ಬೆಂಗಳೂರು,ನ.10- ನಗರದಲ್ಲಿ ಇಂದಿನಿಂದ ಐದು ದಿನಗಳ ಕಾಲ ಪಟಾಕಿ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ 62 ಮೈದಾನಗಳಲ್ಲಿ 267 ಪಟಾಕಿ ವ್ಯಾಪಾರಗಳಿಗೆ ಮಾರಾಟ ಮಾಡಲು ಅಷ್ಟೇ ಅವಕಾಶ ಮಾಡಿಕೊಡಲಾಗಿದೆ.
ಬಿಬಿಎಂಪಿ ಈ ಬಾರಿ ಪಟಾಕಿ ಮಳಿಗೆಗಳಿಗೆ ಅನುಮತಿ ನೀಡುವ ಜವಾಬ್ದಾರಿಯನ್ನು ಪೊಲೀಸ್ ಇಲಾಖೆಗೆ ವಹಿಸಿಕೊಟ್ಟಿರುವುದು ವಿಶೇಷವಾಗಿದೆ. ನಗರದಾದ್ಯಂತ ಹಸಿರು ಪಟಾಕಿ ಮಾರಾಟ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ಅನುಮತಿ ಇಲ್ಲದೆ ಪಟಾಕಿ ಮಾರಾಟ ಕಂಡು ಬಂದರೆ ಅಕ್ರಮ ಮಾರಾಟಗಾರರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದ್ದಾರೆ.
ಅತ್ತಿಬೆಲೆ ಪಟಾಕಿ ದುರಂತದ ಹಿನ್ನೆಲೆಯಲ್ಲಿ ನಗರದಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿರುವ ಬಿಬಿಎಂಪಿ ಅಧಿಕಾರಿಗಳು ನಗರದ ಎಂಟು ವಲಯದ ಮೈದಾನದಲ್ಲಿ ಮೂಲಸೌಕರ್ಯ ಹಾಗೂ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಪಟಾಕಿ ಮಾರಾಟ ನಿಯಮಗಳು: ಹಸಿರು ಪಟಾಕಿ ಮಾರುವುದು ಕಡ್ಡಾಯ ಪಟಾಕಿ ಪ್ಯಾಕೆಟ್‍ಗಳ ಮೇಲೆ ಚಿಕ್ಕ ಕ್ಯೂಆರ್ ಕೋಡ್ ಇರುವುದನ್ನು ಕಡ್ಡಾಯಗೊಳಿಸಲಾಗಿದೆ. ಪಟಾಕಿ ಮಾರಾಟ ಮಳಿಗೆಗಳ ವಿಸ್ತೀರ್ಣ 10ಬೈ 10 ಅಡಿಗೆ ಸೀಮಿತಗೊಳಿಸಲಾಗಿದೆ. ಮಳಿಗೆಗಳಲ್ಲಿ ನಿಗದಿಗಿಂತ ಹೆಚ್ಚು ಪ್ರಮಾಣದ ಪಟಾಕಿ ದಾಸ್ತಾನು ಮಾಡುವಂತಿಲ್ಲ ಸಾಧ್ಯವಾದಷ್ಟೂ ಬೆಂಕಿ ತಡೆಯುವ ಉಪಕರಣಗಳನ್ನೇ ಬಳಸಿ ಮಳಿಗೆ ನಿರ್ಮಿಸಬೇಕು. ಮಳಿಗೆ ಮುಂಭಾಗ ಹಾಗೂ ಹಿಂಭಾಗ ಪ್ರವೇಶ ದ್ವಾರ ಇರಲೆಬೇಕಾಗಿದೆ.ಪ್ರ ತಿ ಮಾರಾಟ ಮಳಿಗೆಗೆ 3 ಮೀಟರ್ ಅಂತರ ಕಡ್ಡಾಯವಾಗಿದ್ದು, ಪರವಾನಗಿ ಪತ್ರ ಮಳಿಗೆಯಲ್ಲಿ ಪ್ರದರ್ಶಿಸಬೇಕು.
ಜಾತಿ ಗಣತಿ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾದ ಬಿಜೆಪಿ
ಪ್ರತಿ ಮಾರಾಟ ಮಳಿಗೆ ಯಲ್ಲಿ ಅಗ್ನಿಶಮನ ವ್ಯವಸ್ಥೆ ಇರಬೇಕು. ಮಳಿಗೆ ಸಮೀಪ ಧೂಮಪಾನಕ್ಕೆ ಅವಕಾಶವಿಲ್ಲ. ಹಗಲಿನ ವೇಳೆಯಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ. ರಾತ್ರಿ ವೇಳೆ ಯಾರೂ ಮಳಿಗೆಯಲ್ಲಿ ಮಲಗದಂತೆ ಎಚ್ಚರ ವಹಿಸಬೇಕು. ಎಲೆಕ್ಟಿಕಲ್ ವೈರಿಂಗ್ ಮತ್ತು ಫಿಟ್ಟಿಂಗ್ಸ್ ವ್ಯವಸ್ಥೆ ಮಾಡಿಕೊಂಡಿರಬೇಕು. ಪರವಾನಗಿ ಪಡೆದಿರುವ ದಿನಾಂಕ, ಸ್ಥಳದಲ್ಲಿ ಮಾತ್ರವೇ ಮಾರಾಟಕ್ಕೆ ಅವಕಾಶ. ವಿದೇಶಿ ತಯಾರಿಕ ಪಟಾಕಿ ಮಾರಾಟಕ್ಕೆ ನಿರ್ಬಂಧ ಹಾಗೂ ಪಟಾಕಿಯನ್ನು 18 ವರ್ಷದೊಳಗಿನ ಮಕ್ಕಳಿಗೆ ಮರಾಟ ಮಾಡುವಂತಿಲ್ಲ ಎಂಬ ನಿಯಮ ಹಾಕಲಾಗಿದೆ.