ಹಾಸನ,ನ.3- ವರ್ಷಕ್ಕೊಮೆ ದರ್ಶನ ಭಾಗ್ಯ ನೀಡುವ ನಗರದ ಅಧಿದೇವತೆ ಹಾಸನಾಂಬ ದೇವಿಯ ಈ ವರ್ಷದ ದರ್ಶನಕ್ಕೆ ಇಂದು ವಿಶ್ವರೂಪ ದರ್ಶನದ ಬಳಿಕ ಶಾಸೊ್ತ್ರೕಕ್ತವಾಗಿ ಪೂಜೆ ಸಲ್ಲಿಸಿ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು. ಶಾಸಕ ಸ್ವರೂಪ್‌ಪ್ರಕಾಶ್ . ಜಿಲ್ಲಾಧಿಕಾರಿ ಸತ್ಯಭಾಮ, ಎಸ್,ಪಿ ಮಹಮದ್ ಸುಜೆತಾ , ಉಪವಿಭಾಗಾಧಿಕಾರಿ ಮಾರುತಿ ಸೇರಿದಂತೆ ಮತ್ತಿತರ ಗಣ್ಯರ ಸಮುಖದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು.
ಅ.24ರಂದು ದೇವಾಲಯದ ಗರ್ಭಗಡಿಯ ಬಾಗಿಲನ್ನು ತೆರೆಲಾಗಿದ್ದು ನ.2ರವರೆಗೂ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು ಪ್ರತಿ ನಿತ್ಯ ರಾಜ್ಯದ ವಿವಿದ ಜಿಲ್ಲೆಗಳಿಂದ ಸಾಗರೋಪಾದಿಯಲ್ಲಿ ಭಕ್ತರು ಬಂದು ದೇವಿಯ ದರ್ಶನ ಪಡೆದು ಈ ಬಾರಿ ಇತಿಹಾಸ ನಿರ್ಮಿಸಿದ್ದಾರೆ. ಸುಮಾರು 20 ಲಕ್ಷ ಮಂದಿ ದರ್ಶನ ಪಡೆದಿದ್ದು ಸಾವಿರ ಹಾಗೂ 300 ರೂ ಮುಖಬೇಲೆಯ ಟಿಕೇಟ್, ಲಾಡು , ಸೀರೆ ಮಾರಾಟದಿಂದ ಬರೊಬ್ಬರಿ 9 ಕೋಟಿ ರೂ. ಆದಾಯ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕರ ದರ್ಶನಕ್ಕೆ ಇಂದು ಅಂತ್ಯವಾದರೂ ಸಹ ಇಂದು ಜನರು ದೇವಿಯ ದರ್ಶನ ಪಡೆಯಲು ಕೆಲವರು ಯತ್ನಿಸಿದ್ದಾರೆ ದೇವಾಲಯದ ಕಾಪೌಂಡ್ ಹತ್ತಿ ದೇವಾಲಯದ ಆವರಣದೊಳಗೆ ಪ್ರವೇಶಿಸಲು ಯತ್ನಿದ್ದು ದೇವಾಲಯದ ಹೊರಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಕಳೆದ ರಾತ್ರಿ ಶ್ರೀ ಸಿದ್ದೇಶ್ವರ ಸ್ವಾಮಿ ರಥೋತ್ಸವ ಹಾಗೂ ಕೊಂಡೋತ್ಸವ ನಡೆದಿದ್ದು ಮುಂಜಾನೆವರೆಗೂ ಹಾಸನಾಂಭ ದೇವಿಯ ದರ್ಶನ ಭಾಗ್ಯ ದೊರೆಯಿತು. ಬೆಳಗ್ಗೆ 6 ಗಂಟೆ ಬಳಿಕ ದರ್ಶನಕ್ಕೆ ತೆರೆ ಎಳೆಯಲಾಯಿತು. ಕೊಂಡೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಸಾರ್ವಜನರಿಕರಂತೆ ಶಾಸಕ ಸ್ವರೂಪ್ ಪ್ರಕಾಶ್ ಕೂಡ ಕೊಂಡ ಹಾಯ್ದರು.
ಈ ಬಾರಿ ರಾಜ್ಯ ಅಲ್ಲದೆ ಹೊರರಾಜ್ಯಗಳಿಂದಲೂ ಸಹ ಭಕ್ತರು ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ದಿಪಾವಳಿ, ಕನ್ನಡ ರಾಜ್ಯೋತ್ಸ, ವಾರಾಂತ್ಯದ ರಜೆ ಸೇರಿದಂತೆ ಸಾಲು ಸಾಲು ರಜೆ ಹಿನ್ನಲೆಯಲ್ಲಿ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಸಣ್ಣಪುಟ್ಟ ತೊಂದರೆಗಳನ್ನು ಹೊರತುಪಡಿಸಿದರೆ ಸುಗಮವಾಗಿ ದೇವಿಯ ದರ್ಶನ ನಡೆಯಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು.
ಮುಂದಿನ ವರ್ಷ ಅಕ್ಟೋಬರ್ 9ರಿಂದ ಅ.23ವರೆಗೂ ಜಾತ್ರಾ ಮಹೋತ್ಸವ ನಡೆಯಲಿದೆ. ಒಟ್ಟಿನಲ್ಲಿ ಈ ಬಾರಿಯ ಹಾಸನಾಂಭ ಜಾತ್ರಾಮಹೋತ್ಸವ ಇತಿಹಾಸದಲ್ಲೆ ಮೊದಲ ಬಾರಿಗೆ ಹಲವು ದಾಖಲೆಗಳನ್ನು ನಿರ್ಮಾಣವಾಗಿದೆ.