Wednesday, May 1, 2024
Homeರಾಜ್ಯಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ನಿವಾಸಕ್ಕೆ ಮಹಿಳಾ ಕಾರ್ಯಕರ್ತರ ಮುತ್ತಿಗೆ

ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ನಿವಾಸಕ್ಕೆ ಮಹಿಳಾ ಕಾರ್ಯಕರ್ತರ ಮುತ್ತಿಗೆ

ಬೆಳಗಾವಿ,ಏ.14- ಬೆಳಗಾವಿ ಲೋಕಸಭಾ ಚುನಾವಣಾ ಕಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಬಿಜೆಪಿಯ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರ ನಿವಾಸಕ್ಕೆ ಮಹಿಳಾ ಕಾರ್ಯಕರ್ತರು ತಡರಾತ್ರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಬೆಳಗಾವಿಯ ಹಿಂಡಲಗದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಕ್ಷದ ನಾಯಕರ ಸಮ್ಮುಖದಲ್ಲಿ ಮಾತನಾಡಿದ ಸಂಜಯ್ ಪಾಟೀಲ್, ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರು.

ಇದರಿಂದ ಮಹಿಳಾ ಸಮುದಾಯಕ್ಕೆ ಅಪಮಾನವಾಗಿದೆ. ಸಂಜಯ್ ಪಾಟೀಲ್ ಈ ಮೊದಲು ಮೂರ್ನಾಲ್ಕು ಬಾರಿ ಇದೇ ರೀತಿಯ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ ಎಂದು ಮಹಿಳಾ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ತಡರಾತ್ರಿಯವರೆಗೂ ಸಂಜಯ್ ಪಾಟೀಲ್ ಮನೆ ಮುಂದೆ ಪ್ರತಿಭಟನೆ ನಡೆಸಿದ ಮಹಿಳಾ ಕಾರ್ಯಕರ್ತರು, ಸಂಯಜ್ ಪಾಟೀಲ್ ಮನೆಯಿಂದ ಹೊರಗೆ ಬಂದು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಸಚಿವರ ವಿರುದ್ಧ ನಿಂದನೆ ಮಾಡಿದ್ದಕ್ಕೆ ಕ್ಷಮೆ ಸಂಜಯ್ ಪಾಟೀಲ್ ಕ್ಷಮೆ ಕೇಳಬೇಕು. ಪೊಲೀಸರು ಮಾಜಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸೀರೆ, ಬಳೆ, ಹೂವುಗಳನ್ನು ಸಂಜಯ್ ಪಾಟೀಲ್ ಭಾವಚಿತ್ರಕ್ಕೆ ತೊಡಿಸಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆಯರ ಪ್ರತಿಭಟನೆಯನ್ನು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಸಂಜಯ್‍ಪಾಟೀಲ್‍ರವರ ಆಪ್ತನಿಗೆ ಪ್ರತಿಭಟನಾ ನಿರತ ಮಹಿಳೆಯರು ಕಪಾಳ ಮೋಕ್ಷ ಮಾಡಿದ್ದಾರೆ. ಬೆಳಗಾವಿಯ ಡಿಸಿಪಿ ರೋಹನ್ ಜಗದೀಶ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರ ಮನವೊಲಿಕೆ ಮಾಡಿದರು.

ಏನಿದು ಘಟನೆ: ಶನಿವಾರ ಹಿಂಡಲಗಾದಲ್ಲಿ ನಡೆದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಸಂಜಯ ಪಾಟೀಲ್, ‘ಅಕ್ಕನ ಕ್ಷೇತ್ರದಲ್ಲಿಯೇ ಬಿಜೆಪಿ ಸಮಾವೇಶದಲ್ಲಿ ಅಪಾರ ಸಂಖ್ಯೆಯ ಮಹಿಳೆಯರು ಸೇರಿದ್ದಾರೆ. ಅಕ್ಕ ನಿದ್ದೆಗೆಡುವುದು ಗ್ಯಾರಂಟಿ’ .‌ ಅವರಿಂದು ನಿದ್ದೆ ಮಾತ್ರೆ ತೆಗೆದುಕೊಳ್ಳಬೇಕು ಇಲ್ಲವೇ ಒಂದು ಎಕ್ಸ್‌ಟ್ರಾ ಪೆಗ್ ಹೆಚ್ಚುವರಿ ಕುಡಿಯಬೇಕು’ ಎಂದು ಹೇಳಿದ್ದರು.

RELATED ARTICLES

Latest News