ಶ್ರೀನಗರ,ಜ.5- ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್‍ಕೌಂಟರ್ ನಡೆದಿದೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ಚೋಟಿಗಾಮ್ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಮುಂಜಾನೆಯೇ ಅಲ್ಲಿ ಶೋಧ ಕಾರ್ಯಚರಣೆ ಅರಂಭಿಸಿತ್ತು.
ಶೋಪಿಯಾನ್ ಜಿಲ್ಲೆಯ ಚೋಟಿಗಮ್ ಪ್ರದೇಶದಲ್ಲಿ ಇದೀಗ ಎನ್ಕೌಂಟರ್ ಪ್ರಾರಂಭವಾಗಿದೆ. ಶೋಪಿಯಾನ್ ಪೋಲಿಸ್ , ಸೇನೆ ಮತ್ತು ಸಿಆರ್‍ಪಿಎಫ್ ಈ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ.
ಕೇಜ್ರಿವಾಲ್, ಸೂರೆನ್ ಬಂಧನ ಸಾಧ್ಯತೆ : ಪವಾರ್
ಭದ್ರತಾ ಸಿಬ್ಬಂದಿಗಳು ಉಗ್ರರು ಇದ್ದಾರೆ ಎಂದು ಶಂಕಿಸಲಾದ ಪ್ರದೇಶದಲ್ಲಿ ಶೋಧ ಕಾರ್ಯಚರಣೆ ನಡೆಸುತ್ತಿದ್ದಾಗ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದರು ಇದಕ್ಕೆ ಪ್ರತಿಯಾಗಿ ಸೇನೆ ಪ್ರತಿ ದಾಳಿ ನಡೆಸುತ್ತಿದೆ. ಇಲ್ಲಿಯವರೆಗೆ, ಎರಡೂ ಕಡೆಯಿಂದ ಯಾವುದೇ ಜೀವಹಾನಿಯ ವರದಿಯಾಗಿಲ್ಲ ಎಂದು ಸೇನೆ ತಿಳಿಸಿದೆ.