ಚಿತ್ರದುರ್ಗ,ಜೂ.1-ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರದ ಖಜಾನೆ ನಿರಂತರವಾಗಿ ಲೂಟಿಯಾಗುತ್ತಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
ಜೂ.3ರಂದು ನಡೆಯಲಿರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ಚಿತ್ರದುರ್ಗ ನಗರದ ಸಂತ ಜೋಸೆಫ್ ಕಾನ್ವೆಂಟ್‌ನಲ್ಲಿ ಮತಯಾಚನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರದ ಖಜಾನೆ ನಿರಂತರವಾಗಿ ಲೂಟಿಯಾಗುತ್ತಿದೆ. ವಾಲೀಕಿ ನಿಗಮ ಹಗರಣ ಸರ್ಕಾರದ ಖಜಾನೆಯ ಹಗಲು ದರೋಡೆಯಾಗಿದೆ ಎಂದು ದೂರಿದರು.
ಇದು ಭ್ರಷ್ಠಾಚಾರ ಅಲ್ಲ ಹಗಲು ದರೋಡೆಯಾಗಿದೆ. ಮಾರ್ಚಿನಲ್ಲಿ 180 ಕೋಟಿ ಹಣವನ್ನು ಬೇರೆಬೇರೆ ಆಕೌಂಟ್ ಓಪನ್ ಮಾಡಿ ವರ್ಗಾವಣೆ ಮಾಡಿದ್ದಾರೆ. ಚುನಾವಣೆಯ ಹಿನ್ನಲೆಯಲ್ಲಿ ನೆರೆರಾಜ್ಯವಾದ ಹೈದರಾಬಾದ್ ಮತ್ತು ತೆಲಂಗಾಣಕ್ಕೆ ಹಣ ಹೋಗಿದೆ.ಮುಖ್ಯಮಂತ್ರಿಗಳು ಇದುವರೆವಿಗೂ ಯಾವುದೇ ಹೇಳಿಕೆಯನ್ನು ನೀಡಿಲ್ಲ, ಹಣಕಾಸು ಇಲಾಖೆಯನ್ನು ನೋಡುತ್ತಿರುವವರ ಮುಖ್ಯಮಂತ್ರಿಗಳಾಗಿದ್ದಾರೆ.
ಈ ವೇಳೆಗೆ ಸಚಿವ ನಾಗೇಂದ್ರರವರ ರಾಜೀನಾಮೆಯನ್ನು ಪಡೆಯಬೇಕಿತ್ತು. ಈ ಪ್ರಕರಣವನ್ನು ನಿಸ್ಪಕ್ಷಪತವಾದ ತನಿಖೆಗೆ ಆದೇಶವನ್ನು ಮಾಡಬೇಕಿತ್ತು, ಅದನ್ನು ಮಾಡಿಲ್ಲ ಬಂಡತನದಿಂದ ಅವರನ್ನು ಉಳಿಸಿಕೊಳ್ಳುವ ಪ್ರಯತ್ನವನ್ನುಮುಖ್ಯಮಂತ್ರಿಗಳು ಮತ್ತು ಸಚಿವ ಸಂಪುಟದ ಸದಸ್ಯರು ಮಾಡುತ್ತಿದ್ದಾರೆ. ಇದು ಖಂಡನೀಯವಾದದು ಎಂದಿದ್ದಾರೆ.