Friday, October 4, 2024
Homeರಾಜ್ಯಶನಿವಾರ ದುಬೈನಿಂದ ಎಚ್‍ಡಿಕೆ ವಾಪಸ್

ಶನಿವಾರ ದುಬೈನಿಂದ ಎಚ್‍ಡಿಕೆ ವಾಪಸ್

ಬೆಂಗಳೂರು,ನ.2- ಕಳೆದ ಐದಾರು ದಿನಗಳಿಂದ ದುಬೈ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ನ.4 ರಂದು ನಗರಕ್ಕೆ ವಾಪಸ್ಸಾಗಲಿದ್ದಾರೆ.

ಯುಎಇ ಒಕ್ಕಲಿಗರ ಸಂಘದ ನಾಡಪ್ರಭು ಕೆಂಪೇಗೌಡರ ಉತ್ಸವದಲ್ಲಿ ಪಾಲ್ಗೊಳ್ಳಲು ಕುಮಾರಸ್ವಾಮಿ ಅವರು ದುಬೈ ಪ್ರವಾಸ ಕೈಗೊಂಡಿದ್ದರು. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಶಾಸಕರಾದ ಸಮೃದ್ಧಿ ಮಂಜುನಾಥ್, ಸ್ವರೂಪ್ ಪ್ರಕಾಶ್ ಮೊದಲಾದವರು ಸಹ ದುಬೈನಲ್ಲಿ ನಡೆದ ಕೆಂಪೇಗೌಡರ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ನಯಾಪೈಸೆ ಬರ ಪರಿಹಾರ ನೀಡಿಲ್ಲ : ಪರಮೇಶ್ವರ್

ದುಬೈನಲ್ಲಿರುವ ಕನ್ನಡಿಗರೊಂದಿಗೆ ಕುಮಾರಸ್ವಾಮಿ ನಿನ್ನೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದರು. ನಾಳೆಯವರೆಗೆ ದುಬೈನಲ್ಲಿ ಉಳಿಯಲಿರುವ ಕುಮಾರಸ್ವಾಮಿ ಶನಿವಾರ ಬೆಳಗಿನ ಜಾವ ನಗರಕ್ಕೆ ಆಗಮಿಸುವರು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಕುಮಾರಸ್ವಾಮಿ ಮರಳಿದ ಬಳಿಕ ಪ್ರಚಲಿತ ರಾಜಕೀಯ ವಿದ್ಯಾಮಾನ, ಪಕ್ಷ ಸಂಘಟನೆ, ಮುಂಬರುವ ಲೋಕಸಭಾ ಚುನಾವಣೆ ಸಿದ್ದತೆ ಹಾಗೂ ಬರಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳುವ ಕುರಿತಂತೆ ಸಭೆ ನಡೆಸಲಿದ್ದಾರೆ.

ಈ ಸಂಬಂಧ ನ.4ರಂದು ಶಾಸಕರು, ಮಾಜಿ ಶಾಸಕರು ಹಾಗೂ ಜಿಲ್ಲಾಧ್ಯಕ್ಷರ ಸಭೆ ಕರೆಯಲಾಗಿದ್ದು, ಅಷ್ಟರಲ್ಲಿ ಕುಮಾರಸ್ವಾಮಿ ರಾಜ್ಯಕ್ಕೆ ಮರಳಲಿದ್ದಾರೆ ಎಂದು ಹೇಳಲಾಗಿದೆ.

RELATED ARTICLES

Latest News