Tuesday, October 8, 2024
Homeಇದೀಗ ಬಂದ ಸುದ್ದಿಕ್ಷೇತ್ರ ಹಂಚಿಕೆ ಕುರಿತು ಜೆಡಿಎಸ್-ಬಿಜೆಪಿ ನಡುವೆ ಸಮಸ್ಯೆ ಇಲ್ಲ : ಹೆಚ್‌ಡಿಕೆ

ಕ್ಷೇತ್ರ ಹಂಚಿಕೆ ಕುರಿತು ಜೆಡಿಎಸ್-ಬಿಜೆಪಿ ನಡುವೆ ಸಮಸ್ಯೆ ಇಲ್ಲ : ಹೆಚ್‌ಡಿಕೆ

ಹಾಸನ,ಫೆ.12- ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರ ಹಂಚಿಕೆಗೆ ಸಂಬಂಧಿಸಿದಂತೆ ಜೆಡಿಎಸ್ ಮತ್ತು ಬಿಜೆಪಿ ನಡುವೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಹಾಸನ ತಾಲ್ಲೂಕಿನ ಚನ್ನಂಗಿಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನ ದುರಾಡಳಿತವನ್ನು ತೆಗೆಯಬೇಕು ಎಂಬುದೇ ನಮ್ಮ ಉದ್ದೇಶ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು 28 ಕ್ಷೇತ್ರಗಳಲ್ಲೂ ಗೆಲ್ಲಬೇಕೆಂಬ ಗುರಿಯೊಂದಿಗೆ ಮುನ್ನಡೆಯುತ್ತಿದ್ದೇವೆ ಎಂದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ ಸರ್ಕಾರದ ಮೇಲೂ ಆರೋಪ ಮಾಡಿದ್ದಾರೆ. ಆದರೆ ಈಗ ಸಾಕ್ಷಿ ಕೊಡಲಿ ಎನ್ನುತ್ತಾರೆ. ಅವರ ಪಕ್ಷದ ಮಾಜಿ ಸಚಿವರು ಡಂಗುರ ಹೊಡೆಯುತ್ತಾರೆ. ಹಿಂದಿನ ಸರ್ಕಾರದದ ವಿರುದ್ಧ ಕೆಂಪಣ್ಣ ಅವರ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಪೇಸಿಎಂ ಎಂದು ಪೋಸ್ಟ್ ಅಂಟಿಸಿರಲಿಲ್ಲವೇ? ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ಪಾಲು ಕೊಡುವ ಪದ್ದತಿ ಪ್ರಾರಂಭವಾಗಿದ್ದು ಯಾವಾಗ ಎಂದು ಪ್ರಶ್ನಿಸಿದ ಅವರು ದೊಡ್ಡ ಮಟ್ಟದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದಾಳಿ ನಡೆಯುತ್ತಿದೆ. 1952ರಲ್ಲಿ ಸಂವಿಧಾನಾತ್ಮಕವಾಗಿ ಸಂಸ್ಥೆಯನ್ನು ಪ್ರಾರಂಭ ಮಾಡಲಾಯಿತು. ಅಲ್ಲಿಂದ ಚರ್ಚೆ ಮಾಡಿದರೆ ದೊಡ್ಡ ಕಥೆಯೇ ಇದೆ. ಈ ಎಲ್ಲ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಅವರು ಹೇಳಿದರು.

ಫೆ.16ಕ್ಕೆ ಬಜೆಟ್ ಮಂಡನೆಯಾಗಲಿದೆ. ದಾಖಲೆ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಅಂಕಿ ಅಂಶಗಳನ್ನು ಇಟ್ಟುಕೊಂಡು ಚರ್ಚೆ ಮಾಡಲಾಗುವುದು.

ಎನ್‍ಡಿಆರ್‍ಎಫ್‍ನಿಂದ ಬಿಡುಗಾಸು ಕೊಟ್ಟಿಲ್ಲ ಎಂಬ ಆರೋಪವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಇವರ ರಾಜಕೀಯ ನಮಗೆ ಗೊತ್ತಿಲ್ಲವೇ? ಕೆಲವು ಬಾರಿ ವಿಶೇಷ ಅನುದಾನವನ್ನು ಕೊಡಲಾಗಿದೆ ಎಂದು ಹೇಳಿದರು.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರನ್ನು ಮುಗಿಸಲು ಯಾವ ರೀತಿ ರಾಜಕೀಯ ಮಾಡಿದರು ಎಂಬುದು ಗೊತ್ತಿದೆ. ಮಂಡ್ಯ ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರ ಪ್ರತಿದಿನ ಧಾರವಾಹಿ ರೀತಿ ಬರುತ್ತಿದೆ. ಹಾಸನ ಜಿಲ್ಲೆಯಲ್ಲೂ ಸಣ್ಣಪುಟ್ಟ ಸಮಸ್ಯೆಗಳಿದ್ದು ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ.

ನಾನು ಮಂಡ್ಯ ಟಿಕೆಟ್ ಆಕಾಂಕ್ಷಿಯಲ್ಲ : ನಿಖಿಲ್ ಕುಮಾರಸ್ವಾಮಿ

ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು ನರೇಂದ್ರಮೋದಿ ಅವರು 3ನೇ ಬಾರಿ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಯುವಕರಾಗಿದ್ದು, ಬಿರುಸಿನಲ್ಲಿ ಮಾತನಾಡುತ್ತಾರೆ. ಕುಳಿತು ಮಾತುಕತೆ ನಡೆಸಿ ಸರಿಪಡಿಸೋಣ. ಒಂದು ವೇಳೆ ಪ್ರೀತಂ ಗೌಡ ಅವರನ್ನೇ ನಿಲ್ಲಿಸಬೇಕೆಂಬ ಆಸೆ ಇದ್ದರೆ ಆ ಬಗ್ಗೆಯೂ ಚರ್ಚೆ ಮಾಡೋಣ. ನಾವು ಅವರು ಅಣ್ಣತಮ್ಮಂದಿರ ತರ ಹೋಗಬೇಕಲ್ಲವೇ ಎಂದರು.

RELATED ARTICLES

Latest News