Wednesday, September 11, 2024
Homeರಾಷ್ಟ್ರೀಯ | Nationalವೈದ್ಯರ ಸುರಕ್ಷತೆಗಾಗಿ ರಚಿಸಿರುವ ಕಾರ್ಯಪಡೆಯ ಕಾರ್ಯಚರಣೆ ರೆಡಿ

ವೈದ್ಯರ ಸುರಕ್ಷತೆಗಾಗಿ ರಚಿಸಿರುವ ಕಾರ್ಯಪಡೆಯ ಕಾರ್ಯಚರಣೆ ರೆಡಿ

Health Ministry To Set Up National Task Force For Safety Of Doctors

ನವದೆಹಲಿ,ಆ.22- ವೈದ್ಯಕೀಯ ವತ್ತಿಪರರ ಸುರಕ್ಷತೆಗಾಗಿ ಸುಪ್ರೀಂ ಕೋರ್ಟ್‌ ರಚಿಸಿರುವ ರಾಷ್ಟ್ರೀಯ ಕಾರ್ಯಪಡೆ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮೆಮೊರಾಂಡಮ್‌ ಅನ್ನು ಬಿಡುಗಡೆ ಮಾಡಿದೆ.

ಆ.20 ರಂದು ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ಅನುಸರಿಸಿ ಅದರ ಅಧ್ಯಕ್ಷರನ್ನು ರಚಿಸಲಾಗಿರುವುದರಿಂದ ಸಮಿತಿಯು ಭಾರತ ಸರ್ಕಾರದ ಕ್ಯಾಬಿನೆಟ್‌ ಕಾರ್ಯದರ್ಶಿಯ ನೇತತ್ವದಲ್ಲಿರುತ್ತದೆ.14-ಸದಸ್ಯ ಕಾರ್ಯಪಡೆಯು ಪದನಿಮಿತ್ತ ಸದಸ್ಯರು ಮತ್ತು ತಜ್ಞರನ್ನು ಒಳಗೊಂಡಿರುತ್ತದೆ. ಸರ್ಕಾರದ ಕ್ಯಾಬಿನೆಟ್‌ ಕಾರ್ಯದರ್ಶಿಗಳು ಸಮಿತಿಯ ಅಧ್ಯಕ್ಷರಾಗಿರುತ್ತಾರೆ.

ಗಹ ಕಾರ್ಯದರ್ಶಿ, ಭಾರತ ಸರ್ಕಾರದ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸದಸ್ಯ ಕಾರ್ಯದರ್ಶಿ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರು, ರಾಷ್ಟ್ರೀಯ ಪರೀಕ್ಷಾ ಮಂಡಳಿ ಅಧ್ಯಕ್ಷರು, ಸರ್ಜನ್‌ ವೈಸ್‌‍ ಅಡಿರಲ್‌ ಆರ್ತಿ ಸರಿನ್‌, ಡೈರೆಕ್ಟರ್‌ ಜನರಲ್‌ ಮೆಡಿಕಲ್‌ ಸರ್ವಿಸಸ್‌‍ (ನೌಕಾಪಡೆ), ಡಾ ಡಿ ನಾಗೇಶ್ವರ ರೆಡ್ಡಿ, ಏಷ್ಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಗ್ಯಾಸ್ಟ್ರೋಎಂಟರಾಲಜಿ ಆಸ್ಪತ್ರೆಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಹೈದರಾಬಾದ್‌‍, ದೆಹಲಿಯ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌‍ (ಏಮ್ಸ್‌‍) ನಿರ್ದೇಶಕ ಡಾ.ಎಂ.ಶ್ರೀನಿವಾಸ್‌‍, ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿವ್ಹಾನ್ಸ್ ) ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ, ಅಖಿಲ ಭಾರತ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಗೋವರ್ಧನ್‌ ದತ್‌ ಪುರಿ ಮತ್ತಿತರ ಗಣ್ಯರು ಸಮತಿಯ ಸದಸ್ಯರಾಗಿರುತ್ತಾರೆ.

ಎನ್‌ಟಿಎಫ್‌ ಮೂರು ವಾರಗಳಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸಬೇಕು ಮತ್ತು ಆ.20 ರಂದು ಭಾರತದ ಸುಪ್ರೀಂ ಕೋರ್ಟ್‌ನ ಆದೇಶದ ದಿನಾಂಕದಿಂದ ಎರಡು ತಿಂಗಳೊಳಗೆ ಅಂತಿಮ ವರದಿಯನ್ನು ಸಲ್ಲಿಸಬೇಕು ಎಂದು ಕಚೇರಿ ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪ್ರಯಾಣದ ವ್ಯವಸ್ಥೆಗಳು, ವಾಸ್ತವ್ಯ ಮತ್ತು ಕಾರ್ಯದರ್ಶಿಯ ನೆರವು ಸೇರಿದಂತೆ ವ್ಯವಸ್ಥಾಪನಾ ಬೆಂಬಲವನ್ನು ಒದಗಿಸುತ್ತದೆ ಮತ್ತು ಸದಸ್ಯರ ಪ್ರಯಾಣ ವೆಚ್ಚಗಳು ಮತ್ತು ಇತರ ಸಂಬಂಧಿತ ವೆಚ್ಚಗಳನ್ನು ಭರಿಸುತ್ತದೆ ಎಂದು ಅದು ಹೇಳಿದೆ.

RELATED ARTICLES

Latest News