ಕನಕಪುರ,ಮಾ.22- ಕರ್ತವ್ಯಲೋಪ ಆರೋಪದ ಮೇಲೆ ಹಾರೋಹಳ್ಳಿ ತಹಸೀಲ್ದಾರ್ ಆರ್.ಸಿ.ಶಿವಕುಮಾರ್‌ರವರನ್ನು ಅಮಾನತು ಮಾಡಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಮುಖರ್ ಪಾಷ ಆದೇಶಿಸಿದ್ದಾರೆ.
ಬಗರ್‌ಹುಕುಂ ಸಾಗುವಳಿ ಅರ್ಜಿ ವಿಚಾರಣೆಯಲ್ಲಿ ತೊಂದರೆಯಾಗುತ್ತಿದ್ದು ಕೆಲಸ ಮಾಡಲು ಆಗುತ್ತಿಲ್ಲ ಎಂದು ಶಿವಕುಮಾರ್ ವಿರುದ್ಧ ಬಗ್ಗಳ ಗ್ರಾಮ ಆಡಳಿತಾಧಿಕಾರಿ ಈಶ್ವರ್, ಹಾರೋಹಳ್ಳಿ ಪ್ರಭಾರ ಕಂದಾಯ ನಿರೀಕ್ಷಕ ಅಶೋಕ್, ಭಗತ್ಕುಮಾರ್ ಅವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಆರೋಪದ ಮೇಲೆ ತಹಸೀಲ್ದಾರರನ್ನು ಅಮಾನತುಪಡಿಸಿ ಆದೇಶಿಸಲಾಗಿದೆ. ಶಿವಕುಮಾರ್‌ರವರ ಅಮಾನತಿಗೆ ಗ್ರಾಮದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಉತ್ತಮ ಆಡಳಿತಾಧಿಕಾರಿಯಾಗಿರುವ ಶಿವಕುಮಾರ್ ಅವರಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ.
ಈ ಅಧಿಕಾರಿ ಸಾರ್ವಜನಿಕರ, ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ವಿನಾಕಾರಣ ದೂರು ನೀಡಿರುವ ಆರ್‌ಐ ಮೇಲೆ ಸಾಕಷ್ಟು ಗುರುತರ ದೂರುಗಳಿದ್ದು, ಆ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.