Sunday, May 19, 2024
Homeರಾಜ್ಯಐಷಾರಾಮಿ ವಿಮಾನದಲ್ಲಿ ಮೋದಿ ಒಬ್ಬರೇ ಓಡಾಡ್ತಾರಲ್ಲಾ ಅದಕ್ಕೆ ಏನು ಹೇಳ್ತಿರಿ..? : ಸಿದ್ದು ತಿರುಗೇಟು

ಐಷಾರಾಮಿ ವಿಮಾನದಲ್ಲಿ ಮೋದಿ ಒಬ್ಬರೇ ಓಡಾಡ್ತಾರಲ್ಲಾ ಅದಕ್ಕೆ ಏನು ಹೇಳ್ತಿರಿ..? : ಸಿದ್ದು ತಿರುಗೇಟು

ಬೆಂಗಳೂರು,ಡಿ.22- ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಐಷಾರಾಮಿ ವಿಮಾನದಲ್ಲಿ ಒಬ್ಬರೇ ತಿರುಗಾಡುತ್ತಿರುವ ಬಗ್ಗೆ ಬಿಜೆಪಿಯವರು ಏನು ಹೇಳುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ದೆಹಲಿ ಪ್ರವಾಸದಿಂದ ಬೆಂಗಳೂರಿಗೆ ವಾಪಸಾಗುವ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಸದಸ್ಯರು ಐಷಾರಾಮಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿ ವ್ಯಾಪಕ ಟೀಕೆ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು , ನರೇಂದ್ರಮೋದಿಯವರು ಯಾವುದರಲ್ಲಿ ತಿರುಗಾಡುತ್ತಾರೆ ಎಂದು ಬಿಜೆಪಿಯವರನ್ನು ಕೇಳಿ ಎಂದರು.

ಐಷಾರಾಮಿ ವಿಮಾನದಲ್ಲಿ ಒಬ್ಬರೇ ಓಡಾಡುತ್ತಾರಲ್ಲ. ಅದರ ಬಗ್ಗೆ ಬಿಜೆಪಿಯವರು ಏಕೆ ಉತ್ತರ ನೀಡುವುದಿಲ್ಲ. ಬಾಯಿಗೆ ಬಂದಂತೆ ಏನೋ ಮಾತನಾಡುವುದಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂದು ಇನ್ನೂ ತೀರ್ಮಾನ ಮಾಡಿಲ್ಲ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಖರ್ಗೆಯವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಇಂಡಿಯಾ ಮೈತ್ರಿಕೂಟದಿಂದ ಯಾರನ್ನೇ ಅಭ್ಯರ್ಥಿ ಮಾಡಿದರೂ ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು.

ಅನುದಾನದ ನಿರೀಕ್ಷೆ :
ಇತ್ತೀಚೆಗೆ ತಾವು ದೆಹಲಿಗೆ ಭೇಟಿ ನೀಡಿದ ವೇಳೆ ಪ್ರಧಾನಮಂತ್ರಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ನಮ್ಮ ಬೇಡಿಕೆಗಳನ್ನು ಸಮಾಧಾನದಿಂದ ಕೇಳಿದರು. ಪ್ರಧಾನಿಯವರು ಸಂಬಂಧಪಟ್ಟ ಸಚಿವರಿಗೆ ಸೂಚನೆ ನೀಡಿ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ನಾಳೆ ಅಮಿತ್ ಶಾ ನೇತೃತ್ವದ ಉನ್ನತಾಧಿಕಾರ ಸಮಿತಿ ಸಭೆ ನಡೆಯಲಿದ್ದು, ರಾಜ್ಯದ ಬರ ನಿರ್ವಹಣೆಗೆ ಅನುದಾನ ದೊರೆಯುವ ನಿರೀಕ್ಷೆಯಿದೆ ಎಂದು ಹೇಳಿದರು.

ಜಾತಿ ಗಣತಿಗೆ ವಿರೋಧ ಇಲ್ಲ : ಆರ್‌ಎಸ್‌ಎಸ್‌

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಂಸದರನ್ನು ಅಮಾನತುಗೊಳಿಸಿ ಕಲಾಪ ನಡೆದಿರುವುದಕ್ಕೆ ಜನ ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಒಪ್ಪಿಕೊಂಡ ಜನ ಕೇಂದ್ರಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಸಹಿಸುವುದಿಲ್ಲ. ಜನರಿಂದ ಮತ ಪಡೆದು ಚುನಾಯಿತರಾದ ಸಂಸದರನ್ನು ಅಮಾನತಿನಲ್ಲಿಡುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.

ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷಗಳ ಅಭಿಪ್ರಾಯವನ್ನು ಕೇಳಬೇಕಾಗುತ್ತದೆ. ಸರ್ಕಾರದಲ್ಲಿರುವವರಿಗೆ ಮಾತ್ರವೇ ಜನ ಮತ ಹಾಕಿರುವುದಿಲ್ಲ. ವಿರೋಧಪಕ್ಷದಲ್ಲಿರುವವರೂ ಕೂಡ ಮತ ಪಡೆದೇ ಸಂಸತ್ ಪ್ರವೇಶಿಸಿರುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ಬರ, ಐಷಾರಾಮಿ ವಿಮಾನದಲ್ಲಿ ಸಿದ್ದು-ಜಮೀರ್‌ ಆಡಂಬರ : ಬಿಜೆಪಿ ಟೀಕೆ

ಕೋವಿಡ್ ಹಿನ್ನೆಲೆಯಲ್ಲಿ ಆತಂಕ ಬೇಡ, ಎಚ್ಚರಿಕೆ ಅಗತ್ಯ ಎಂದು ಪದೇಪದೇ ಹೇಳುತ್ತಿದ್ದೇವೆ. ಜನಸಂದಣಿ ಇರುವ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಕ್ಷೇಮ. ಮೈಸೂರಿನಲ್ಲಿ 6 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಅವರಲ್ಲಿ ಬಹಳಷ್ಟು ಮಂದಿ ಗಂಭೀರವಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.

RELATED ARTICLES

Latest News