Wednesday, May 1, 2024
Homeರಾಜ್ಯಕಡಿಮೆ ಮತದಾನವಾಗಿದ್ದ 1786 ಬೂತ್‌ಗಳ ಮೇಲೆ ಚುನಾವಣಾ ಆಯೋಗದ ಕಣ್ಣು

ಕಡಿಮೆ ಮತದಾನವಾಗಿದ್ದ 1786 ಬೂತ್‌ಗಳ ಮೇಲೆ ಚುನಾವಣಾ ಆಯೋಗದ ಕಣ್ಣು

ಬೆಂಗಳೂರು, ಮಾ.19- ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾದ 1786 ಬೂತ್ಗಳ ಮೇಲೆ ಚುನಾವಣಾ ಆಯೋಗದ ಅಧಿಕಾರಿಗಳು ಹದ್ದಿನಕಣ್ಣಿಟ್ಟಿದ್ದಾರೆ. ನಗರದ ಮತಗಟ್ಟೆ ಸಮೀಕ್ಷೆ ನಡೆಸಿರುವ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಕಳೆದ ಎರಡು ಲೋಕಸಬಾ ಚುನಾವಣೆಗಳಲ್ಲೂ 1786ಬೂತ್ಗಳಲ್ಲಿ ಕಡಿಮೆ ಮತದಾನವಾಗಿರುವುದು ಕಂಡು ಬಂದಿದೆ.

ಹೀಗಾಗಿ ಆ ಬೂತ್ಗಳಲ್ಲಿ ಈ ಬಾರಿ ಹೆಚ್ಚು ಮತದಾನವಾಗುವಂತೆ ನೋಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಡಿಮೆ ಮತದಾನ ಆಗಿರೋ ಪ್ರದೇಶಗಳ ಪಟ್ಟಿಮಾಡಿರುವ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳು ಈ ಬಾರಿ 1700 ಬೂತ್ಗಳಲ್ಲಿ ಯಾವುದೇ ಕಾರಣಕ್ಕೂ ಕಡಿಮೆ ಮತದಾನವಾಗದಂತೆ ನೋಡಿಕೊಳ್ಳಿ ಎಂದು ಚುನಾವಣಾ ಸಿಬ್ಬಂಧಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಹಾಗಾದರೆ ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಅತ್ಯಂತ ಕಡಿಮೆ ಮತದಾನವಾದ 1786ಬೂತ್ಗಳು ಯಾವುದು ಎಂದರೆ ಅವು ಹೀಗೀವೆ ನೋಡಿ. ಯಲಹಂಕ ವಿಧಾನಸಭಾ ಕ್ಷೇತ್ರದ 123 ಬೂತ್ಗಳು, ಬ್ಯಾಟರಾಯನಪುರದ 114, ಯಶವಂತಪುರದ 131, ದಾಸರಹಳ್ಳಿಯ 99, ಮಹದೇವಪುರದ 135, ಬೆಂಗಳೂರು ದಕ್ಷಿಣದ 139, ಆನೇಕಲ್ನ 103, ಕೆ.ಆರ್.ಪುರದ 86, ಮಹಾಲಕ್ಷ್ಮೀ ಬಡಾವಣೆಯ 41, ಮಲ್ಲೇಶ್ವರಂನ 51, ಹೆಬ್ಬಾಳದ 40, ಪುಲಿಕೇಶಿನಗರದ 41, ಸರ್ವಜ್ಞನಗರದ 50, ಸರ್.ಸಿ.ವಿ.ರಾಮನ್ನಗರದ 44, ರಾಜರಾಜೇಶ್ವರಿನಗರದ 43, ಶಿವಾಜಿನಗರದ 27, ಶಾಂತಿನಗರದ 26, ಗಾಂ„ನಗರದ 55, ರಾಜಾಜಿನಗರದ 29, ಚಾಮರಾಜಪೇಟೆಯ 47 ಹಾಗೂ ಚಿಕ್ಕಪೇಟೆಯ 20 ಬೂತ್ಗಳಲ್ಲಿ ಶೇ.55ಕ್ಕಿಂತ ಕಡಿಮೆ ಮತದಾನವಾಗಿದೆ.

ಅದೇ ರೀತಿ ಗೋವಿಂದರಾಜನಗರದ 51, ವಿಜಯನಗರದ 46, ಬಸವನಗುಡಿಯ 24, ಪದ್ಮನಾಭನಗರದ 40, ಬಿಟಿಎಂ ಬಡಾವಣೆಯ 39, ಜಯನಗರದ 36 ಹಾಗೂ ಬೊಮ್ಮನಹಳ್ಳಿಯ 98 ವಿಧಾನಸಭಾ ಕ್ಷೇತ್ರಗಳ 1786 ಬೂತ್ಗಳಲ್ಲಿ ಕಡಿಮೆ ಮತದಾನವಾಗಿತ್ತು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

RELATED ARTICLES

Latest News