ಮುಂಬೈ,ಏ.14- ಪ್ರಧಾನಿ ನರೇಂದ್ರ ಮೋದಿ ಇಲ್ಲದಿದ್ದರೆ ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಅಯೋಧ್ಯೆ ರಾಮಮಂದಿರ ನಿರ್ಮಾಣವಾಗುತ್ತಿರಲಿಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಹೇಳಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಗೆ ಪ್ರಧಾನಿ ಮೋದಿಗೆ ಬೇಷರತ್ ಬೆಂಬಲ ಘೋಷಿಸಿರುವ ಠಾಕ್ರೆ ಅವರು ಮಹಾಯುತಿ ಮೈತ್ರಿಕೂಟವು ಚುನಾವಣಾ ಸಮನ್ವಯಕ್ಕಾಗಿ ಸಂಪರ್ಕಿಸಬಹುದಾದ ನಾಯಕರ ಪಟ್ಟಿಯನ್ನು ಎಂಎನ್‍ಎಸ್ ಸಿದ್ಧಪಡಿಸಲಿದೆ ಎಂದು ಹೇಳಿದರು.
ನವೆಂಬರ್ 2019 ರಲ್ಲಿ ಐತಿಹಾಸಿಕ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ಅಡೆತಡೆಗಳನ್ನು ತೆರವುಗೊಳಿಸಿತು. ಈ ವರ್ಷದ ಜನವರಿ 22 ರಂದು ರಾಮಮಂದಿರದ ಶಂಕುಸ್ಥಾಪನೆ ನಡೆಯಿತು.
1992ರಲ್ಲಿ ಬಾಬರಿ ಮಸೀದಿಯನ್ನು ಕೆಡವಿದಾಗಿನಿಂದ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ವಿಷಯ ಬಾಕಿ ಉಳಿದಿತ್ತು ಎಂದು ಠಾಕ್ರೆ ಹೇಳಿದರು.ನಡೆಯುವ ಕೆಲವು ಒಳ್ಳೆಯ ಸಂಗತಿಗಳನ್ನು ಶ್ಲಾಸಬೇಕಾಗಿದೆ. ಒಂದೆಡೆ, ಅಸಮರ್ಥ (ನಾಯಕತ್ವ) ಮತ್ತು ಮತ್ತೊಂದೆಡೆ, ಪ್ರಬಲ ನಾಯಕತ್ವವಿದೆ. ಆದ್ದರಿಂದ ನಾವು ನರೇಂದ್ರ ಮೋದಿ ಅವರನ್ನು ಬೆಂಬಲಿಸಲು ಯೋಚಿಸಿದ್ದೇವೆ ಎಂದು ಠಾಕ್ರೆ ತಮ್ಮ ಪಕ್ಷದ ನಿರ್ಧಾರಕ್ಕೆ ಸಮಜಾಯಿಷಿ ನೀಡಿದರು.
ಇದೇ ಸಂದರ್ಭದಲ್ಲಿ ಅವರು ತಮ್ಮ ಸೋದರ ಸಂಬಂಧಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದರು. ಮರಾಠಿಗೆ ಶಾಸೀಯ ಭಾಷಾ ಸ್ಥಾನಮಾನ ನೀಡುವುದು ಮತ್ತು ರಾಜ್ಯದಲ್ಲಿ ಕೋಟೆಗಳ ಮರುಸ್ಥಾಪನೆ ಸೇರಿದಂತೆ ಮಹಾರಾಷ್ಟ್ರದ ಬಗ್ಗೆ ಕೆಲವು ಬೇಡಿಕೆಗಳನ್ನು ಬಿಜೆಪಿಗೆ ತಿಳಿಸಲಾಗುವುದು ಎಂದು ಠಾಕ್ರೆ ಹೇಳಿದರು.