Friday, September 20, 2024
Homeಕ್ರೀಡಾ ಸುದ್ದಿ | Sportsವಿನೇಶ್ ಫೋಗಟ್‌ಗೆ 1.5 ಕೋಟಿ ಬಹುಮಾನ ಘೋಷಿಸಿದ ಹರಿಯಾಣ ಸರ್ಕಾರ

ವಿನೇಶ್ ಫೋಗಟ್‌ಗೆ 1.5 ಕೋಟಿ ಬಹುಮಾನ ಘೋಷಿಸಿದ ಹರಿಯಾಣ ಸರ್ಕಾರ

ನವದೆಹಲಿ,ಆ.8-ಒಲಿಂಪಿಕ್ಸ್ ಫೈನಲ್ ಪಂದ್ಯದಿಂದ ಅನರ್ಹಗೊಂಡರೂ ದೇಶದ ಹೃದಯ ಗೆದ್ದ ವಿನೇಶಾ ಅವರನ್ನು ಹರಿಯಾಣ ರಾಜ್ಯ ಸರ್ಕಾರವು ಗೌರವಿಸಲು ನಿರ್ಧರಿಸಿದ್ದು, ವಿನೇಶ್‍ಗೆ 1.5 ಕೋಟಿ ರೂ. ನೀಡುವ ಮೂಲಕ ಅವರ ಸಾಧನೆಯನ್ನು ಗೌರವಿಸುವುದಾಗಿ ಮುಖ್ಯಮಂತ್ರಿ ನಯಾಬ್ ಸೈನಿ ಘೋಷಿಸಿದ್ದಾರೆ.

ನಮ್ಮ ವೀರ ಪುತ್ರಿ ಹರಿಯಾಣದ ವಿನೇಶ್ ಫೋಗಟ್ ಅದ್ಭುತ ಪ್ರದರ್ಶನ ನೀಡಿ ಒಲಿಂಪಿಕ್ಸ್‍ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಕೆಲವು ಕಾರಣಗಳಿಂದ ಆಕೆಗೆ ಒಲಿಂಪಿಕ್ ಫೈನಲ್ ನಲ್ಲಿ ಆಡಲು ಸಾಧ್ಯವಾಗದೇ ಇರಬಹುದು, ಆದರೆ ಅವಳು ನಮಗೆಲ್ಲ ಚಾಂಪಿಯನ್ ಆಗಿದ್ದಾಳೆ. ವಿನೇಶ್ ಫೋಗಟ್ ಅವರನ್ನು ಪದಕ ವಿಜೇತರಂತೆ ಸ್ವಾಗತಿಸಲು ಮತ್ತು ಗೌರವಿಸಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ.

ಒಲಿಂಪಿಕ್ ಬೆಳ್ಳಿ ಪದಕ ವಿಜೇತರಿಗೆ ನೀಡುವ ಎಲ್ಲಾ ಗೌರವಗಳು, ಪುರಸ್ಕಾರಗಳು ಮತ್ತು ಸೌಲಭ್ಯಗಳನ್ನು ವಿನೇಶ್ ಫೋಗಟ್ ಅವರಿಗೆ ಹರಿಯಾಣ ಸರ್ಕಾರದ ವತಿಯಿಂದ ಕೃತಜ್ಞತೆಯಿಂದ ನೀಡಲಾಗುವುದು ಎಂದು ಸಿಎಂ ಹೇಳಿದರು. ಅಷ್ಟೇ ಅಲ್ಲದೇ, ಸರ್ಕಾರದ ವತಿಯಿಂದ 1.5 ಕೋಟಿ ನಗದು ಬಹುಮಾನ ನೀಡುತ್ತೇವೆ ಎಂದು ಹೇಳಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‍ನಲ್ಲಿ 50 ಕೆಜಿ ಕುಸ್ತಿ ವಿಭಾಗದಲ್ಲಿ ಹರಿಯಾಣದ ಚಾರ್ಖಿ ದಾದ್ರಿಯ ನಿವಾಸಿ ವಿನೇಶ್ ಫೋಗಟ್ ಚಿನ್ನದ ಪದಕಕ್ಕಾಗಿ ಫೈನಲ್ ತಲುಪಿದ್ದರು. ಆದರೆ 100 ಗ್ರಾಂ ಅ„ಕ ತೂಕದ ಕಾರಣ ಅವರನ್ನು ಅನರ್ಹಗೊಳಿಸಲಾಗಿತ್ತು. ಇದಾದ ಬಳಿಕ ಭಾರೀ ಕೋಲಾಹಲ ಉಂಟಾಯಿತು. ಭಾರತದ ಮೊಟ್ಟ ಮೊದಲ ಚಿನ್ನ ತರುವ ಸಲುವಾಗಿ ತೂಕ ಇಳಿಕೆಗೋಸ್ಕರ ಮುಂಚಿನ ನಿದ್ದೆ ಬಿಟ್ಟು ವರ್ಕೌಟ್ ಮಾಡಿದ್ದ ವಿನೇಶಾ ನಂತರ ನಿರ್ಜಲೀಕರಣದಿಂದ ಆಸ್ಪತ್ರೆಗೆ ದಾಖಲಾಗಬೇಕಾಯಿತು.

RELATED ARTICLES

Latest News