ಬೆಂಗಳೂರು,ಡಿ.22 – ಮಹಿಳೆಯರೇ ಹೇರ್‍ಡ್ರೈಯರ್ ಬಳಸುವ ಮುನ್ನ ಜಾಗ್ರತೆ ವಹಿಸಿ. ಇತ್ತೀಚಿನ ದಿನಗಳಲ್ಲಿ ತಲೆ ಕೂದಲನ್ನು ಒಣಗಿಸಲು ಹಾಗೂ ವಿವಿಧ ವಿನ್ಯಾಸ ಮಾಡಿಕೊಳ್ಳಲು ಹೇರ್ ಡ್ರೈಯರ್ ಮೊರೆ ಹೋಗುತ್ತಿದ್ದು, ಈ ಉಪಕರಣದಲ್ಲಿ ಅಧಿಕ ವಿದ್ಯುತ್ ಪಾಸ್ ಆಗಲಿದ್ದು, ಈ ಬಗ್ಗೆ ಎಚ್ಚರದಿಂದಿರಿ. ನಗರದಲ್ಲಿ ಮಹಿಳಾ ಸಾಫ್ಟ್‍ವೇರ್ ಎಂಜಿನಿಯರ್‍ರೊಬ್ಬರು ಹೇರ್ ಡ್ರೈಯರ್ ಬಳಸಿ ತಲೆಕೂದಲು ಒಣಗಿಸುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿರುವುದು ವರದಿಯಾಗಿದೆ.
ನಾರ್ತ್ ಇಂಡಿಯಾದ ಟೆಕ್ಕಿಯೊಬ್ಬರು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ನೀಲಾದ್ರಿ ರಸ್ತೆಯ 15ನೇ ಕ್ರಾಸ್‍ನಲ್ಲಿನ ಪಿಜಿಯಲ್ಲಿ ನೆಲೆಸಿದ್ದು, ಮೊನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ಪಿಜಿಗೆ ಬಂದಿದ್ದಾರೆ. ಸ್ನಾನದ ನಂತರ ಹೇರ್ ಡ್ರೈಯರ್‍ನಿಂದ ತಲೆಕೂದಲನ್ನು ಒಣಗಿಸುತ್ತಿದ್ದಾಗ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.
ಗಾಬರಿಯಲ್ಲಿ ತಕ್ಷಣ ಅವರ ಹೇರಡ್ರೈಯರ್‍ನ್ನು ಹಾಸಿಗೆ ಮೇಲೆ ಬಿಸಾಕಿದ್ದರಿಂದ ಬೆಂಕಿ ಕಿಡಿ ಹಾಸಿಗೆಗೆ ಹೊತ್ತಿಕೊಂಡು ಅದರ ಮೇಲಿದ್ದ ವಸ್ತುಗಳನ್ನು ತಾಕಿದೆ.
2023ರಲ್ಲಿ ವಿರಾಟ್ ಕೊಹ್ಲಿಯ ಶತಕಗಳ ದರ್ಬಾರ್
ತಕ್ಷಣ ಪಿಜಿಯಲ್ಲಿದ್ದ ಬೆಂಕಿ ನಂದಿಸುವ ಉಪಕರಣದಿಂದ ಬೆಂಕಿಯನ್ನು ನಂದಿಸಿದರಾದರೂ, ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಶಾರ್ಟ್ ಸಕ್ಯೂರ್ಟ್‍ನಿಂದ ಹೇರ್ ಡ್ರೈಯರ್‍ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.