Tuesday, January 21, 2025
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruಹೃದಯವಿದ್ರಾವಕ ಘಟನೆ : ಅಪ್ಪನ ಸಾವಿನ ಸುದ್ದಿ ಮುಚ್ಚಿಟ್ಟು ಮಗಳಿಗೆ ಮದುವೆ

ಹೃದಯವಿದ್ರಾವಕ ಘಟನೆ : ಅಪ್ಪನ ಸಾವಿನ ಸುದ್ದಿ ಮುಚ್ಚಿಟ್ಟು ಮಗಳಿಗೆ ಮದುವೆ

Heartbreaking incident: Daughter gets married when father's death

ಚಿಕ್ಕಮಗಳೂರು,ಜ.21- ಜಿಲ್ಲೆಯ ತರೀಕೆರೆಯಲ್ಲೊಂದು ಹೃದಯವಿದ್ರಾವಕ ಘಟನೆ ಜರುಗಿದ್ದು, ಈ ಘಟನೆ ಕೇಳಿದವರ ಹೃದಯ ಮಮ್ಮಲ ಮರಗುತ್ತದೆ, ಕಂಬನಿ ಮಿಡಿಯುವಂತೆ ಮಾಡುತ್ತದೆ.
ಆಸ್ಪತ್ರೆಯ ಚಿತಾಗಾರದಲ್ಲಿ ಅಪ್ಪನ ಶವ ಇದ್ದರೆ, ಮದುವೆ ಮಂಟಪದಲ್ಲಿ ಮಗಳು ಕುಳಿತಿದ್ದಳು. ಅಪ್ಪ ಸಾವನ್ನಪ್ಪಿದ ವಿಷಯ ತಿಳಿ(ಸದೇ)ಯದೇ ಮಗಳ ಮದುವೆ ನಡೆಯಿತು.

ಮಗಳ ಮದುವೆ ಲಗ್ನಪತ್ರಿಕೆ ಕೊಡಲು ಹೋಗಿದ್ದ ಅಪ್ಪ ಮದುವೆ ಹಿಂದಿನ ದಿನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಗಳಿಗೆ ಹಾಗೂ ಪತ್ನಿಗೆ ವಿಷಯ ತಿಳಿಸದೆ ಮದುವೆ ಸಂಬಂಧಿಕರು ಮದುವೆ ನೆರವೇರಿಸಿದರು.ಚೀಲದ ಪಾಪಣ್ಣನವರ ಮಗ ಚಂದ್ರು(45) ಮೃತ ವ್ಯಕ್ತಿ. ಚಂದ್ರು ಮಗಳು ದೀಕ್ಷಿತಾಳ ಮದುವೆ ನಿಗದಿಯಾಗಿತ್ತು.

ಹುಲಿತಿವಾಪುರಕ್ಕೆ ಲಗ್ನಪತ್ರಿಕೆ ಕೊಡಲು ಹೋಗಿದ್ದ ಚಂದ್ರು ಅವರು ತರೀಕೆರೆಗೆ ವಾಪಸ್‌‍ ಬರುವಾಗ ಅಪಘಾತದಲ್ಲಿ ಮೃತಪಟ್ಟಿದ್ದರು.ಶುಭ ಕಾರ್ಯನಿಲ್ಲಬಾರದು ಎನ್ನುವ ಉದ್ದೇಶದಿಂದ ಅಪ್ಪ ಆಸ್ಪತ್ರೆಯಲ್ಲಿ ಇದ್ದಾರೆ ಎಂದು ತಿಳಿಸಿ ಸಂಬಂಧಿಕರು ಆರತಕ್ಷತೆ-ಮದುವೆ ಮುಗಿಸಿದರು.

ಚಂದ್ರು ಸಾವನ್ನಪ್ಪಿದ್ದ ವಿಷಯ ಪತ್ನಿ-ಮಗಳು ಇಬ್ಬರಿಗೂ ತಿಳಿದಿರಲಿಲ್ಲ. ಮದುವೆ ಕಾರ್ಯಕ್ಕೆ ಓಡಾಡಿ ಸುಸ್ತಾಗಿ ಆಸ್ಪತ್ರೆ ಸೇರಿದ್ದಾರೆ ಎಂದು ಪತ್ನಿ-ಮಗಳು ಭಾವಿಸಿದ್ದರು. ಮದುವೆ ಮುಗಿದ ಬಳಿಕ ಪತ್ನಿಗೆ-ಮಗಳಿಗೆ ಕುಟುಂಬಸ್ಥರು ವಿಷಯ ಮುಟ್ಟಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಬರ ಸಿಡಿಲು ಬಡಿದಂತಾಗಿ ಅಕ್ರಂದನ ಮುಗಿಲು ಮುಟ್ಟಿದೆ. ತರಳಬಾಳು ಕಲ್ಯಾಣ ಮಂಟಪದಲ್ಲಿ ಮದುವೆಯಾದ ಗಂಡು-ಹೆಣ್ಣು ಮನೆಗೆ ಬರುವ ವೇಳೆ ಮನೆಗೆ ತಂದೆಯ ಮೃತದೇಹ ಕೂಡ ಬಂದಿತ್ತು.

ಮನೆಯವರು ಮಗಳ ಮದುವೆಯಾಯಿತು ಎಂದು ಸಂತೋಷ ಪಡಬೇಕೊ ಅಥವಾ ಮನೆಯ ಯಜಮಾನ ಸಾವನಪ್ಪಿದ್ದಾನೆ ಎಂದು ಕಣ್ಣೀರಿಡಬೇಕೊ ತಿಳಿಯದಂತೆ ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದರು.

ಚಂದ್ರು ಅವರಿಗೆ ಮೂವರು ಹೆಣ್ಣು ಮಕ್ಕಳು. ಮೊದಲ ಮಗಳ ಮದುವೆಯಲ್ಲಿ ಕರೋನ ಅಡ್ಡಿ ಬಂತು. ಕುಟುಂಬಸ್ಥರು ಸಂಬಂಧಿಕರಷ್ಟೇ ಪಾಲ್ಗೊಂಡು ಮದುವೆ ಮಾಡಿದ್ದರು. ಹಾಗಾಗಿ ಕೊನೆ ಮಗಳ ಮದುವೆ ಅದ್ದೂರಿಯಾಗಿ ಮಾಡಬೇಕೆಂದು ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.

ಆದರೆ ಮದುವೆಗೆ ಅಪ್ಪ ಇರಲಿಲ್ಲ. ಕುಟುಂಬಸ್ಥರು ಕೊನೆ ಮದುವೆ ಇಷ್ಟಪಟ್ಟು ಕಷ್ಟಪಟ್ಟು ಮದುವೆಗೆ ಸಿದ್ಧತೆ ಮಾಡಿದ್ದಾರೆ. ಮದುವೆ ನಿಲ್ಲಬಾರದು ಎನ್ನುವ ಕಾರಣಕ್ಕೆ ಆಸ್ಪತ್ರೆಯಲ್ಲಿದ್ದಾನೆ, ಚೆನ್ನಾಗಿದ್ದಾನೆ ಎಂದು ಹೇಳಿ ಮದುವೆ ಮುಗಿದ ಮೇಲೆ ವಿಷಯವನ್ನು ತಿಳಿಸಿದ್ದಾರೆ.
ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಮುಗಿಲು ಮುಟ್ಟಿತ್ತು . ಪತ್ನಿ-ಮಗಳ ಆಕ್ರಂದನ ಹೇಳತೀರದಾಗಿತ್ತು.

ಚಂದ್ರು ಅವರ ಕೆಲವು ಸ್ನೇಹಿತರು ಮದುವೆಗೆ ಹೋಗಿರಲಿಲ್ಲ. ಈ ಕರುಳು ಇಂಡುವ ಕಥೆ ಕೇಳಿದ ಜನ ಕೂಡ ದೇವರು ಅತ್ಯಂತ ಕ್ರೂರಿ ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು ಎಂದು ದೇವರಿಗೆ ಹಿಡಿ ಶಾಪ ಹಾಕಿದ್ದಾರೆ. ಘಟನೆ ಸಂಬಂದ ತರೀಕೆರೆ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News