Thursday, September 19, 2024
Homeರಾಷ್ಟ್ರೀಯ | National6 ವರ್ಷದ ಬಾಲಕಿ ಮತ್ತು ಮೇಕೆ ಮೇಲೆ ಸರ್ಕಾರಿ ನೌಕರನಿಂದ ಅತ್ಯಾಚಾರ

6 ವರ್ಷದ ಬಾಲಕಿ ಮತ್ತು ಮೇಕೆ ಮೇಲೆ ಸರ್ಕಾರಿ ನೌಕರನಿಂದ ಅತ್ಯಾಚಾರ

ಲಕ್ನೋ,ಅ.14 ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಆರು ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ನಂತರ ಮೇಕೆಯೊಂದಿಗೆ ಮೃಗೀಯ ಕೃತ್ಯ ಎಸಗಿದ್ದಕ್ಕಾಗಿ 57 ವರ್ಷದ ಸರ್ಕಾರಿ ಅಧಿಕಾರಿಯನ್ನು ಬಂಧಿಸಲಾಗಿದೆ.

ಸರ್ಕಾರಿ ಅಧಿಕಾರಿ ಅಧಿಕೃತ ಕೆಲಸಕ್ಕಾಗಿ ಗ್ರಾಮಕ್ಕೆ ಆಗಾಗ್ಗೆ ಬರುತ್ತಿದ್ದನು ಮತ್ತು ಹುಡುಗಿ ನೆರೆಹೊರೆಯವರ ಮಗುವಿನೊಂದಿಗೆ ಅಂಗಳದಲ್ಲಿ ಆಡುತ್ತಿದ್ದಾಗ ಯಾರೂ ಇಲ್ಲದಿರುವುದನು ಗಮನಿಸಿ ಅವರ ಮನೆಗೆ ಪ್ರವೇಶಿಸಿ ಈ ಕೃತ್ಯವೆಸಗಿದ್ದಾನೆ.

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ರಾಜ್ಯ ಸರ್ಕಾರ ಬಾಲಕಿಯ ಕುಟುಂಬಕ್ಕೆ 8.25 ಲಕ್ಷ ನೆರವು ಘೋಷಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಸೂಲ್‌ಪುರ ಗ್ರಾಮದ ನಿವಾಸಿ ಗಜೇಂದ್ರ ಸಿಂಗ್‌ ಅವರು ಶಿಕಾರ್‌ಪುರ ಬ್ಲಾಕ್‌ನಲ್ಲಿ ಕೃಷಿ ಅಭಿವೃದ್ಧಿ ಅಧಿಕಾರಿಯಾಗಿ (ಕೃಷಿ ರಕ್ಷಣೆ) ನೇಮಕಗೊಂಡಿದ್ದಾರೆ ಎಂದು ಪೊಲೀಸ್‌‍ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಸಂಜೆ ಅಹ್ಮದ್‌ಗಢ ಪೊಲೀಸ್‌‍ ಠಾಣಾ ವ್‌ಯಾಪ್ತಿಯ ಗ್ರಾಮವೊಂದಕ್ಕೆ ತೆರಳಿದ ಅವರು, ಬಾಲಕಿ ಮತ್ತು ಹುಡುಗ ಮನೆಯ ಅಂಗಳದಲ್ಲಿ ಆಟವಾಡುತ್ತಿರುವುದನ್ನು ಕಂಡು ಅಲ್ಲಿದ್ದ ಮಂಚದ ಮೇಲೆ ಕುಳಿತುಕೊಂಡರು ಎಂದು ಹಿರಿಯ ಪೊಲೀಸ್‌‍ ಅಧೀಕ್ಷಕ (ಬುಲಂದ್‌ಶಹರ್) ಶ್ಲೋಕ್‌ ಕುಮಾರ್‌ ತಿಳಿಸಿದ್ದಾರೆ.

ನಂತರ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಮತ್ತು ನಂತರ ಹತ್ತಿರದಲ್ಲಿ ಕಟ್ಟಿದ್ದ ಮೇಕೆಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಒಬ್ಬ ಹುಡುಗ ತನ್ನ ಫೋನ್‌ನಲ್ಲಿ ಅಪರಾಧವನ್ನು ಸೆರೆಹಿಡಿದಿರುವುದರಿಂದ ಕೃತ್ಯ ಬಯಲಾಗಿದೆ. ಅವನು ಸರ್ಕಾರಿ ಅಧಿಕಾರಿಯಾಗಿರುವುದರಿಂದ ಅವನನ್ನು ಅಮಾನತುಗೊಳಿಸಲಾಗಿದೆ ಮತ್ತು ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ.

RELATED ARTICLES

Latest News