Monday, November 4, 2024
Homeಮನರಂಜನೆಇಂದು "ಪರಮಾತ್ಮ"ನ ಮೂರನೇ ಪುಣ್ಯ ಸರಣೆ

ಇಂದು “ಪರಮಾತ್ಮ”ನ ಮೂರನೇ ಪುಣ್ಯ ಸರಣೆ

Puneeth Rajkumar 3rd Death Anniversary

ಬೆಂಗಳೂರು,ಅ.29- ಕನ್ನಡಿಗರು ತಮ ಹೃದಯಗಳಲ್ಲಿ ಇಟ್ಟು ಪೂಜಿಸುತ್ತಿದ್ದ ನಟ ಪುನೀತ್‌ ರಾಜಕುಮಾರ್‌ ನಮನ್ನು ಅಗಲಿ ಇಂದಿಗೆ ಮೂರು ವರ್ಷ ಕಳೆದಿವೆ. ಆದರೆ ನಮೊಂದಿಗೆ ಈಗಲೂ ಇದ್ದಾರೆ ಎಂಬ ಭಾವನೆಯೊಂದಿಗೆ ಪ್ರತಿಯೊಬ್ಬ ಕನ್ನಡಿಗರು ಬದುಕುತಿದ್ದಾರೆ. ಒಂದು ಸುಳಿವೂ ಕೊಡದೆ ಎಲ್ಲರ ಹೃದಯಗಳನ್ನು ಭಾರ ಮಾಡಿ ಅಪ್ಪನ ಬಳಿ ಸೇರಿಕೊಂಡರು. ವಯಸ್ಸಲ್ಲದ ವಯಸ್ಸಲ್ಲಿ ಎಲ್ಲವನ್ನು, ಎಲ್ಲರನ್ನೂ ಬಿಟ್ಟು ಹೋದ ಪರಮಾತನನ್ನು ಮರೆಯದೆ ಇಂದಿಗೂ ದೇವರಂತೆ ಪೂಜಿಸುತ್ತಿದ್ದಾರೆ.

ಈ ರೀತಿಯ ಸಾವು ನ್ಯಾಯವಲ್ಲ ಎಂದು ಇಂದಿಗೂ ದೇವರನ್ನು ಜನ ಶಪಿಸುತ್ತಾರೆ. ಲಕ್ಷಾಂತರ ದೇವರ ಮನೆಗಳಲ್ಲಿ ಪರಮಾತನಾಗಿದ್ದಾನೆ. ತನಗಾಗಿ ಗುಡಿ ಗೋಪುರ ಕಟ್ಟಿಸಿಕೊಂಡಿದ್ದಾರೆ. ಪ್ರತಿಯೊಂದು ಊರು, ಬೀದಿಗಳಲ್ಲಿ ಪ್ರತಿಮೆಗಳಾಗಿ ಇಟ್ಟು ಪೂಜಿಸುತ್ತಿದ್ದಾರೆ.

ಬೆಂಗಳೂರು ನಗರ ಅಷ್ಟೇ ಅಲ್ಲದೆ ಪ್ರತಿಯೊಂದು ಊರು ಗಲ್ಲಿಗಳಲ್ಲಿ ಇಂದು ಅಪ್ಪು ಸರಣೆ ನಡೆಯುತ್ತಿದೆ. ಅಭಿಮಾನಿಗಳು ಅನ್ನಸಂತರ್ಪಣೆ ಜೊತೆಗೆ ಬ್ಲಡ್‌ ಡೊನೇಷನ್‌ ಕ್ಯಾಂಪ್‌, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಬಡ ಶಾಲಾ ಮಕ್ಕಳಿಗೆ ಆರ್ಥಿಕ ನೆರವು, ಪುಸ್ತಕಗಳ ವಿತರಣೆ ಯಂತಹ ನೂರಾರು ಸಮಾಜಸೇವಾ ಕಾರ್ಯಗಳು ಪುನೀತ್‌ ಅವರ ಹೆಸರಿನಲ್ಲಿ ನಡೆಯುತ್ತಿವೆ.

ಪುನೀತ್‌ ರಾಜಕುಮಾರ್‌ ಬದುಕಿದ್ದಾಗ ಸಮಾಜಕ್ಕಾಗಿ ಅವರ ಜೀವ ಸದಾ ಮಿಡಿಯುತ್ತಿತ್ತು. ಅದು ಅಂದು ಯಾರಿಗೂ ಗೊತ್ತಾಗಿರಲಿಲ್ಲ. ಸ್ವಂತ ಮನೆಯವರಿಗೂ ಹೇಳಿಕೊಂಡಿರಲಿಲ್ಲ ಅಂದರೆ ಒಂದು ಕೈಯಲ್ಲಿ ಕೊಟ್ಟಿದ್ದು ಮತ್ತೊಂದು ಕೈಗೆ ಗೊತ್ತಾಗಬಾರದು ಎಂದು ನಂಬಿದವರು. ಕೊನೆಯವರೆಗೂ ಹಾಗೆಯೇ ಬದುಕಿದ್ದರು. ಅವರು ಮಾಡಿದ ದಾನ ಧರ್ಮಕ್ಕೆ ಇಡೀ ಭಾರತ ಶಿರ ಬಾಗಿ ನಮಿಸಿತ್ತು.

ಅಪ್ಪು ತನ್ನ ಕೊನೆಯ ಚಿತ್ರ ಗಂಧದಗುಡಿಯಲ್ಲೂ, ಸಾಮಾಜಿಕ ಚಿಂತನೆ ಮೆರೆದಿದ್ದಾರೆ. ಗಿಡ ಬೆಳೆಸಿ ಕಾಡನ್ನು ಉಳಿಸಿ ಮುಂದಿನ ಪೀಳಿಗೆ ಸುಖವಾಗಿ ಬದುಕಲು ವನ್ಯ ಸಂಪತ್ತು ಮುಖ್ಯ. ನಾವೆಲ್ಲರೂ ಕೈಜೋಡಿಸಬೇಕು. ಪ್ರಕೃತಿಯೊಂದಿಗೆ ಕಾಲ ಕಳೆದಾಗ ನಮನ್ನು ನಾವು ಅರಿತುಕೊಳ್ಳಬಹುದು ಎಂಬ ಮಹತ್ತರ ಸಂದೇಶವನ್ನು ನಮನ್ನು ಅಗಲಿ ಹೋಗುವಾಗ ಸಾರಿದ್ದಾರೆ.

ಈಗ ಅಭಿಮಾನಿಗಳು ಅಪ್ಪು ಹೇಳಿದಂತೆ ಗಿಡಗಳನ್ನು ಹಂಚುವ ಕಾರ್ಯದಲ್ಲಿ ತೊಡಗುತ್ತಾ ನೀಡುವ ಪ್ರಕ್ರಿಯೆಯನ್ನು ಶುರು ಮಾಡಿಕೊಂಡಿದ್ದಾರೆ. ಯುವರತ್ನನ ಅಗಲಿಕೆ, ಇರುವ ತನಕ ಸಂತೋಷದಿಂದ, ಸಾಮರಸ್ಯದಿಂದ ಬದುಕಿ, ಅಬಲರಿಗೆ ನೆರವಾಗುತ್ತಾ ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂಬ ದೊಡ್ಡ ಪಾಠ ಕಲಿಸಿದೆ.

ಪುಣ್ಯಸರಣೆ ಹಿನ್ನೆಲೆಯಲ್ಲಿ ಅಶ್ವಿನಿ ಪುನೀತ್‌ ರಾಜ್‌‍ಕುಮಾರ್‌ ಸೇರಿದಂತೆ ಕಂಠೀರವ ಸ್ಟುಡಿಯೋದಲ್ಲಿ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದರು. ಇಂದಿಗೂ ಅಪ್ಪು ಅವರ ಸಮಾಧಿಯನ್ನು ನೋಡಿ, ಭಕ್ತಿಯಿಂದ ನಮಿಸಿ ಹೋಗುವ ಅಭಿಮಾನಿಗಳಿಗೆ ಕಡಿಮೆ ಇಲ್ಲ. ದಿನವೂ ಸಾವಿರಾರು ಮಂದಿ ಬಂದು ದರ್ಶನ ಮಾಡುತ್ತಿದ್ದಾರೆ. ಪುಣ್ಯತಿಥಿ ಅಂಗವಾಗಿ, ಅವರಿಗೆ ಇಷ್ಟವಾದ ಪದಾರ್ಥಗಳನ್ನು ತಯಾರು ಮಾಡಿ ತಂದು ನೈವೇದ್ಯವಾಗಿ ಇಡುತ್ತಿದ್ದಾರೆ. 3ನೇ ವರ್ಷದ ಪುಣ್ಯ ಸರಣೆಯನ್ನು ಸಾರ್ಥಕವಾಗಿ ಆಚರಿಸಲು ಅಭಿಮಾನಿಗಳು ಮುಂದಾಗಿದ್ದಾರೆ.

RELATED ARTICLES

Latest News