Tuesday, October 22, 2024
Homeರಾಜಕೀಯ | Politicsಎಚ್ಡಿಕೆ ವಿರುದ್ಧ ಸಚಿವ ಚೆಲುವರಾಯಸ್ವಾಮಿ ಆಕ್ರೋಶ

ಎಚ್ಡಿಕೆ ವಿರುದ್ಧ ಸಚಿವ ಚೆಲುವರಾಯಸ್ವಾಮಿ ಆಕ್ರೋಶ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಜವಾಬ್ದಾರಿ ಸ್ಥಾನದಲ್ಲಿದ್ದು, ಪದೇಪದೇ ರಾಜ್ಯಸರ್ಕಾರ ಪತನಗೊಳ್ಳಲಿದೆ ಎಂದು ಹೇಳಿಕೆ ನೀಡುವುದು ಅಕ್ಷಮ್ಯ ಎಂದು ಕೃಷಿ

ಬೆಂಗಳೂರು, ಅ.21- ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಜವಾಬ್ದಾರಿ ಸ್ಥಾನದಲ್ಲಿದ್ದು, ಪದೇಪದೇ ರಾಜ್ಯಸರ್ಕಾರ ಪತನಗೊಳ್ಳಲಿದೆ ಎಂದು ಹೇಳಿಕೆ ನೀಡುವುದು ಅಕ್ಷಮ್ಯ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ 123 ಸ್ಥಾನಗಳಲ್ಲಿ ಗೆಲ್ಲದೇ ಇದ್ದರೆ, ತಾವು ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುವುದಾಗಿ ಹೇಳಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಷ್ಟು ಸ್ಥಾನ ಗೆದ್ದಿದ್ದಾರೆ, ಏಕೆ ಈವರೆಗೂ ಪಕ್ಷವನ್ನು ವಿಸರ್ಜನೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳನ್ನು ರಾಜ್ಯದ ಜನ ಗೆಲ್ಲಿಸಿದ್ದಾರೆ. ಅಂತಹ ಸರ್ಕಾರವನ್ನು ಪದೇ ಪದೇ ಪತನವಾಗಲಿದೆ ಎಂದು ಹೇಳುವುದು ಅವರ ಘನತೆಗೆ ಸರಿಯಲ್ಲ. ನಮ ಸರ್ಕಾರ ಮೊದಲ ಸಚಿವ ಸಂಪುಟ ಸಭೆ ನಡೆದ ದಿನದಿಂದಲೂ ಸರ್ಕಾರ ಪತನವಾಗುತ್ತದೆ ಎಂದು ಹೇಳುತ್ತಲೇ ಬಂದಿದ್ದಾರೆ.

ಈ ಹಿಂದೆ ಜೆ.ಎಚ್.ಪಟೇಲ್ ಅವರು ಸರ್ಕಾರದ ವಿಚಾರವಾಗಿ ನೀಡಿದ್ದ ಹೇಳಿಕೆಯನ್ನು ಕುಮಾರಸ್ವಾಮಿ ಸರಿಸಿಕೊಳ್ಳಲಿ ಎಂದರು.ಕಾಂಗ್ರೆಸ್ ಪಕ್ಷ 136 ಶಾಸಕರ ಸಂಖ್ಯಾಬಲದೊಂದಿಗೆ ಸದೃಢವಾಗಿವೆ. ಅತಂತ್ರದಲ್ಲಿರುವುದು ಕೇಂದ್ರ ಸರ್ಕಾರ. ಅಲ್ಲಿ ಸಂಖ್ಯಾಬಲದ ಕೊರತೆ ಇದೆ. ಯಾವಾಗ ಏನು ಬೇಕಾದರೂ ಆಗಬಹುದು.

ಮೊದಲು ಕುಮಾರಸ್ವಾಮಿ ತಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳುವತ್ತ ಗಮನ ಹರಿಸಲಿ ಎಂದರು.ಕಾಂಗ್ರೆಸ್ ಸರ್ಕಾರ ಆಂತರಿಕ ಬಂಡಾಯದಿಂದಲೇ ಪತನವಾಗುತ್ತದೆ ಎಂದು ಕುಮಾರಸ್ವಾಮಿ ಹೇಳುತ್ತಿರುವುದು ಚಪಲಕ್ಕಾಗಿ. ನಮ ಪಕ್ಷದ ಬಂಡಾಯ ಶಾಸಕರಲ್ಲ. ಕುಮಾರಸ್ವಾಮಿಯವರ ಮನೆಯಲ್ಲಿಯೇ ಇದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಈ ರೀತಿ ಬಾಲಿಷ ಹೇಳಿಕೆಗಳನ್ನು ಕೇಂದ್ರ ಸಚಿವರು ನೀಡಬಾರದು. ಅವರು ಏನಾದರೂ ಮಾತನಾಡಿದರೆ ಅದು ವಾರಗಟ್ಟಲೇ ಚರ್ಚೆಯಾಗಬೇಕು. ಜನಪರವಾಗಿಯೂ ಇರಬೇಕು ಎಂದು ಸಲಹೆ ನೀಡಿದರು.

ಉಪಚುನಾವಣೆಗಳ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಎನ್ಡಿಎ ಮೈತ್ರಿಕೂಟದಲ್ಲಿ ಭಿನ್ನಮತವಿದೆ. ಇದು ನಮಗೆ ಗೊತ್ತಿರಲಿಲ್ಲ. ಜೆಡಿಎಸ್-ಬಿಜೆಪಿಯವರಿಗೆ ಮೈತ್ರಿ ಮಾಡಿಕೊಳ್ಳಿ ಎಂದು ನಾವು ಹೇಳಿರಲಿಲ್ಲ. ಚುನಾವಣೆ ಎದುರಿಸುವುದಷ್ಟೇ ನಮ ಗಮನ. ಅವರ ಆಂತರಿಕ ವಿಚಾರಗಳು ನಮಗೆ ಸಂಬಂಧಪಟ್ಟಿದ್ದಲ್ಲ. ನಿನ್ನೆ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರ ಸಭೆ ನಡೆಸಿ ಉಪಚುನಾವಣೆ ಮತ್ತು ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಿದರು.

RELATED ARTICLES

Latest News