Sunday, October 6, 2024
Homeರಾಜ್ಯಜಾಮೀನಿನ ಮೇಲೆ ಇರುವವರು ಮೊದಲು ರಾಜೀನಾಮೆ ನೀಡಲಿ: ಮಹದೇವಪ್ಪ

ಜಾಮೀನಿನ ಮೇಲೆ ಇರುವವರು ಮೊದಲು ರಾಜೀನಾಮೆ ನೀಡಲಿ: ಮಹದೇವಪ್ಪ

ಬೆಂಗಳೂರು, ಸೆ.26 – ಜಾಮೀನಿನ ಮೇಲೆ ಇರುವವರೆಲ್ಲಾ ಮೊದಲು ತಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಆನಂತರ ನೈತಿಕತೆ ಬಗ್ಗೆ ಮಾತನಾಡಲಿ ಎಂದು ಸಮಾಜ ಕಲ್ಯಾಣ ಸಚಿವ ಡಾ. ಹೆಚ್‌.ಸಿ. ಮಹದೇವಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಅಷ್ಟಕ್ಕೂ ಸಿದ್ದರಾಮಯ್ಯ ಅವರು ಮಾಡಿರುವ ತಪ್ಪೇನು? ಎಂದು ಪ್ರಶ್ನಿಸಿದರು.

ಬಡಜನರ ಪರವಾಗಿ ಕೆಲಸ ಮಾಡಿದ್ದೇ ತಪ್ಪಾಯಿತೆ? ಕಾನೂನಾತಕ ಹಾಗೂ ರಾಜಕೀಯವಾಗಿ ಎಲ್ಲಾ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದರು. ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ನೀಡಿರುವ ಹೇಳಿಕೆ ವ್ಯಕ್ತಿಗತ ಅಭಿಪ್ರಾಯ. ಅದು ಪಕ್ಷದ ಅಭಿಪ್ರಾಯವಲ್ಲ ಎಂದರು.

ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ಬಿಜೆಪಿಯವರು ಮೊದಲು ಅವರ ಮನೆ ಸರಿ ಮಾಡಿಕೊಳ್ಳಲಿ. ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌‍.ಈಶ್ವರಪ್ಪ ಅವರ ಮನೆಯಲ್ಲಿ ಏನು ನಡೆಯುತ್ತಿದೆ? ಪರ್ಯಾಯ ನಾಯಕತ್ವದ ಸಭೆ ನಡೆಯುತ್ತಿದೆ ಎಂದು ಆರೋಪಿಸಿದರು.

RELATED ARTICLES

Latest News