Thursday, December 12, 2024
Homeರಾಷ್ಟ್ರೀಯ | Nationalಪಪ್ಪು ಯಾದವ್‌ಗೆ ಕೊಲೆ ಬೆದರಿಕೆ ಹಾಕಿದ್ದವನ ಬಂಧನ

ಪಪ್ಪು ಯಾದವ್‌ಗೆ ಕೊಲೆ ಬೆದರಿಕೆ ಹಾಕಿದ್ದವನ ಬಂಧನ

ಪಾಟ್ನಾ,ನ.3- ಗ್ಯಾಂಗ್‌ಸ್ಟರ್‌ ಲಾರೆನ್‌್ಸ ಬಿಷ್ಣೋಯ್‌ ಸಹಚರನೆಂದು ಹೇಳಿಕೊಂಡು ಸಂಸದ ಪಪ್ಪು ಯಾದವ್‌‍ಗೆ ಬೆದರಿಕೆ ಹಾಕುತ್ತಿದ್ದ ದೆಹಲಿ ಮೂಲದ ವ್ಯಕ್ತಿಯನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಯಾವುದೇ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿರದ ವ್ಯಕ್ತಿ ಯುಎಇಯಲ್ಲಿ ನೆಲೆಸಿರುವ ತನ್ನ ಸಂಬಂಧಿಯ ಸಿಮ್‌ ಕಾರ್ಡ್‌ ಬಳಸಿ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಬಂದ ವರದಿಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕರೆ ಮಾಡಿದವರನ್ನು ದೆಹಲಿಯ ನಿವಾಸಿ ಮಹೇಶ್‌ ಪಾಂಡೆ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಇತ್ತೀಚೆಗಷ್ಟೇ ಪಪ್ಪು ಯಾದವ್‌ ಅವರು ಕೇಂದ್ರ ಗಹ ಸಚಿವ ಅಮಿತ್‌ ಶಾ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ದುಬೈ ಸಂಖ್ಯೆಯಿಂದ ಕರೆ ಬಂದಿದ್ದು, ಭದ್ರತೆ ಹೆಚ್ಚಿಸುವಂತೆ ಪತ್ರ ಬರೆದಿದ್ದರು. ವಾಟ್ಸಾಪ್‌ ಮೂಲಕ ಸಂಸದರನ್ನು ಸಂಪರ್ಕಿಸಿದ್ದು, ಇದಕ್ಕಾಗಿ ಯುಎಇಯಲ್ಲಿ ನೆಲೆಸಿರುವ ಕುಟುಂಬ ಸದಸ್ಯರೊಬ್ಬರ ಸಿಮ್‌ ಕಾರ್ಡ್‌ ಬಳಸ್ದೆಿ ಎಂದು ಪಾಂಡೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಯಾದ ತಕ್ಷಣ ಬಿಷ್ಣೋಯ್‌ ಗ್ಯಾಂಗ್‌ ವಿರುದ್ಧ ಹೇಳಿಕೆ ನೀಡಿದ್ದ ಅವರು ಪಪ್ಪು ಯಾದವ್‌ ಅವರ ಸಂಖ್ಯೆಯನ್ನು ಗೂಗಲ್‌ನಲ್ಲಿ ಹುಡುಕಿದ್ದಾರೆ. ಮಹೇಶ್‌ ಪಾಂಡೆ ಬೆದರಿಕೆ ಹಾಕಲು ಬಳಸಿದ್ದ ಮೊಬೈಲ್‌ ಹಾಗೂ ಸಿಮ್‌ ಕಾರ್ಡ್‌ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

RELATED ARTICLES

Latest News