Friday, September 20, 2024
Homeರಾಜಕೀಯ | Politicsಮೈತ್ರಿಗೆ ಜನಾರ್ಶೀವಾದ ಮಾಡಿದ್ದಾರೆ : ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ

ಮೈತ್ರಿಗೆ ಜನಾರ್ಶೀವಾದ ಮಾಡಿದ್ದಾರೆ : ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು, ಜೂ.22– ಬಿಜೆಪಿ-ಜೆಡಿಎಸ್‌‍ ಮೈತ್ರಿ ಯನ್ನು ರಾಜ್ಯದ ಜನತೆ ಮುಕ್ತ ಮನಸ್ಸಿನಿಂದ ಒಪ್ಪಿ ಆಶೀರ್ವಾದ ಮಾಡಿದ್ದಾ ರೆಂದು ಕೇಂದ್ರ ಉಕ್ಕು ಹಾಗೂ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬಿಜೆಪಿ-ಜೆಡಿಎಸ್‌‍ ಸಂಸದರ ಸನಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ 2006ರಲ್ಲಿ ಬಿಜೆಪಿ-ಜೆಡಿಎಸ್‌‍ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಅಂದಿನ ಮೈತ್ರಿ ಮುರಿದು ಬೀಳದೆ ಮುಂದುವರೆದಿದ್ದರೆ ಇಂದು ರಾಜ್ಯದಲ್ಲಿ ಕಾಂಗ್ರೆಸ್‌‍ ಅಧಿಕಾರದಲ್ಲಿ ಇರುತ್ತಿರಲಿಲ್ಲ ಎಂದರು.

ಬಿಜೆಪಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ರಾಜ್ಯದ ಜನರಿಗೆ ನಾನು ಹೆಚ್ಚು ಪರಿಚಯವಾಗಲು ಸಾಧ್ಯವಾಯಿತು. 2006ರ ನಮ ಮೈತ್ರಿ ಸರ್ಕಾರವು ಚೆನ್ನಾಗಿ ಅಧಿಕಾರ ನಡೆಸುತ್ತಿತ್ತು. ಆದರೆ ಕೆಲವರ ಕುತಂತ್ರದಿಂದ ಅಂದು ನನ್ನನ್ನು ಗೊಂದಲಕ್ಕೀಡು ಮಾಡಿದ್ದರು. ಇದರಿಂದಾಗಿ ಮೈತ್ರಿ ಮುರಿದು ಬಿದ್ದಿತ್ತು ಎಂದರು.

ಲೋಕಸಭಾ ಚುನಾವಣೆ ಪೂರ್ವ ಮೈತ್ರಿಯಿಂದಾಗಿ ಬಿಜೆಪಿ ಮತ್ತು ಜೆಡಿಎಸ್‌‍ನವರು ಅತ್ಯಂತ ವಿಶವಾಸದಿಂದ ಇದ್ದೇವೆ. ಎರಡು ಪಕ್ಷಗಳ ನಡುವಿನ ಹೊಂದಾಣಿಕೆ ಸ್ವಾಭಾವಿಕವಾಗಿ ಆಗಿದೆ ಎಂದು ಹೇಳಿದರು.ಪ್ರಧಾನಿ ನರೇಂದ್ರಮೋದಿ ಅವರು 3ನೇ ಬಾರಿಗೆ ರಾಷ್ಟ್ರದ ನಾಯಕತ್ವವನ್ನು ವಹಿಸಿರುವುದು ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ ಅವರು ಈ ವಯಸ್ಸಿನಲ್ಲೂ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಿ ಎನ್‌ಡಿಎ ಅಭ್ಯರ್ಥಿಗಳ ಗೆಲುವಿಗೆ ಸಹಕಾರ ನೀಡಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ಕುಮಾರಸ್ವಾಮಿ ತಿಳಿಸಿದರು.

ಕಳೆದ 2018ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ಬಿಜೆಪಿ ಜೊತೆ ಸೇರಿ ಸರ್ಕಾ ರಚನೆ ಮಾಡಬೇಕೆಂದು ಮನಸ್ಸಿತ್ತು. ಆದರೆ ಕಾಂಗ್ರೆಸ್‌‍ ಜೊತೆ ಸರ್ಕಾರ ಮಾಡಬೇಕಾಯಿತು ಎಂದರು.

ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 26ರಿಂದ 27 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದವು.
ಎರಡು ಪಕ್ಷಗಳ ನಿಷ್ಟಾವಂತ ಕಾರ್ಯಕರ್ತರ ಪರಿಶ್ರಮದಿಂದಾಗಿ 19 ಕ್ಷೇತ್ರಗಳಲ್ಲಿ ಜಯಗಳಿಸಿದ್ದೇವೆ ಎಂದು ಹೇಳಿದರು.

RELATED ARTICLES

Latest News