Thursday, June 20, 2024
Homeಜಿಲ್ಲಾ ಸುದ್ದಿಗಳುಮೈಸೂರು : ಗುರಾಯಿಸಿ ನೋಡಿದ ಯುವಕನ ಕೊಚ್ಚಿ ಕೊಲೆ

ಮೈಸೂರು : ಗುರಾಯಿಸಿ ನೋಡಿದ ಯುವಕನ ಕೊಚ್ಚಿ ಕೊಲೆ

ಮೈಸೂರು, ಜೂ.1- ಗುರಾಯಿಸಿ ನೋಡಿದ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಉದಯಗಿರಿ ಪೊಲೀಸ್‌‍ ಠಾಣಾ ವ್ಯಾಪ್ತಿಯ ಶಾಂತಿನಗರದಲ್ಲಿ ನಡೆದಿದೆ. ಅರ್ಬಾಜ್‌ಖಾನ್‌(18) ಕೊಲೆಯಾದ ಯುವಕ.

ಶಾಂತಿನಗರದ ಲಾಲ್‌ ಮಸೀದಿ ಬಳಿ ಶಾದಿಲ್‌, ಶಹಬಾಜ್‌, ಶೋಯಬ್‌ ಹಾಗೂ ಸಾಹಿಲ್‌ ಎಂಬುವವರನ್ನು ಮೃತ ಅರ್ಬಾಜ್‌ಖಾನ್‌ ಗುರಾಯಿಸಿ ನೋಡಿದನೆಂದು ವಿನಾಕಾರಣ ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹೊಡೆದಾಟ ಅರ್ಬಾಜ್‌ಖಾನ್‌ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ. ಈ ಸಂಬಂಧ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News