Sunday, December 1, 2024
Homeರಾಜ್ಯ"ಯಾವುದೇ ಕಾರಣಕ್ಕೂ ದೇವೇಗೌಡರು ರಾಜೀನಾಮೆ ನೀಡಬಾರದು"

“ಯಾವುದೇ ಕಾರಣಕ್ಕೂ ದೇವೇಗೌಡರು ರಾಜೀನಾಮೆ ನೀಡಬಾರದು”

ಬೆಂಗಳೂರು,ಮೇ 22- ಯಾವುದೇ ಕಾರಣಕ್ಕೂ ಎಚ್.ಡಿ.ದೇವೇಗೌಡರು ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬಾರದು ಎಂದು ಒಕ್ಕಲಿಗರ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಸಿ.ಗಂಗಾಧರ್ ಮನವಿ ಮಾಡಿದ್ದಾರೆ.

ಜೀವನದುದ್ದಕ್ಕೂ ರೈತರ ಪರವಾಗಿ, ಬಡವರ ಪರವಾಗಿ, ದೀನ ದಲಿತರ ಪರವಾಗಿ ದುಡಿದ ದೇಶದ ಮಹಾನ್ ನಾಯಕರಾಗಿರುವ ದೇವೇಗೌಡರು ಕೆಲವರ ಷಡ್ಯಂತ್ರದಿಂದಾಗಿ ಮನನೊಂದು ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇದು ನಮಗೆಲ್ಲರಿಗೂ ಆಘಾತ ತಂದಿದೆ ಎಂದು ಹೇಳಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಪೆನ್ಡ್ರೈವ್ ಪ್ರಕರಣದಲ್ಲಿ ಕೆಲ ಸಚಿವರು, ಶಾಸಕರ ಕೈವಾಡವಿದ್ದು, ಇದು ಒಕ್ಕಲಿಗ ಸಮುದಾಯವನ್ನು ತುಳಿಯುವಂತಹ ಪ್ರವೃತ್ತಿಯಾಗಿದೆ. ಇದಲ್ಲದೆ, ದೇವೇಗೌಡರ ಕುಟುಂಬಕ್ಕೆ ಮಸಿ ಬಳಿಯುವ ಷಡ್ಯಂತ್ರವಾಗಿದೆ. ಈ ಬಗ್ಗೆ ಒಕ್ಕಲಿಗ ಸಮುದಾಯ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟಕ್ಕೆ ಸಿದ್ಧವಾಗಬೇಕಿದೆ ಎಂದು ಅವರು ತಿಳಿಸಿದ್ದಾರೆ.

ದೇವೇಗೌಡರ ಮನಸ್ಸಿಗೆ ನೋವುಂಟು ಮಾಡಿದ ಯಾರೇ ಆದರೂ ಅವರನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.

RELATED ARTICLES

Latest News