ ಸಹೋದರ ಮತ್ತು ಸ್ನೇಹಿತರನ್ನು ಬಂಧಸಿದ್ದಾರೆ.

RELATED ARTICLES

Latest News