Thursday, November 30, 2023
Homeರಾಜ್ಯಹಾಸನಾಂಬೆ ದರ್ಶನ ಪಡೆದ ಎಚ್‍ಡಿಡಿ

ಹಾಸನಾಂಬೆ ದರ್ಶನ ಪಡೆದ ಎಚ್‍ಡಿಡಿ

ಹಾಸನ, ನ.3- ಪರಮೇಶ್ವರನ ಅನುಗ್ರಹದಿಂದ ಮುಂದಿನ ಬಾರಿ ಮೆಟ್ಟಿಲು ಹತ್ತಿ ಬರಲು ತಾಯಿ ಹಾಸನಾಂಬೆ ಶಕ್ತಿ ನೀಡುವ ನಂಬಿಕೆ ಇದೆ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು ಹೇಳಿದರು. ಹಾಸನಾಂಬೆಯ ದರ್ಶನದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಆರೋಗ್ಯವಾಗಿ ಮುಂದಿನ ಬಾರಿ ಬರುವಂತೆ ತಾಯಿಯಲ್ಲಿ ಆಶೀರ್ವಾದ ಬೇಡುತ್ತೇನೆ ಎಂದು ಹೇಳಿದರು.

ಶ್ರೀಕ್ಷೇತ್ರ ಐತಿಹಾಸಿಕವಾಗಿದ್ದು, ಬಹಳ ವಿಜೃಂಭಣೆಯಿಂದ ದೀಪದ ಅಲಂಕಾರವನ್ನು ಬೀದಿ ಬೀದಿಗಳಲ್ಲಿ ಸೊಗಸಾಗಿ ಮಾಡಿದ್ದಾರೆ. ಕುಡಿಯುವ ನೀರು ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಒದಗಿಸಿ ಬಹಳ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಉಸ್ತುವಾರಿ ಸಚಿವರಾದ ರಾಜಣ್ಣನವರು ಮುಂದೆ ನಿಂತು ಅಧಿಕಾರಿಗಳ ಸಹಕಾರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆಡಳಿತ ಮಂಡಳಿ ಹಾಗೂ ಜನತೆ ಪರವಾಗಿ ಎಲ್ಲರಿಗೂ ಅಭಿನಂದಿಸುವುದಾಗಿ ಹೇಳಿದರು.

ಡಿಎಂಕೆ ಸಚಿವ ವೇಲು ಮನೆ ಮೇಲೆ ಐಟಿ ದಾಳಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೀಕ್ಷೇತ್ರದ ಪ್ರಚಾರ ಮಾಡಿರುವುದರಲ್ಲಿ ಮಾಧ್ಯಮದ ಕೊಡುಗೆ ಅಪಾರವಾಗಿದೆ ಎಂದು ದೇವೇಗೌಡರು ತಿಳಿಸಿದರು. ಶಾಸಕ ಸ್ವರೂಪ್, ಜಿಲ್ಲಾಧಿಕಾರಿ ಸತ್ಯಭಾಮ, ಎಸ್‍ಪಿ ಸುಜಿತಾ ಶಾಂತಲಾ, ಎಸಿ ಮಾರುತಿ, ತಹಸೀಲ್ದಾರ್ ಶ್ವೇತಾ ಎಲ್ಲರೂ ಒಂದೇ ಮನಸ್ಸಿನಲ್ಲಿ ದೇಗುಲದ ಬಾಗಿಲು ಮುಚ್ಚುವವರೆಗೆ ಭಕ್ತಿಪೂರ್ವಕವಾಗಿ ಕಾರ್ಯ ನಡೆಸಿಕೊಡಬೇಕು ಎಂದು ದೇವೇಗೌಡರು ಹೇಳಿದರು.

RELATED ARTICLES

Latest News