Wednesday, December 4, 2024
Homeರಾಜ್ಯನೋವನ್ನು ವ್ಯಕ್ತಪಡಿಸಲು ನಮ್ಮ ಜನ ಬಂದ್ ಮಾಡಿದ್ದಾರೆ : ಎಚ್‍ಡಿಡಿ

ನೋವನ್ನು ವ್ಯಕ್ತಪಡಿಸಲು ನಮ್ಮ ಜನ ಬಂದ್ ಮಾಡಿದ್ದಾರೆ : ಎಚ್‍ಡಿಡಿ

ಬೆಂಗಳೂರು, ಸೆ.26- ನಮ್ಮ ನೋವು ಅರ್ಥ ಮಾಡಿಕೊಂಡು ನಮ್ಮ ಪಕ್ಕದ ರಾಜ್ಯದ ಅಣ್ಣ ತಮ್ಮಂದಿರು ಸ್ವಲ್ಪವಾದರೂ ಬದಲಾವಣೆ ಮಾಡಿಕೊಳ್ಳಿ ಎಂಬ ಸಂದೇಶ ಕೊಡಲು ಬೆಂಗಳೂರು ಬಂದ್ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನೋವನ್ನು ತಿಳಿಸಲು ನಮ್ಮ ಜನರು ಬಂದ್ ಮಾಡಿದ್ದಾರೆ. ಇದನ್ನು ಪಕ್ಕದ ರಾಜ್ಯದವರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಶಾಂತಿಯುತವಾಗಿ ಬಂದ್ ಮಾಡಬೇಕು. ಯಾವುದೇ ಸಂಘರ್ಷ ಮಾಡಬಾರದು ಹಾಗೂ ಯಾವುದೇ ಆಸ್ತಿ- ಪಾಸ್ತಿಗೆ ಹಾನಿ ಮಾಡಬಾರದು ಎಂದು ಅವರು ಹೇಳಿದ್ದಾರೆ. ಬಂದ್ ಶಾಂತಿಯುತವಾಗಿ ನಡೆಯಲಿ ಎಂಬ ಉದ್ದೇಶದಿಂದ ಸರ್ಕಾರ ಕೆಲವು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿರುತ್ತದೆ ಎಂದು ಹೋರಾಟಗಾರರನ್ನು ವಶಕ್ಕೆ ಪಡೆದಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ನಮ್ಮ ಮನಸಿನ ನೋವು ಶಾಂತಿಯುತವಾಗಿ ಮಾಡಿ ನಮ್ಮ ಪಕ್ಕದ ರಾಜ್ಯಕ್ಕೆ ಸಂದೇಶ ಕಳುಹಿಸಬೇಕೇ ಹೊರತು ಮುತ್ತಿಗೆ ಹಾಕುವುದು ಮೊದಲಾದ ಅಹಿತಕರ ಘಟನೆಗಳನ್ನು ಮಾಡಬಾರದು. ತಮಿಳುನಾಡು ರೈತರು ಸಹ ನಮ್ಮ ನೋವು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ಜಮ್ಮುವಿನಲ್ಲಿ ಶಂಕಿತ ಉಗ್ರರ ಮನೆ ಮೇಲೆ ದಾಳಿ

ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲರೂ ಬೆಂಬಲ ಕೊಟ್ಟಿದ್ದಾರೆ. ಪ್ರತಿಭಟನೆ ಮಾಡುತ್ತಿರುವ ನಮ್ಮ ರಾಜ್ಯದ ಜನರ ನೋವು ನಮ್ಮ ಪಕ್ಕದ ರಾಜ್ಯದ ಅಣ್ಣ ತಮ್ಮಂದಿರಿಗೆ ಅರ್ಥ ಆಗಬೇಕು. ನಮ್ಮ ಪಕ್ಕದ ರಾಜ್ಯದ ರಾಜಕೀಯ ಮುಖಂಡರು ಯಾವ ನಿಲುವು ತೆಗೆದುಕೊಂಡಿದ್ದಾರೆ ಎಂಬುದನ್ನು ಗಮನಿಸಬೇಕು.

RELATED ARTICLES

Latest News