Thursday, November 21, 2024
Homeರಾಜ್ಯಹಾಸನಾಂಬೆ ದರ್ಶನೋತ್ಸವ : 4 ದಿನದಲ್ಲಿ ಬರೋಬ್ಬರಿ 3 ಕೋಟಿ ರೂ. ಆದಾಯ ಸಂಗ್ರಹ

ಹಾಸನಾಂಬೆ ದರ್ಶನೋತ್ಸವ : 4 ದಿನದಲ್ಲಿ ಬರೋಬ್ಬರಿ 3 ಕೋಟಿ ರೂ. ಆದಾಯ ಸಂಗ್ರಹ

Hassanambe Darshantsava: Rs 3 crore Revenue collection in four days

ಹಾಸನ,ಅ.29- ನಗರದ ಅಧಿದೇವತೆ ಹಾಸನಾಂಬೆ ವಾರ್ಷಿಕ ದರ್ಶನೋತ್ಸವ ಆರಂಭವಾದ ನಾಲ್ಕು ದಿನದೊಳಗೆ ದೇವಾಲಯಕ್ಕೆ ಬರೋಬ್ಬರಿ 3 ಕೋಟಿಗೂ ಹೆಚ್ಚು ಆದಾಯ ಬಂದಿದೆ. ಇಲ್ಲಿಯವರಿಗೂ 8 ರಿಂದ 9 ಲಕ್ಷ ಜನರು ದೇವಿಯ ದರ್ಶನ ಪಡೆದಿದ್ದು, ದರ್ಶನೋತ್ಸವಕ್ಕೆ ಇನ್ನೂ ಐದು ಬಾಕಿ ಇದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ನಿನ್ನೆ ಸಂಜೆ 5 ಗಂಟೆಯವರೆಗೂ 300 ರೂ. ಮುಖಬೆಲೆಯ 27,722 ಟಿಕೆಟ್‌ಗಳು ಮಾರಾಟವಾಗಿದ್ದು, 83,31,600 ರೂ. ಮೊತ್ತ ಸಂಗ್ರಹವಾಗಿದೆ.1000 ರೂ. ಮುಖಬೆಲೆಯ 19,392 ಟಿಕೆಟ್‌ಗಳು ಮಾರಾಟವಾಗಿದ್ದು, 1,93,92,000 ರೂ. ಸಂಗ್ರಹವಾಗಿದೆ. ಲಾಡು 37,302 ಮಾರಾಟವಾಗಿದ್ದು, 22,38,120 ರೂ. ಒಟ್ಟು 2,99,61,720 ರೂ. ಸಂಗ್ರಹವಾಗಿದೆ.

ರಾಜ್ಯ, ಹೊರರಾಜ್ಯಗಳಿಂದ ದಿನನಿತ್ಯ ಅಸಂಖ್ಯಾತ ಭಕ್ತರು ಆಗಮಿಸಿ, ದೇವಿಯ ದರ್ಶನ ಪಡೆದು ಕಾಣಿಕೆ ಸಮರ್ಪಿಸಿದ್ದಾರೆ.ಶಕ್ತಿ ಯೋಜನೆ ಹಿನ್ನೆಲೆಯಲ್ಲಿ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಕನ್ನಡ ರಾಜ್ಯೋತ್ಸವ, ದೀಪಾವಳಿ ಹೀಗೆ ಸಾಲುಸಾಲು ರಜೆ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಜಿಲ್ಲಾಡಳಿತ ವತಿಯಿಂದ ಸುಗಮ ದೇವರ ದರ್ಶನಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಿಯೂ ತೊಂದರೆಯಾಗದಂತೆ ನಿಗಾ ವಹಿಸಲಾಗಿದೆ.

RELATED ARTICLES

Latest News