Friday, November 22, 2024
Homeಅಂತಾರಾಷ್ಟ್ರೀಯ | InternationalH-1B ವೀಸಾ ನೋಂದಣಿಗೆ ಮಾ.22 ಕೊನೇದಿನ

H-1B ವೀಸಾ ನೋಂದಣಿಗೆ ಮಾ.22 ಕೊನೇದಿನ

ವಾಷಿಂಗ್ಟನ್, ಮಾ. 19 -(ಪಿಟಿಐ) : ಮುಂಬರುವ 2025 ರ ಆರ್ಥಿಕ ವರ್ಷಕ್ಕೆ ಭಾರತೀಯ ಐಟಿ ವೃತ್ತಿಪರರಿಂದ ಹೆಚ್ಚು ಬೇಡಿಕೆಯಿರುವ H-1B ವೀಸಾಗಳ ಆರಂಭಿಕ ನೋಂದಣಿ ಅವಧಿಯು ಮಾರ್ಚ್ 22 ರಂದು ಮುಕ್ತಾಯಗೊಳ್ಳಲಿದೆ ಎಂದು ಫೆಡರಲ್ ಏಜೆನ್ಸಿಯೊಂದು ತಿಳಿಸಿದೆ.

H-1B ವೀಸಾವು ವಲಸೆ ರಹಿತ ವೀಸಾ ಆಗಿದ್ದು, ಇದು ಅಮೆರಿಕ ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದನ್ನು ಅವಲಂಬಿಸಿವೆ.2025 ರ ಹಣಕಾಸು ವರ್ಷದಲ್ಲಿ ವಿದೇಶಿ ಅತಿಥಿ ಉದ್ಯೋಗಿಗಳಿಗೆ ಹೆಚ್ಚು ಬೇಡಿಕೆಯಿರುವ ಹೆಚ್ಒನ್ಬಿ ವೀಸಾಗಳ ಆರಂಭಿಕ ನೋಂದಣಿ ಅವಧಿಯು ಮಾರ್ಚ್ 22 ರಂದು ಮದ್ಯಾಹ್ನ 12ಕ್ಕೆ ಮುಕ್ತಾಯಗೊಳ್ಳುತ್ತದೆ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ತಿಳಿಸಿದೆ.

ಈ ಅವಧಿಯಲ್ಲಿ, ನಿರೀಕ್ಷಿತ ಅರ್ಜಿದಾರರು ಮತ್ತು ಕಾನೂನು ಪ್ರತಿನಿಗಳು ಪ್ರತಿ ಫಲಾನುಭವಿಯನ್ನು ಆಯ್ಕೆ ಪ್ರಕ್ರಿಯೆಗಾಗಿ ವಿದ್ಯುನ್ಮಾನವಾಗಿ ನೋಂದಾಯಿಸಲು ಮತ್ತು ಪ್ರತಿ ಫಲಾನುಭವಿಗೆ ಸಂಬಂಧಿಸಿದ ನೋಂದಣಿ ಶುಲ್ಕವನ್ನು ಪಾವತಿಸಲು ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳ ಆನ್ಲೈನ್ ಖಾತೆಯನ್ನು ಬಳಸಬೇಕು.

ಆನ್ಲೈನ್ ಖಾತೆ ಬಳಕೆದಾರರು ತಮ್ಮ ಆನ್ಲೈನ್ ಖಾತೆಗಳಲ್ಲಿ ರ್ವತ ಸಾಂಸ್ಥಿಕ ಖಾತೆ ವೈಶಿಷ್ಟ್ಯಗಳೊಂದಿಗೆ ನೋಂದಣಿಗಳು ಮತ್ತು ಅರ್ಜಿಗಳಲ್ಲಿ ಸಹಕರಿಸಲು ಸಾಧ್ಯವಾಗುತ್ತದೆ ಎಂದು ಅದು ಹೇಳಿದೆ.

RELATED ARTICLES

Latest News