Tuesday, July 23, 2024
Homeರಾಜ್ಯನಿರಂತರ ಮಳೆಯಿಂದ ರಾಜ್ಯದ ಜಲಾಶಯಗಳಿಗೆ ಜೀವಕಳೆ

ನಿರಂತರ ಮಳೆಯಿಂದ ರಾಜ್ಯದ ಜಲಾಶಯಗಳಿಗೆ ಜೀವಕಳೆ

ಬೆಂಗಳೂರು, ಜು. 9- ನಿರಂತರ ಬೀಳುತ್ತಿರುವ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟವೂ ಹೆಚ್ಚಾಗುತ್ತಿದೆ. ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ಶೇ.39ರಷ್ಟು ನೀರು ಸಂಗ್ರಹವಾಗಿದೆ.ಮುಂಗಾರು ಮಳೆ ಕೈಕೊಟ್ಟಿದ್ದ ಪರಿಣಾಮ ಕಳೆದ
ವರ್ಷ ಇದೇ ಅವಧಿಯಲ್ಲಿ ಎಲ್ಲಾ ಜಲಾಶಯಗಳಲ್ಲಿ 196.87ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಆದರೆ, ಈ ವರ್ಷ 349.50 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಅಂದರೆ, 153 ಟಿಎಂಸಿ ಅಡಿಯಷ್ಟು ಹೆಚ್ಚು ನೀರಿದೆ.

ಕಾವೇರಿ ಜಲಾನಯನ ಭಾಗದಲ್ಲಿ ಒಳಹರಿವು ಇಳಿಮುಖವಾಗುತ್ತಿದ್ದರೆ, ಕೃಷ್ಣಾ ಕೊಳ್ಳ ಹಾಗೂ ಜಲ ವಿದ್ಯುತ್ ಉತ್ಪಾದಿಸುವ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ಕಾವೇರಿ ನದಿಪಾತ್ರದ ಜಲಾಶಯಗಳಿಗೆ ಶೇ.60ರಷ್ಟು ನೀರು ಸಂಗ್ರಹವಾಗಿದೆ.

ಭರ್ತಿಯತ್ತ ಕಬಿನಿ ಜಲಾಶಯ: ಕಬಿನಿ ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ ಅಡಿಯಷ್ಟಿದ್ದು, ಇಂದು 18.52 ಟಿಎಂಸಿ ಅಡಿಯಷ್ಟಿದೆ. ಕಳೆದ ವರ್ಷ ಕೇವಲ 9.99 ಟಿಎಂಸಿ ಅಡಿಯಷ್ಟಿತ್ತು. ಒಳಹರಿವು 6 ಸಾವಿರ ಕ್ಯುಸೆಕ್‌್ಸಗಿಂತ ಹೆಚ್ಚಿದ್ದು, 2000 ಕ್ಯುಸೆಕ್‌್ಸ ಹೊರ ಹರಿವಿದೆ.

ಹಾರಂಗಿ ಜಲಾಶಯದಲ್ಲಿ ಶೇ.68ರಷ್ಟು ನೀರಿದೆ.ಒಳಹರಿವು ಕೇವಲ ಎರಡು ಸಾವಿರದಷ್ಟಿದೆ. ಗರಿಷ್ಠ ಮಟ್ಟ ತಲುಪಲು ಇನ್ನೂ 3 ಟಿಎಂಸಿಯಷ್ಟು ನೀರು ಬೇಕಿದೆ. ಹೇಮಾವತಿ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ 3 ಟಿಎಂಸಿಯಷ್ಟು ಹೆಚ್ಚು ನೀರಿದೆ. ಈಗ ಶೇ.51ರಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಒಳಹರಿವು 6 ಸಾವಿರ ಕ್ಯುಸೆಕ್‌್ಸಗೂ ಹೆಚ್ಚಿದೆ.

ಜೀವನಾಡಿ ಕೆಆರ್ಎಸ್ ಜಲಾಶಯದಲ್ಲಿ ಶೇ.52ರಷ್ಟು ನೀರು ಸಂಗ್ರಹವಾಗಿದೆ. ಒಳಹರಿವು 6 ಸಾವಿರ ಕ್ಯುಸೆಕ್‌್ಸಗೂ ಹೆಚ್ಚಿದೆ. 49.45 ಟಿಎಂಸಿ ಸಾಮರ್ಥ್ಯವಿರುವ ಈ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ದುಪ್ಪಟ್ಟು ನೀರು ಸಂಗ್ರಹವಾಗಿದೆ.

ಜಲ ವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ ಜಲಾಶಯಕ್ಕೆ 23 ಸಾವಿರ ಕ್ಯುಸೆಕ್‌್ಸಗೂ ಹೆಚ್ಚು ಹಾಗೂ ಸೂಪ ಜಲಾಶಯಕ್ಕೆ 19 ಸಾವಿರ ಕ್ಯುಸೆಕ್‌್ಸಗೂ ಅಧಿಕ ಒಳಹರಿವು ಇದೆ. ಲಿಂಗನಮಕ್ಕಿ, ಸೂಪಾ , ವಾರಾಹಿ ಜಲಾಶಯಗಳಿಗೆ ಒಟ್ಟು 46 ಸಾವಿರಕ್ಕೂ ಹೆಚ್ಚು ಕ್ಯುಸೆಕ್‌್ಸ ಒಳಹರಿವು ಇದೆ. ಶೇ.28ರಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ ದುಪ್ಪಟ್ಟು ನೀರು ಈ ಜಲಾಶಯಗಳಲ್ಲಿದೆ.

ಕೃಷ್ಣಾ ಕೊಳ್ಳದ ಆಲಮಟ್ಟಿ ಜಲಾಶಯಕ್ಕೆ 78 ಸಾವಿರ ಕ್ಯುಸೆಕ್‌್ಸ ಅಧಿಕ ಪ್ರಮಾಣದ ನೀರು ಬರುತ್ತಿದೆ. ಶೇ.58ರಷ್ಟು ನೀರು ಸಂಗ್ರಹವಾಗಿದೆ. ತುಂಗಾಭದ್ರಾ ಜಲಾಶಯಕ್ಕೆ 23 ಸಾವಿರ ಕ್ಯುಸೆಕ್‌್ಸಗೂ ಅಧಿಕ ಹಾಗೂ ಘಟಪ್ರಭಾ, ಜಲಾಶಯಕ್ಕೆ 25 ಸಾವಿರ ಕ್ಯುಸೆಕ್‌್ಸ ಹೆಚ್ಚು ಪ್ರಮಾಣದ ಒಳಹರಿವಿದೆ.

ಕೃಷ್ಣಾ ಕೊಳ್ಳದ 7 ಜಲಾಶಯಗಳಲ್ಲಿ ಶೇ.40ರಷ್ಟು ನೀರು ಸಂಗ್ರಹವಾಗಿದ್ದು, ಒಟ್ಟು 1.43 ಲಕ್ಷ ಕ್ಯುಸೆಕ್‌್ಸಗೂ ಅಧಿಕ ಪ್ರಮಾಣದ ಒಳಹರಿವು ಇದೆ. ಒಟ್ಟಾರೆ ರಾಜ್ಯದ ಜಲಾಶಯಗಳ ನೀರಿನ ಸಂಗ್ರಹ ಪ್ರಮಾಣ ಸಮಾಧಾನಕರವಾಗಿದೆ.

RELATED ARTICLES

Latest News